ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಮಲತಾಯಿ ಧೋರಣೆ ಖಂಡಿಸಿ ಸ್ವಾತಂತ್ರ್ಯ ದಿನ ಕರಾಳ ದಿನಾಚರಣೆ
ವಿಜಯಪುರ,ಆ.9:ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಿಗೆ ಅನುದಾನ ನೀಡದೆ ಇರುವ ಸರ್ಕಾರದ ಮಲತಾಯಿ ಧೋರಣೆ ಖಂಡಿಸಿ ಆ.15ರಂದು ನಡೆಯುವ ಸ್ವಾತಂತ್ರ್ಯ ದಿನಾಚರಣೆ ದಿನದಂದು ಕರಾಳ ದಿನವನ್ನು ಆಚರಿಸಲಾಗುವುದು ಎಂದು ಜಿಲ್ಲಾ ಅನುದಾನ ರಹಿತ ಖಾಸಗಿ ಪ್ರಾಥಮಿಕ, ಪ್ರೌಢ ಶಾಲೆಗಳ ಆಡಳಿತ ಮಂಡಳಿಗಳ ಸಂಘದ ಆಧ್ಯಕ್ಷÀ ಬಸವರಾಜ ಪೂಜಾರಿ ತಿಳಿಸಿದ್ದಾರೆ.
ಕೇವಲ ಅವೈಜ್ಞಾನಿಕ ನಿಯಮಗಳನ್ನು ರಚಿಸುವುದೇ ಶಿಕ್ಷಣ ಇಲಾಖೆಯ ಸಾಧನೆಯಾಗಿದೆ. ಈ ಪರಿಸ್ಥಿತಿಯನ್ನು ಖಂಡಿಸಿ, ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು, ಶಿಕ್ಷಕರು ಕಪ್ಪು ಪಟ್ಟಿ ಧರಿಸುವ ಮೂಲಕÀ ಕರಾಳ ದಿನವನ್ನು ಆಚರಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಜಿಲ್ಲೆ, ತಾಲೂಕು ಮಟ್ಟದಲ್ಲಿಯೂ ಹಾಗೂ ಸಾಮಾಜಿಕ ಜಾಲತಾಣದಲ್ಲಿ ನಮ್ಮ ಪ್ರತಿಭಟನೆಯ ಭಿತ್ತಿಪತ್ರ, ಪೋಸ್ಟರ್, ಬ್ಯಾನರ್‍ಗಳ ಮುಖಾಂತರ ಜನಸಾಮಾನ್ಯರಿಗೆ ಸಾರ್ವಜನಿಕರಿಗೆ, ಪೋಷಕರಿಗೆ, ಬುದ್ದಿಜೀವಿಗಳಿಗೆ, ವಿವಿಧ ಇಲಾಖೆಗಳಿಂದ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಜಾಗೃತಿ ಮೂಡಿಸಲಾಗುವುದು, ಸರ್ಕಾರ ನಡೆಸುವ ಶಾಲೆಗಳ, ಅವ್ಯವಸ್ಥೆ ಹಾಗೂ ಮಲತಾಯಿ ಧೋರಣೆಯ ನಿಲುವಿನ ಬಗ್ಗೆ ಬೆಳಕು ಚೆಲ್ಲಲಾಗುವುದು. ಇದಕ್ಕೆ ಬೇಕಾದಂತಹ ನಿರಂತರ ಹೋರಾಟಕ್ಕೆ ಮುಂದಾಗುತ್ತೇವೆ ಎಂದವರು ಹೇಳಿದ್ದಾರೆ.