ವಿದ್ಯುತ್ ಕಂಬಕ್ಕೆ ಲಾರಿ ಡಿಕ್ಕಿ ;10 ಗ್ರಾಮಗಳು ಕಗ್ಗತ್ತಲಲ್ಲಿ
ತಾಳಿಕೋಟೆ:ಆ.9: ತಾಳಿಕೋಟೆ ಪಟ್ಟಣದ ಮೂಲಕ ಚೆಲಿಸುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಬದಿಯಲ್ಲಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಗುರುವಾರರಂದು ರಾತ್ರಿ 9-30 ಗಂಟೆಯ ಸುಮಾರಿಗೆ ನಡೆದಿದೆ.
ಪಟ್ಟಣದ ಮೂಲಕ ವಿಜಯಪುರ ಕಡೆಗೆ ಹೊರಟಿದ್ದ ಲಾರಿಯು ರಾಜ್ಯ ಹೆದ್ದಾರಿಯ 110 ಕೆವಿ ವಿದ್ಯುತ್ ಘಟಕದ ಎದುರಿಗೆ ಗ್ರಾಮೀಣ ಪ್ರದೇಶಗಳಿಗೆ ವಿದ್ಯುತ್ ಪೂರೈಸಲಾಗುವ ವಿದ್ಯುತ್ ಕಂಬಕ್ಕೆ ಚಾಲಕನ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿದ್ದು ಜೋಡು ಕಂಬಗಳು ಮುರಿದು ನೆಲಕ್ಕೆ ಉರುಳಿ ಬಿದ್ದಿವೆ. ಲಾರಿಯು ಕಂಬದಡಿ ಸಿಲುಕಿಕೊಂಡಿದೆ.
ಈ ಲಾರಿ ಅವಘಡದಿಂದ ಮಿಣಜಗಿ, ಬಳಗಾನೂರ, ಕೊಣ್ಣೂರ, ವಡವಡಗಿ, ಚೊಕ್ಕಾವಿ, ತಮದಡ್ಡಿ, ಸಾಸನೂರ, ಮೂಕೀಹಾಳ, ಲಿಂಗದಳ್ಳಿ, ವನಹಳ್ಳಿ, ಮಡಿಕೇಶ್ವರ ಒಳಗೊಂಡು ಇನ್ನಿತರ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ಘಟನಾ ಸ್ಥಳಕ್ಕೆ ಹೆಸ್ಕಾಂ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಬೆಟ್ಟಿ ನೀಡಿ ಪರಿಶೀಲನೆ ಕೈಕೊಂಡಿದ್ದಾರೆ.