ಶ್ರಾವಣ ಮಾಸ ನಡುವಿನ ಸೋಮವಾರ ಗುಡ್ಡದ ಜಾತ್ರೆ ಪೂರ್ವ ಸಿದ್ಧತಾ ಸಭೆ
ಕಾಳಗಿ:ಆ.9: ತಾಲೂಕಿನ ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟಿರುವ ಸುಕ್ಷೇತ್ರ ರೇವಗ್ಗಿ (ರಟಕಲ್) ಶ್ರೀ ರೇವಣಸಿದ್ದೇಶ್ವರ ದೇವಸ್ಥಾನದಲ್ಲಿ ಪ್ರತಿ ವರ್ಷ
ಶ್ರಾವಣ ಮಾಸ ನಡುವಿನ ಸೋಮವಾರ ಸಾಂಪ್ರದಾಯಿಕವಾಗಿ ನಡೆಯುವ ಗುಡ್ಡದ ಜಾತ್ರೆ ಪೂರ್ವ ಸಿದ್ಧತಾ ಸಭೆಯು ಸೇಡಂ ಸಹಾಯ ಆಯುಕ್ತ ಹಾಗೂ ದೇವಸ್ಥಾನ ಅಧ್ಯಕ್ಷರೂ ಆಗಿರುವ ಪ್ರಭುರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆಸಲಾಯಿತು.
ಜಾತ್ರಾ ಮಹೋತ್ಸವದ ಪೂರ್ವಸಿದ್ಧತಾ ಸಭೆಯಲ್ಲಿ ಭಾಗವಹಿಸಿದ ಸದ್ಭಕ್ತರನ್ನುದ್ದೇಶಿಸಿ ಮಾತನಾಡಿದ ಸೇಡಂ ಸಹಾಯಕ ಆಯುಕ್ತ ಹಾಗೂ ದೇವಸ್ಥಾನ ಅಧ್ಯಕ್ಷರೂ ಆಗಿರುವ ಪ್ರಭುರೆಡ್ಡಿ ಅವರು ಮಾತನಾಡಿ, ವಿವಿಧ ರಾಜ್ಯಗಳು ಸೇರಿ ಲಕ್ಷಾಂತರ ಭಕ್ತರನ್ನು ಹೊಂದಿರುವ ಈ ದೇವಸ್ಥಾನದಲ್ಲಿ ಬರುವ 19ನೇ ಅಗಸ್ಟ್ 2024ರ ಶ್ರಾವಣ ಮಾಸದ ನಡುವಿನ ಸೋಮವಾರ ಅದ್ಧೂರಿ ಜಾತ್ರಾ ಮಹೋತ್ಸವ ನಡೆಯಲಿದ್ದು, ಜಗದ್ಗುರು ರೇವಣಸಿದ್ದೇಶ್ವರರ ಬೆಳ್ಳಿ ಪಲ್ಲಕ್ಕಿ ಉತ್ಸವ ನೆರವೇರಲಿದೆ ಎಂದು ತಿಳಿಸಿದರು.
ಶಾಂತಿಯುತವಾಗಿ ಜಾತ್ರಾ ಮಹೋತ್ಸವ ಯಶಸ್ವಿಯಾಗಿ ಜರುಗಬೇಕಾದರೆ ಸಾರ್ವಜನಿಕರ ಸಹಕಾರ ತುಂಬಾ ಅಗತ್ಯವಾಗಿದೆ ಎಂದ ಅವರು, ಸ್ಥಳಿಯ ಗ್ರಾಮಸ್ಥರ ಅಭಿಪ್ರಾಯಗಳನ್ನು ಸಂಗ್ರಹಿಸಿದರು.
ವ್ಯವಸ್ಥಿತ ಜಾತ್ರಾ ಮಹೋತ್ಸವಕ್ಕೆ ಕೆಲವು ಸಲಹೆ ಸೂಚನೆಗಳನ್ನು ನೀಡಿದ ಸಾರ್ವಜನಿಕರು, ಪಲ್ಲಕ್ಕಿ ಉತ್ಸವ ಮಾರ್ಗದಲ್ಲಿ ಬಿಗಿ ಪೆÇಲಿಸ್ ಬಂದೋಬಸ್ತ್ ಮಾಡಬೇಕು. ಸ್ವಚ್ಚತೆಗಾಗಿ 50 ಮಹಿಳಾ, 50ಪುರುಷ ಶೌಚಾಲಯ ನಿರ್ಮಾಣ ಮಾಡಬೇಕು.
ಕುಡಿಯುವ ನೀರಿನ ಟ್ಯಾಂಕರಗೆ ನಳಗಳ ಸಂಪರ್ಕ ಮಾಡಬೇಕು, ದೇವಸ್ಥಾನದಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಹಾಳಾದ ಸಿಸಿ ಕ್ಯಾಮರಾ ರಿಪೇರಿ ಮಾಡುವುದು, ಜಾತ್ರಾ ಮಹೋತ್ಸವ ವೇಳೆ ಬಿದ್ದ ಕಸವನ್ನು ನಂತರ ಸ್ವಚ್ಚತೆ ಮಾಡಬೇಕು. ದೇವಸ್ಥಾನದಲ್ಲಿ ಹಾಳಾದ ಕೋಣೆಗಳನ್ನು ದುರಸ್ತಿ ಮಾಡಬೇಕು. ಭಾರಂಬಾವಿ ಪಕ್ಕದಲ್ಲಿ ಬಟ್ಟೆ ಬದಲಾಯಿಸಲು ಕೋಣೆ ನಿರ್ಮಿಸಬೇಕು. ದೇವಸ್ಥಾನ ಆವರಣದ ಬಾರಂಬಾವಿಯಿಂದ ದೇವಸ್ಥಾನ ವರೆಗೆ, ಕಂದಗೂಳ ರೇವಗ್ಗಿ, ಭೆಡಸೂರ, ಮಾವಿನಸೂರ, ಗೊಣಗಿ, ಮುಕರಂಬ, ಅರಣಕಲ್ ಗ್ರಾಮಗಳಿಂದ ದೇವಸ್ಥಾನದ ವರೆಗೆ ಬೀದಿ ದ್ವೀಪ ಹಾಕಬೇಕು.
ದೇವಸ್ಥಾನ ಸುತ್ತಲೂ ಕೆಲ ಭಾಗಗಳಲ್ಲಿ ಹೈ ಮಾಸ್ಕ್ ದ್ವೀಪ ಹಾಕಬೇಕು.
ಗುಡ್ಡದಿಂದ ರೇವಗ್ಗಿ ಗ್ರಾಮದವರೆಗೆ ಪಲ್ಲಕ್ಕಿ ಉತ್ಸವ ದಾರಿಗೆ ವಿದ್ಯುತ್ ವ್ಯವಸ್ಥೆ ಕಲ್ಪಿಸಬೇಕು.
ಜಾತ್ರೆಗೆ ಬರುವ ಭಕ್ತರಿಗಾಗಿ ಚಿಂಚೋಳಿ, ಕಲಬುರಗಿ, ಕಾಳಗಿ, ಡಿಪೆÇೀಗಳಿಂದ ಬಸ್ಸಿನ ಸೌಕರ್ಯ ಕಲ್ಪಿಸುವುದು ಸೇರಿದಂತೆ ಭಕ್ತರು ಸಲಹೆಗಳನ್ನು ನೀಡಿದರು.
ಮದ್ಯ ಮಾರಾಟ ನಿಷೇಧ:
ಜಾತ್ರಾ ಮಹೋತ್ಸವದಲ್ಲಿ ಹಾಗೂ ಸುತ್ತಮುತ್ತಲಿನ ಏಳು ಗ್ರಾಮಗಳಲ್ಲಿ ಎಲ್ಲೆಂದರಲ್ಲಿ ಸರಾಯಿ ಮಾರಾಟ ಜೋರು ನಡೆಯುತ್ತದೆ. ಹಿಗಾಗಿ ಜಾತ್ರಾ ವ್ಯವಸ್ಥೆ ಹದಗೆಡುತ್ತಿದೆ. ಅಂಗಡಿಗಳಲ್ಲಿ ಸರಾಯಿ ಮಾರಾಟ ಹೆಚ್ಚಾಗಿದೆ. ಇದರಿಂದ ಕುಟುಬಗಳು ಬೀದಿಗೆ ಬರುತ್ತಿವೆ ಇದನ್ನು ತಡೆಯುವಂತೆ ಪೆÇಲೀಸ್ ಅಧಿಕಾರಿಗಳು ಖಡಕ್ಕಾಗಿ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಮನವಿ ಮಾಡಿಕೊಂಡರು.
ಇದಕ್ಕೆ ಸ್ಪಂದಿಸಿದ ಆಯುಕ್ತರು, ಸೂಕ್ತ ಕ್ರಮಕೈಗೊಳ್ಳಲು, ಪೆÇೀಲಿಸ್ ಹಾಗೂ ಅಬಕಾರಿ ಇಲಾಖಾ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ತಿಳಿಸಿದರು.
ಕಾಳಗಿ ಸಿಪಿಐ ಜಗದೇವಪ್ಪ ಪಾಳಾ ಮಾತನಾಡಿ, ಶಾಂತಿಯುತವಾಗಿ ಜಾತ್ರೆ ನಡೆಯುವುದಕ್ಕೆ ಬೇಕಾದ ಕ್ರಮಗಳನ್ನು ನಮ್ಮ ಇಲಾಖೆ ಅಚ್ಚುಕಟ್ಟಾಗಿ ನಿಭಾಯಿಸುತ್ತದೆ.
ತಾವು ತಿಳಿಸಿದಹಾಗೆ ಮಧ್ಯ ಮಾರಾಟ, ಜೂಜಾಟ, ಅಕ್ರಮ ಚಟುವಟಿಕೆಗಳಿಗೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇವೆ ಎಂದರು.
ಜಾತ್ರೆಗೆ ಲಕ್ಷಾಂತರ ಭಕ್ತರು ಸೇರುವುದರಿಂದ ಎಚ್ಚರ ವಹಿಸುವುದು ಅಗತ್ಯ.
ವಿನಃ ಕಾರಣ ಪೆÇೀಲಿಸ್ ಬಲವನ್ನು ಪರೀಕ್ಷಿಸ ಬೇಡಿ ಎಂದ ಅವರು, ಕಾನೂನು ಕೈಗೆತ್ತಿಕೊಂಡು, ಜಾತ್ರೆಯಲ್ಲಿ ದುಷ್ಟಶಕ್ತಿ ಪ್ರದರ್ಶಿಸುವರಿಗೆ ತಕ್ಕ ಶಾಸ್ತಿ ನೀಡಲಾಗುವುದು.
ಜಾತ್ರೆಗೆ ಬರುವ ಭಕ್ತರಿಗೆ ತೊಂದರೆ ಆಗದಂತೆ ರಕ್ಷಣೆ ನೀಡಲಾಗುತ್ತದೆ. ವಾಹನಗಳು ಪಾಕಿರ್ಂಗ್ ಮಾಡುವಾಗ ಸವಾರರು ಬೇರೆಯವರಿಗೆ ತೊಂದರೆ ಆಗದಂತೆ ಪಾಕಿರ್ಂಗ್ ಮಾಡಬೇಕು. ಜಾತ್ರಾ ಮಹೋತ್ಸವ ಮುಗಿದ ನಂತರ ಸ್ವಚ್ಚತಾ ಅಭಿಯಾನ ಮಾಡುವುದರ ಮೂಲಕ ಪರಿಸರ ಕಾಪಾಡಿಕೊಳ್ಳುವಂತೆ ತಿಳಿಸಿದರು.
ಸೇಡಂ ಸಹಾಯಕ ಆಯುಕ್ತರು ಹಾಗೂ ದೇವಸ್ಥಾನ ಸಮಿತಿ ಅಧ್ಯಕ್ಷರೂ ಆಗಿರುವ ಪ್ರಭುರೆಡ್ಡಿ, ಸೇಡಂ ಸಹಾಯಕ ಆಯುಕ್ತರ ಕಛೇರಿ ತಹಶಿಲ್ದಾರ ನಾಗನಾಥ ತರಗೆ, ಡಿವೈಎಸ್ಪಿ ಶಂಕರಗೌಡ ಪಾಟೀಲ, ಸಿಪಿಐ ಜಗದೇವಪ್ಪ ಪಾಳ, ಜೆಸ್ಕಾಂ ಎಇಇ ಪ್ರಭು ಮಡ್ಡಿತೊಟ, ಸಂಸ್ಥಾನಿಕರು ಚನ್ನಬಸಪ್ಪ ದೇವರಮನಿ, ಗ್ರೇಡ್-2 ತಹಸೀಲ್ದಾರ ರಾಜೇಶ್ವರಿ, ಪಿಎ??? ತಿಮ್ಮಯ್ಯ ಬಿ.ಕೆ. ಅರಣಕಲ್ ಗ್ರಾಪಂ ಅಧ್ಯಕ್ಷೆ ನಾಗವೇಣಿ ರಾಠೋಡ, ಮುಖಂಡರಾದ ಶಿವರಾಜ ಪಾಟೀಲ ಗೊಣಗಿ, ವೀರಣ್ಣ ಗಂಗಾಣಿ, ಶಂಕರ ಚೌಕ, ರೇವಣಸಿದ್ದ ಬಡಾ, ಶರಣು ಪಾಟೀಲ ಮೊತಕಪಳ್ಳಿ, ಗೌರಿಶಂಕರ ಕಿಣ್ಣಿ, ಶಂಕರ ಹೇರೂರ(ಕೆ), ರೇವಣಸಿದ್ದಪ್ಪ ಕಟ್ಟಿಮನಿ, ಕಂದಾಯ ನೀರಿಕ್ಷಕ ಮಂಜುನಾಥ ಮಹಾರುದ್ರ, ಶರಣಬಸಪ್ಪ ಮಮಶೆಟ್ಟಿ, ರಾಜಶೇಖರ ಗುಡದಾ ದೇವಸ್ಥಾನ ಕಾರ್ಯದರ್ಶಿ ಸದಾಶಿವ ವಗ್ಗೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.