ವಿವಿಧ ಸ್ಪರ್ಧೆಗಳಲ್ಲಿ ಸಾಧನೆಗೈದ ಸುವರ್ಣ ಸೆಂಟ್ರಲ್ ಶಾಲೆ
ಕೋಲಾರ,ಆ.೮- ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮ, ಅವಧೂತ ಪೀಠದ ವತಿಯಿಂದ ಕರ್ನಾಟಕ ರಾಜ್ಮಟ್ಟದ ೧೦ನೇ ಅಂತರಶಾಲಾ ಸಾಮೂಹಿಕ ಭಜನೆ ಗಾಯನ ಸ್ಪರ್ಧೆಯು ದಿನಾಂಕ ೦೪-೦೮-೨೦೨೪ ರಂದು ತಾಲೂಕಿನ ಮದನಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆಯಿತು.
ಈ ಸ್ಪರ್ಧೆಯಲ್ಲಿ ಸುವರ್ಣ ಸೆಂಟ್ರಲ್ ಶಾಲೆಯ ಮಕ್ಕಳು ಭಾಗವಹಿಸಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ದ್ವಿತೀಯ ಬಹುಮಾನವನ್ನು ಮತ್ತು ಪ್ರೌಢಶಾಲೆಯ ವಿದ್ಯಾರ್ಥಿಗಳು ಮೊದಲನೇ ಬಹುಮಾನವನ್ನು ಪಡೆದು ಮೈಸೂರಿನಲ್ಲಿ ಪಡೆಯುವ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.
ಸಾಧನೆಗೈದ ಮಕ್ಕಳನ್ನು ಶಾಲಾ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕ ವೃಂದದವರು ಅಭಿನಂದಿಸಿದ್ದಾರೆ.