ಸರ್ಕಾರಿ ಶಾಲೆಗೆ ಕ್ರೀಡಾ ಪರಿಕರ ವಿತರಣೆ
ಕೋಲಾರ,ಆ.೯- ಕ್ರೆಡಿಟ್ ಆಕ್ಸಿಸ್ ಗ್ರಾಮೀಣ್ ಲಿಮಿಟೆಡ್ ಹಾಗೂ ಕ್ರೆಡಿಟ್ ಅಕ್ಸೆಸ್ ಇಂಡಿಯಾ ಫೌಂಡೇಶನ್ ವತಿಯಿಂದ ಕೋಲಾರ ತಾಲೂಕಿನ ಹುತ್ತೂರು ಗ್ರಾಮದಲ್ಲಿರುವ ಸರ್ಕಾರಿ ಪ್ರೌಢ ಶಾಲೆಗೆ ಕ್ರೀಡಾ ಪರಿಕರಗಳನ್ನು ಇಂದು ಸಿಎಜಿಎಲ್ (ಸಿಎಇಎಪ್) ಗ್ರಾಮೀಣ್ ಕೂಟದಿಂದ ಎಫ್.ಎಲ್.ಸಿ ವಿಶಾಲಾಕ್ಷಿ ಮತ್ತು ಎಲ್‌ಡಿಎಂ ಸುಬ್ಬನಾಯಕ್‌ರ ಕಡೆಯಿಂದ ವಿತರಣೆ ಮಾಡಿಸಲಾಯಿತು.
ಎಫ್.ಎಲ್.ಸಿ ವಿಶಾಲಾಕ್ಷಿ, ಗ್ರಾಮೀಣ ಕೂಟದ ವಲಯ ವ್ಯವಸ್ಥಾಪಕ ಪ್ರಕಾಶ್ ಮಾತನಾಡಿ, ಗ್ರಾಮೀಣ್ ಕೂಟ ಬೆಳೆದು ಬಂದ ದಾರಿ ಮತ್ತು ಪ್ರಸ್ತುತ ನಿರ್ವಹಿಸುತ್ತಿರುವ ಕಾರ್ಯ ಚಟುವಟಿಕೆಗಳ ಬಗ್ಗೆ ಮತ್ತದರ ಸದ್ವಿನಿಯೋಗದ ಬಗ್ಗೆ ಸುವಿಸ್ತಾರವಾಗಿ ತಿಳಿಸಿಕೊಟ್ಟರು.
ಈ ಸಂದರ್ಭದಲ್ಲಿ ಬಿಎಂ ಆನಂದ್ ರಾಜು ಸೇರಿದಂತೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.