ವಿವಿಧ ಶಾಲೆಗಳಿಗೆ ಜಂಟಿ ನಿರ್ದೇಶಕರ ಭೇಟಿ
ಕೋಲಾರ, ಆ,೯- ಕೋಲಾರ ಜಿಲ್ಲೆಯ ವಿವಿಧ ವಸತಿ ಶಾಲೆಗಳು ಹಾಗೂ ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಅತ್ಯುತ್ತಮ ಪ್ರಗತಿ ಸಾಧಿಸುವ ನಿಟ್ಟಿನಲ್ಲಿ ಅಧಿಕಾರಿಗಳು ನಿಯಮಿತವಾಗಿ ವಸತಿ ಶಾಲೆಗಳು ಹಾಗೂ ವಿದ್ಯಾರ್ಥಿನಿಲಯಗಳಿಗೆ ಭೇಟಿ ನೀಡಿದ ಸರ್ಕಾರಿ ಕಾಲೇಜು ಶಿಕ್ಷಣ ಇಲಾಖೆಯ ಸಹಾಯಕ ಜಂಟಿ ನಿರ್ದೇಶಕ ಶ್ರೀನಿವಾಸನ್ .ಎಂ.ಅಲ್ಲಿನ ಪ್ರಾಂಶುಪಾಲರು, ವಾರ್ಡನ್ ಹಾಗೂ ಶಿಕ್ಷಕರಿಗೆ ಸೂಕ್ತ ಮಾರ್ಗದರ್ಶನ ನೀಡಲು ಸೂಚಿಸಿದರು.
ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಸಹಾಯಕ ನಿರ್ದೇಶಕರ ಕಛೇರಿ ಸ.ಕ.ಇ ಪ್ರಥಮವಾಗಿ ಭೇಟಿ ನೀಡಿದ ಅವರು ಕಾನೂನು ಪದವೀಧರರಿಗೆ ಇಲಾಖೆಯ ವತಿಯಿಂದ ನೀಡುವ ಶಿಷವೇತನ ಕುರಿತು ಪರಿಶೀಲಿಸಿ ನಂತರ ಸಹಾಯಕ ನಿರ್ದೇಶಕರ ಕಛೇರಿ ತೋಟಗಾರಿಕೆ ಇಲಾಖೆಗೆ ಭೇಟಿನೀಡಿ ಉದ್ಯೋಗ ಖಾತರಿ ಯೋಜನೆಯ ಸಮರ್ಪಕ ಅನುಷನದ ಕುರಿತು ಪರಿಶೀಲಿಸಲಾಯಿತು.
ನಂತರ ತಾಲ್ಲೂಕಿನ ಜೆ. ತಿಮ್ಮಸಂದ್ರ ಗ್ರಾಮದಲ್ಲಿ ಪೊಕ್ಸೋ ಕಾಯ್ದೆಯಡಿ ದೌರ್ಜನ್ಯಕೊಳಗಾದ ಸಂತ್ರಸ್ತ ಹೆಣ್ಣುಮಗುವಿನ ಮನೆಗೆ ಭೇಟಿ ನೀಡಿ ಘಟನೆಯ ಕುರಿತು ಮಾಹಿತಿಯನ್ನು ಪಡೆದು ಕುಟುಂಬದವರಿಗೆ ಸಾಂತ್ವನ ತಿಳಿಸಿದ ಮೇಲೆ ತಾಲ್ಲೂಕಿನಲ್ಲಿ ಸ.ಕ.ಇಲಾಖೆಯ ವತಿಯಿಂದ ನಿರ್ವಹಿಸುತ್ತೀರುವ ವಿವಿಧ ಹಾಸ್ಟೆಲ್ ಗಳಿಗೆ ಭೇಟಿ ನೂತನವಾಗಿ ನೇಮಕಗೊಂಡು ಕರ್ತವ್ಯ ನಿರ್ವಹಿಸುತ್ತೀರುವ ವಾರ್ಡನ್ ಗಳಿಗೆ ಸರ್ಕಾರದ ವತಿಯಿಂದ ನೀಡುವ ಅಕ್ಕಿ ಗೋಧಿ ಹಾಗೂ ವಿವಿಧ ಆಹಾರ ಪದಾರ್ಥಗಳನ್ನು ಗುಣಮಟ್ಟದ ನಿರ್ವಹಣೆ ಮಾಡುವ ಕುರಿತು ಮಾರ್ಗದರ್ಶನವನ್ನು ನೀಡಲಾಯಿತು
ನಾಲ್ಕನೇಯದಾಗಿ ನಿರ್ದೇಶಕರು, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ರವರ ನಿರ್ದೇಶನದಂತೆ ಶ್ರೀನಿವಾಸಪುರ ತಾಲ್ಲೂಕಿನ ಗಂಗನಗಾರಿಪಲ್ಲಿಯ ಏಕಲವ್ಯ ಮಾದರಿ ವಸತಿ ಶಾಲೆಗೆ ಭೇಟಿ ನೀಡಿ ಅಲ್ಲಿನ ಮೂಲಭೂತ ಸೌಕರ್ಯಗಳ ಉನ್ನತೀಕರಣದ ಕುರಿತು ಇಂಜಿನಿಯರ್ ಅವರೊಂದಿಗೆ ಚರ್ಚಿಸಿ ನಂತರ ಶಾಲೆಯ ವಿವಿಧ ರೆಕಾರ್ಡ್ ಹಾಗೂ ರಿಜಿಸ್ಟರ್‌ಗಳ ಸಮರ್ಪಕ ನಿರ್ವಹಣೆ ಕುರಿತು ಪರಿಶೀಲಿಸಿಲಾಯಿತು
ವಿದ್ಯಾರ್ಥಿಗಳಿಗೆ ನೀಡುವ ಉಟೋಪಚಾರವನ್ನು ತಯಾರಿಸಿ ನೀಡುವ ಸಮಯದಲ್ಲಿ ಅನುಸರಿಸ ಬೇಕಾದ ಸ್ವಚ್ಚತಾ ಕ್ರಮಗಳ ಕುರಿತು ಅಲ್ಲಿನ ಅಡುಗೆ ಸಿಬ್ಬಂದಿಗೆ ಅರಿವನ್ನು ಮೂಡಿಸಿ ವಿದ್ಯಾರ್ಥಿಗಳೊಂದಿಗೆ ಅವರ ಮುಂದಿನ ಶೈಕ್ಷಣಿಕ ಕನಸು ಮತ್ತು ಆಶಯಗಳ ಕುರಿತು ಸಮಾಲೋಚನೆಯನ್ನು ನಡೆಸಲಾಯಿತು.