ಮನುಷ್ಯನ ನೋವಿನ ನಿವಾರಣೆಗೆ ಸಾಹಿತ್ಯ ಮುಖ್ಯ
ಸಂಜೆವಾಣಿ ನ್ಯೂಸ್
ಮೈಸೂರು: ಆ.09:- ಮನುಷ್ಯನ ನೋವಿನ ನಿವಾರಣೆಗೆ ಸಾಹಿತ್ಯ ಮುಖ್ಯವಾಗಿದ್ದು, ಕ್ರೌರ್ಯ ತಡೆಯುವ ಅಸ್ತ್ರವಾಗಿದೆ ಎಂದು ಮಹಾರಾಣಿ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ವಿ.ವಸಂತಕುಮಾರ್ ಅಭಿಪ್ರಾಯಪಟ್ಟರು.
ವಿಜಯನಗರದಲ್ಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಗುರುವಾರ ಅಯೋಜಿಸಿದ್ದ ಕಾರ್ಯಕ್ರಮದಲ್ಲಿ ಶ್ರೀಮತಿ ಸರೋಜ ರಾವ್ ಅವರ ಅಂತರಂಗದ ಅಲೆಗಳು (ಕವನ ಸಂಗ್ರಹ) ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಪ್ರತಿಯೊಂದು ಕೃತಿಯೂ ಮನಸ್ಸಿನ ನೋವಿಗೆ ಔಷಧಗಳಾಗಿದ್ದು, ಚಂಚಲ ಮನಸ್ಸುಗಳ ಪರಿವರ್ತನೆ ಮಾಡುತ್ತವೆ. ಇದು ಪುಸ್ತಕ ಓದುವುದರಲ್ಲಿ ತಲ್ಲೀನರಾದರೆ ಮಾತ್ರ ಸಾಧ್ಯವಾಗುತ್ತದೆ. ಸಂಕಟಗಳನ್ನು ಅನುಭವಿಸುವ ತಲ್ಲಣಗಳನ್ನು ದಾಖಲಿಸಲು ಕಾವ್ಯ ಹುಟ್ಟಿಕೊಳ್ಳುತ್ತದೆ. ಸರೋಜ ರಾವ್ ಅವರು ಸಹ ಹೆರಿಗೆ ಸಂದರ್ಭದಿಂದ ಎಲ್ಲಾ ರೀತಿಯ ದುಃಖ ಖಿನ್ನತೆಯನ್ನು ಸವಿಸ್ತಾರವಾಗಿ ಬರೆದಿದ್ದಾರೆ ಎಂದರು.
ರಾಜಕಾರಣಿಗಳಿಗಿಂತ ಹೆಚ್ಚಿನ ಜವಾಬ್ದಾರಿ ಸಾಹಿತಿಗಳಿಗೆ ಇರುತ್ತದೆ. ಪ್ರಸ್ತುತ ದಿನದಲ್ಲಿ ಪ್ರಕೃತಿಯ ಮಡಿಲನ್ನು ಬಳಸಿಕೊಂಡು ನಿರ್ಲಕ್ಷ್ಯ ಮಾಡಿಕೊಂಡು ಎಲ್ಲಾ ವಿಷಯದಲ್ಲಿಯೂ ಯೂಸ್ ಅಂಡ್ ಥ್ರೋ ರೀತಿ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಸಾಹಿತಿಗಳು ತಮ್ಮ ಜವಾಬ್ದಾರಿ ನಿಬಾಯಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಮಾತನಾಡಿ, ಸರೋಜ ರಾವ್ ತಮ್ಮ ಕೃತಿ ಮೂಲಕ ಮುಂದಿನ ಪೀಳಿಗೆಗೆ ಉತ್ತಮ ಸಂದೇಶ ನೀಡುವಂತಹ ಕೆಲಸ ಆಗಿದೆ. ಎಲ್ಲರೂ ಅಕ್ಷರವನ್ನು ಪೆÇೀಣಿಸುವ ಅಭ್ಯಾಸ ರೂಢಿಸಿಕೊಂಡರೆ ಉತ್ತಮ ಸಾಹಿತಿಗಳಾಗಬಹುದು ಎಂದರು.
ಕಾರ್ಯಕ್ರಮದಲ್ಲಿ ಶಾರದಾ ವಿಲಾಸ ಕಾಲೇಜಿನ ವಾಣಿಜ್ಯ ವಿಭಾಗದ ಡೀನ್ ಪೆÇ್ರ.ಸತ್ಯನಾರಾಯಣ, ಸಹಾಯಕ ಪ್ರಾಧ್ಯಾಪಕ ಡಾ.ಜಿ.ಆನಂದ, ಕವಯಿತ್ರಿ ಸರೋಜರಾವ್, ಕಸಾಪ ಕಾರ್ಯದರ್ಶಿ ಲತಾಮೋಹನ್, ಕೋಶಾಧ್ಯಕ್ಷ ಜಿ.ಪ್ರಕಾಶ್, ಜಂಟಿ ಕಾರ್ಯದರ್ಶಿ ಕೆಂಪಣ್ಣ, ಶಾರದಾ ವಿಲಾಸ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಜಿ.ಆನಂದ್, ಸಂಘಟನಾ ಕಾರ್ಯದರ್ಶಿ ಮೈನಾ ಲೋಕೇಶ್, ಗಾಯಕರಾದ ಡಾ.ಆರ್.ನಿಂಗರಾಜು, ಡಾ.ಐ.ಡಿ.ಲೋಕೇಶ್, ಮಂಜುಳಾ, ಹಾಗೂ ಕನ್ನಡಪರ ಹೋರಾಟಗಾರ ಮೂಗೂರು ನಂಜುಂಡಸ್ವಾಮಿ ಉಪಸ್ಥಿತರಿದ್ದರು.