ಪ್ರತಿಯೊಂದು ಗ್ರಾಮಗಳ ಸಂರ್ಪಕವನ್ನು ಅಂಚೆ ಇಲಾಖೆ ಹೊಂದಿದೆ: ಅಂಚೆ ಅಧೀಕ್ಷಕ ಎನ್. ಗೋವಿಂದರಾಜು
ಸಂಜೆವಾಣಿ ವಾರ್ತೆ
ಚಾಮರಾಜನಗರ, ಆ.09- 160 ವರ್ಷಗಳ ಇತಿಹಾಸ ಹೊಂದಿರುವ ಅಂಚೆ ಇಲಾಖೆಗೆ ಪ್ರತಿಯೊಂದು ಗ್ರಾಮಗಳ ಸಂರ್ಪಕವನ್ನು ಹೊಂದಿದೆ ಎಂದು ನಂಜನಗೂಡು ಅಂಚೆ ಅಧೀಕ್ಷಕರಾದ ಎನ್. ಗೋವಿಂದರಾಜು ತಿಳಿಸಿದರು.
ಅವರು ತಾಲ್ಲೂಕಿನ ಹರದನಹಳ್ಳಿ ಹೋಬಳಿಗೆ ಸೇರಿದ ಕುಳ್ಳೂರು ಗ್ರಾಮದಲ್ಲಿ ನೂತನವಾಗಿ ಗ್ರಾಮೀಣ ಅಂಚೆ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಚಾಮರಾಜನಗರದ ಕಾಡು ಪ್ರದೇಶದ ಒಳಗಿರುವ ಕುಳ್ಳೂರು ಗ್ರಾಮವು ಮೊದಲು ಮೂಕನಪಾಳ್ಯ ಗ್ರಾಮದ ಗ್ರಾಮೀಣ ಅಂಚೆ ಕಛೇರಿಗೆ ಸೇರಿತ್ತು. ಮಾಜಿ ಸಂಸದ ದಿವಂಗತ ಆರ್.ಧೃವನಾರಾಯಣ ಅವರು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಮಾಡಿದ್ದರು. ಅದು ಈಗ ಪ್ರತಿಫಲ ನೀಡಿದೆ. 40 ವರ್ಷಗಳ ನಂತರ ನೂತನ ಅಂಚೆ ಕಚೇರಿಯನ್ನು ಇಲಾಖೆಯ ವತಿಯಿಂದ ತೆರೆಯಲಾಗುತ್ತಿದೆ. ಗ್ರಾಮಸ್ಥರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು. 5, 10 ಗ್ರಾಮಗಳಿಗೆ ಒಂದು ಗ್ರಾಮಂತರ ಅಂಚೆ ಕಛೇರಿ ಒಳಗೊಂಡಿದೆ. ಇಲಾಖೆಯಲ್ಲಿ ಸಣ್ಣ ಉಳಿತಾಯ ಯೋಜನೆಯಿಂದ ಅಂಚೆ ಇಲಾಖೆ ಮೊದಲನೆ ಸ್ಥಾನದಲ್ಲಿದೆ, ಬ್ಯಾಂಕ್‍ಗಳು ಯವ ರೀತಿಯಲ್ಲಿ ಸೇವೆಗಳನ್ನು ನೀಡುತ್ತದೆಯೋ ಅದೇ ರೀತಿಯಲ್ಲಿ ಅಂಚೆ ಇಲಾಖೆಯು ಸಾರ್ವಜನಿಕರಿಗೆ ಸೇವೆ ನೀಡುತ್ತ ಬಂದಿದೆ ಎಂದು ಹೇಳಿದರು.
ಸಾರ್ವಜನಿಕರು ಅಂಚೆ ಇಲಾಖೆಯಲ್ಲಿ ವಿಮೆ. ಆರ್.ಡಿ, ಹಣವನ್ನು ಠೇವಣಿ ಮಾಡುವುದು ಹಾಗೂ ಇನ್ನು ಹಲವಾರು ಯೋಜನೆಗಳು ಇದೆ ಇದರ ಉಪಯೋಗವನ್ನು ತಿಳಿದುಕೊಂಡು ಅಂಚೆ ಗ್ರಾಹಕರಾಗಬೇಕು ಎಂದು ತಿಳಿಸಿದರು. ಗ್ರಾಮಗಳಲ್ಲಿ ಅಂಚೆ ಇಲಾಖೆಯು ಉಳಿಯಬೇಕಾದರೆ ಗ್ರಾಮಸ್ಥರು ಕೈಜೋಡಿಸಬೇಕು, ಕುಳ್ಳೂರಿನ ಅಂಚೆ ಇಲಾಖೆಗೆ 7 ಗ್ರಾಮಗಳು ಬರುತ್ತದೆ ಅವರಿಗೆ ಪಿಂಚಣಿ ಹಣ, ಹಾಗೂ ಉಳಿತಾಯ ಖಾತೆಯ ಹಣವನ್ನು ಪಡೆಯಲು ಅನುಕೂಲವಾಗುತ್ತದೆ ಎಂದು ನುಡಿದರು.
ನೂತನ ಅಂಚೆ ಇಲಾಖೆಯನ್ನು ಉದ್ಘಾಟಿಸಿದ ಚಾಮರಾಜನಗರ ಶಾಸಕ ಸಿ ಪುಟ್ಟರಂಗಶೆಟ್ಟಿ ಅವರು ಮಾತನಾಡಿ ಅಂಚೇ ಕಛೇರಿ ಸಾತಂತ್ರ್ಯ ಪೂರ್ವದಲ್ಲಿ 160 ವರ್ಷ ಕೆಲವೇ ದೇಶಗಳಲ್ಲಿ ಬ್ಯಾಂಕ್ ವ್ಯವಸ್ಥೆ ಇತ್ತು. ಬ್ರೀಟಿμïರ ಕಾಲದಲ್ಲಿ ಅಂಚೆ ಪ್ರಾರಂಭವಾಯಿತು, ಆಗಿನ ಬ್ಯಾಂಕ್‍ಗಳನ್ನು ಖಾಸಗಿ ವ್ಯಕ್ತಿಗಳು ನಡೆಸುತ್ತಿದ್ದರು, 1972ರಲ್ಲಿ ಬ್ಯಾಂಕ್‍ಗಳನ್ನು ಇಂದಿರಾ ಗಾಂಧಿಯವರು ರಾಷ್ಟ್ರೀಕರಣಗೊಳಿಸಿದರು. ಅಂಚೆ ಇಲಾಖೆಯ ಸೇವೆಯು ಅನನ್ಯವಾದುದು. ಕಾಡಂಚಿನ ಮನೆಗಳಿಗೂ ಇಲಾಖೆಯು ಸೇವೆ ನೀಡುತ್ತಿದೆ. ಕಾಡು ಮಧ್ಯದಲ್ಲಿ ಇರುವ ಕುಳ್ಳೂರು ಗ್ರಾಮದಲ್ಲಿ ಗ್ರಾಮೀಣ ಅಂಚೆ ಕಛೇರಿ ತೆರೆದಿರುವುದು ಬಹಳ ಸಂತೋಷದ ವಿಷಯ. ಈ ಭಾಗದ ಜನರು 6 ಕಿಲೋ ಮೀಟರ್ ಮೂಕನಪಾಳ್ಯದ ಅಂಚೆ ಇಲಾಖೆಗೆ ಹೋಗಬೇಕಿತ್ತು ಈಗ ಹತ್ತಿರವೇ ಬಂದಿದೆ ಗ್ರಾಮದ ಜನರು ಉಪಯೋಗವನ್ನು ಪಡೆದು ನಿಮ್ಮ ಗ್ರಾಮದ ಅಂಚೆ ಕಚೇರಿಗೆ ಹೆಸರು ತರಬೇಕು ಎಂದು ಹೇಳಿದರು.
ಪ್ರಾಸ್ತಾವಿಕ ನುಡಿಯನ್ನು ಮಾತನಾಡಿದ ಕೃಷ್ಣದಾಸ್.ಎ.ವಿ, ಅಂಚೆ ಇಲಾಖೆಯು ಬೆಳೆದು ಬಂದ ದಾರಿಯನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಅಟ್ಟಗುಳಿಪುರದ ಗ್ರಾಪಂ ಅಧ್ಯಕ್ಷೆ ಶಿವಮ್ಮ, ಅಂಚೆ ಮೇಲ್ವಿಚಾರಕರಾದ ಮಹೇಂದ್ರ, ಅಂಚೆ ನಿರಿಕ್ಷಕರಾದ ಜೆ.ಶ್ರೀಧರ್, ಎಂ.ಇ. ಮಹದೇವಪ್ಪ, ಗಿರೀಶ್, ಉಮೇಶ್, ಕುಶಲ್, ಎ.ಎಸ್.ಪಿ ರಾಧಾಕೃಷ್ಣ, ಮಲ್ಯ, ಕುಮಾರನಾಯ್ಕ, ಶಾಂತರಾಜು, ಗ್ರಾಪಂ ಸದಸ್ಯರಾದ ಸಣ್ಣಕ್ಕಿ ಗೌಡ, ಗ್ರಾಮದ ಮುಖಂಡರು, ಗ್ರಾಮಸ್ಥರು ಹಾಗೂ ಅಂಚೆ ನೌಕರರು ಹಾಜರಿದ್ದರು.