ಹತ್ತಿ ಬೆಳೆ ಕ್ಷೇತ್ರ ಭೇಟಿ
ಕಲಬುರಗಿ: ಆ.8:ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಚಿಗರಳ್ಳಿ ಕ್ರಾಸ್ ಸಮೀಪವಿರುವ ಹೊಲವೊಂದರಲ್ಲಿ ಮಂಗಳವಾರ ಹತ್ತಿ ಬೆಳೆ ಕ್ಷೇತ್ರ ಭೇಟಿ ಕಾರ್ಯಕ್ರಮ ಜರುಗಿತು.
ಗುವಿವಿ ವಿಶ್ರಾಂತ ಪ್ರಾಧ್ಯಾಪಕ ಡಾ.ವಾಸುದೇವ ಸೇಡಂ ಎಚ್., ಬಳಗದ ಅಧ್ಯಕ್ಷ ಎಚ್.ಬಿ.ಪಾಟೀಲ, ನಿವೃತ್ತ ಕೃಷಿ ಅಧಿಕಾರಿ ಶಿವಯೋಗೆಪ್ಪಾ ಎಸ್.ಬಿರಾದಾರ, ಮಾಜಿ ಸೈನಿಕ ರೇಣುಕಾಚಾರ್ಯ ಎಸ್.ಸ್ಥಾವರಮಠ, ನಿಸರ್ಗ ಸಂಸ್ಥೆಯ ಕಾರ್ಯದರ್ಶಿ ದೂಳಪ್ಪ ಬಿ.ದ್ಯಾಮನಕರ್, ರೈತರಾದ ರಾಜು ಲಕಣಾಪುರ, ಮಲ್ಲು ಅವರಾದ ಸೇರಿದಂತೆ ಇನ್ನಿತರರಿದ್ದರು.