ಪರಿಷ್ಕøತ ವೇತನಕ್ಕೆ ಆಗ್ರಹಿಸಿ ಗುತ್ತಿಗೆ ನೌಕರರಿಂದ ಧರಣಿ
ಕಲಬುರಗಿ:ಆ.8: ಗುಲಬರ್ಗಾ ವಿಶ್ವವಿದ್ಯಾಲಯ ಗುತ್ತಿಗೆ ನೌಕರರಿಗೆ ಸರ್ಕಾರ ಜಾರಿಗೊಳಿಸಿರುವ ಪರಿಷ್ಕøತ ವೇತನಕ್ಕಾಗಿ ಧರಣಿ ಸತ್ಯಾಗ್ರಹವನ್ನು ಗುರುವಾರ ಪ್ರಾರಂಭಿಸಿದರು.
ವಿಶ್ವವಿದ್ಯಾಲಯದಲ್ಲಿ ಕಳೆದ 10-15 ವರ್ಷಗಳಿಂದ ಗುತ್ತಿಗೆ ಆಧಾರದ ಮೇಲೆ ಒಟ್ಟು 315 ಗುತ್ತಿಗೆ ನೌಕರರು ಕಾರ್ಯನಿರ್ಹಿಸುತ್ತಿದ್ದು, ಕಳೆದ 2 ವರ್ಷಗಳಿಂದ ಸರ್ಕಾರ ಜಾರಿಗೊಳಿಸಿ ಹೊರಡಿಸಿರುವ ಅಧಿಸೂಚನೆ ಪ್ರಕಾರ ಪರಷ್ಕೃತ ಕನಿಷ್ಠ ವೇತನದ ಕುರಿತು ಮಾನ್ಯ ಕುಲಸಚಿವರು, ಕುಲಪತಿಗಳಿಗೆ ಸತತವಾಗಿ ಪತ್ರದ ಮೂಲಕ ಮನವಿ ಮಾಡುತ್ತಿದ್ದು, ಸದರಿ ವಿಷಯದ ಕುರಿತು ಯಾವುದೇ ರೀತಿಯ ಕ್ರಮ ತೆಗೆದುಕೊಳ್ಳದೇ ಹಾಗೂ ಸರ್ಕಾರದ ಅಧಿಸೂಚನೆಗೆ ಕವಡೆ ಕಾಸಿನ ಕಿಮ್ಮತ್ತು ನೀಡದೆ. ಅನ್ಯಾಯವೆಸಗುತ್ತಿದ್ದಾರೆ ಎಂದು ಪ್ರತಿಭಟನಕಾರರು ಆರೋಪಿಸಿದರು.
ಅನ್ಯಾಯದ ವಿರುದ್ಧ ನಮ್ಮ ಹಕ್ಕಿಗಾಗಿ ಹಾಗೂ ನಮಗೆ ನ್ಯಾಯ ಸಿಗುವವರೆಗೆ ಧರಣಿ ಮಾಡಲು ನಿರ್ಧಸಿದ್ದೇವೆ ಎಂದು ಅವರು ಹೇಳಿದರು.