ಗಾಣಗಾಪೂರ ಮತ್ತು ಘತ್ತರಗಾ ಸೇತುವೆ ಮೇಲೆ ನೀರು: ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಲು ಡಿಸಿ ಸೂಚನೆ
ಕಲಬುರಗಿ:ಆ.8: ಮಹಾರಾಷ್ಟ್ರದ ಉಜ್ಜನಿ ಮತ್ತು ವೀರ್ ಜಲಾಯಶದಿಂದ ಕಳೆದ ಎರಡು ದಿನಗಳ ಭೀಮಾ ನದಿಗೆ ಹರಿಬಿಡಲಾದ ಸುಮಾರು 1,5000 ಲಕ್ಷಕ್ಕೂ ಹೆಚ್ಚಿನ ಕ್ಯುಸೆಕ್ಸ್ ನೀರು ಭೀಮಾನದಿಗೆ ಬಂದಿರುವುದರಿಂದ ಅಫಜಲಪೂರ ತಾಲ್ಲೂಕಿನ ಮಣ್ಣೂರು, ಯಲ್ಲಮ ದೇವಸ್ಥಾನ ಸಂಚಾರ ನಿರ್ಭಂದವಾಗಿದ್ದು ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಿಬೇಕೆಂದು ಜಿಲ್ಲಾಧಿಕಾರಿ ಬಿ ಫೌಜಿಯಾ ತರನ್ನುಮ್ ಅವರು ಹೇಳಿದರು.
ಅಫಜಲಪೂರ ತಾಲೂಕಿನ ಗಾಣಗಾಪೂರ ಸೇತುವೆ ಮೇಲೆ ಜಾಸ್ತಿ ಪ್ರಮಾಣ ನೀರು ಕಂಡು ಬಂದಿದ್ದು ಜನರು ನದಿಯ ಸುತ್ತಮುತ್ತ ಪಕ್ಕದಲ್ಲಿ ಯಾರು ಬಾರಕೂಡದು ಎಂದು ಸಾರ್ವಜನಿಕರಿಗೆ ಎಚ್ಚರಿಕೆ ನೀಡಲು ಅಧಿಕಾರಿಗಳಿಗೆ ತಿಳಿಸಿದರು. ಯಾವುದೇ ಅನಾಹುತ ಆಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಿ ಸಮನ್ವಯತೆ ಕೆಲಸ ನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ನೀರಿನ ಗುಣಮಟ್ಟವನ್ನು ಪರಿಶೀಲಿಸಿದರು. ಯಾವುದು ಜಾನುವಾರುಗಳು ನದಿಯ ಪಕ್ಕದಲ್ಲಿ ಬಿಡಕೂಡದು ನದಿಯು ಸುತ್ತಮುತ್ತ ಜನರು ಜನರ ಸುರಕ್ಷತೆ ಕಾಪಾಡಿಕೊಳ್ಳಬೇಕು ಹಿನ್ನರಿನ ಪರಿಶೀಲನೆ ಹಾಗೂ ಗ್ರಾಮಸ್ಥರೊಂದಿಗೆ ಚರ್ಚಿಸಿ ಸಾರ್ವಜನಿಕರಿಗೆ ಸಲಹೆ ಸೂಚನೆಗಳನ್ನು ನೀಡಿದರು.
ಅಲ್ಲದೇ ತಾಲ್ಲೂಕಿನ ತಹಶೀಲ್ದಾರರು ತಾಲೂಕಾ ಪಂಚಾಯತ್ ಇ.ಓ. ಹಾಗೂ ಪೊಲೀಸ್ ಇಲಾಖೆಯ ನೋಡಲ್ ಅಧಿಕಾರಿಗಳೊಂದಿಗೆ ಸತತ ಸಂಪರ್ಕ ಸಾಧಿಸಿ ಪ್ರವಾಹದಿಂದ ಯಾವುದೇ ಯಾವುದೇ ಜನ ಜಾನುವಾರು ಜೀವಹಾನಿಯಾಗದಂತೆ ಮುನ್ನೆಚ್ಚರಿಕೆ ವಹಿಸುವಂತೆ ತಿಳಿಸಿದರು.
ಅದೇ ರೀತಿಯಾಗಿ ದೇಸಾಯಿ ಕಲ್ಲೂರ ದೊಂದಿಗೆ ಘÀತರಗಾ ಬ್ಯಾರೇಜ್ ವೀಕ್ಷಣೆ ಮಾಡಿದರು. ಅಧಿಕಾರಿಗಳು ಕೆ.ಬಿ.ಜೆ.ಎನ್‍ಎಲ್. ರಾಮಪೂರ ಮುಖ್ಯ ಇಂಜಿನಿಯರಿಂಗ್ ಹೆಚ್. ರವಿಶಂಕರ, ಅಧೀಕ್ಷ ಅಭಿಯಂತರರಾದ ಮನೋಜ್ ಕುಮಾರ, ಎ.ಇ.ಇ. ಆನಂದ ಕುಂಬಾರ, ರವೀಂದ್ರ ಕುಲಕರ್ಣಿ, ಕೆ.ಎನ್.ಎನ್.ಎಲ್. ಇ.ಇ. ಸಂತೋಷ ಕುಮಾರ ಸಜ್ಜನ್, ನೀರಿನ ಒಳಹರಿವು ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿದರು.
ಇದೇ ಸಂದರ್ಭದಲ್ಲಿ ಎಸ್.ಪಿ. ಅಡ್ಡೂರು ಶ್ರೀನಿವಾಸಲು, ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ಪೂಜಾರಿ ಅಫಜಲಪೂರ ತಹಶೀಲ್ದಾರ ಸಂಜೀವ ಕುಮಾರ ದಾಸರ್, ಕಂದಾಯ ಇಲಾಖೆ ಆರ್.ಐ. ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.