ಹಿರೋಷಿಮಾ ಮತ್ತು ನಾಗಾಷಕಿ ಘಟನೆ ಮನುಕುಲಕ್ಕೆ ಪಾಠ
ಕಲಬುರಗಿ:ಆ.8:ಪರಮಾಣು ಶಕ್ತಿಯನ್ನು ಬಳಸಿಕೊಂಡು ಹಿರೋಷಿಮಾ ಮತ್ತುನಾಗಾಷಕಿಯ ಮೇಲೆ ದಾಳಿಮಾಡುವ ಮೂಲಕ ಅನೇಕ ಜನರ ಸಾವಿಗೆ ಕಾರಣವಾದದ್ದು ಮರೆಯುವಂತಿಲ್ಲ. ಇದು ಮಾನವನಿಗೆಒಂದು ಪಾಠವಾಗಿದೆ. ಇದೇ ಶಕ್ತಿಯನ್ನು ಬಳಸಿಕೊಂಡು ವಿದ್ಯುಚ್ಛಕ್ತಿಉತ್ಪಾದನೆ, ಕೈಗಾರಿಕಾಕೇತ್ರ ಸೇರಿದಂತೆ ಮತ್ತಿತರರಅಭಿವೃದ್ಧಿಗಾಗಿ ಬಳಸಿದರೆ, ನಾಶವಾಗುವುದುತಪ್ಪುತ್ತದೆ ಮತ್ತುರಾಷ್ಟ್ರಅಭಿವೃದ್ಧಿಯಾಗಲು ಸಾಧ್ಯವಿದೆಎಂದುಉಪನ್ಯಾಸಕಎಚ್.ಬಿ.ಪಾಟೀಲ ಅಭಿಪ್ರಾಯಪಟ್ಟರು.
ನಗರದಆಳಂದ ರಸ್ತೆಯಜೆ.ಆರ್ ನಗರದಲ್ಲಿರುವ’ಸಕ್ಸಸ್‍ಕಂಪ್ಯೂಟರತರಬೇತಿಕೇಂದ್ರ’ದಲ್ಲಿ’ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದಗುರುವಾರಜರುಗಿದ’ಹಿರೋಷಿಮಾ ಮತ್ತುನಾಗಾಷಕಿ ದಿನಾಚರಣೆ’ಯಲ್ಲಿಅವರುಮಾತನಾಡುತ್ತಿದ್ದರು.
ಯುದ್ದದಿಂದಯಾವುದೇರಾಷ್ಟ್ರವು ಪ್ರಗತಿಕಾಣಲು ಸಾಧ್ಯವಿಲ್ಲ. ಬದಲಿಗೆ ಪರಸ್ಪರ ಪ್ರೀತಿ, ಸ್ನೇಹ, ಸಹಕಾರ ಮನೋಭಾವನೆಯಿಂದಕಾರ್ಯನಿರ್ವಹಿಸದರೆ, ದೇಶದಲ್ಲಿ ಶಾಂತಿ ನೆಲೆಸಿ, ಅಭಿವೃದ್ಧಿಯಾಗುತ್ತದೆ. ಇದನ್ನು ಪ್ರತಿಯೊಂದುದೇಶವುಅರ್ಥಮಾಡಿಕೊಂಡು ಕೆಲಸ ಮಾಡಬೇಕಾಗಿದೆ. ಪರಮಾಣು ಶಕ್ತಿಯುವಿವಿಧ ಉಪಯೋಗಗಳನ್ನು ಹೊಂದಿದ್ದು, ಅದನ್ನು ಶಾಂತಿ, ದೇಶದಅಭಿವೃದ್ಧಿಯದೃಷ್ಟಿಯಿಂದಉಪಯೋಗಿಸಬೇಕಾದದ್ದುತುಂಬಾಅವಶ್ಯಕವಾಗಿದೆಎಂದು ಹೇಳಿದರು.
ಕಾರ್ಯಕ್ರಮದಲ್ಲಿಸಂಸ್ಥೆಯ ಮುಖ್ಯಸ್ಥಅಸ್ಲಾಂ ಶೇಖ್, ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಪ್ರಮುಖರಾದಗೋಪಾಲ ಹುಲಿಕಾರ, ರಾಘವೇಂದ್ರ ಹೊಸಮನಿ, ದೇವಿಂದ್ರ ಭಜಂತ್ರಿ, ನಬಿಲಾಲ್ ಮಕನದಾರ ಸೇರಿದಂತೆಇನ್ನಿತರರಿದ್ದರು.