ಗಡಿನಾಡಿನ ಜಾನಪದ ಕಲೆ ಶ್ರೇಷ್ಠ: ಶಿವಚಲಕುಮಾರ ಸಾಲಿಮಠ
ಕಲಬುರಗಿ,ಆ.8-ಮಹಾರಾಷ್ಟ್ರ ರಾಜ್ಯದ ಹಲವು ಪ್ರದೇಶಗಳಲ್ಲಿ ಕನ್ನಡ ಜಾನಪದ ಕಲಾವಿದರು ಅಪಾರವಾದ ಸೇವೆ ಸಲ್ಲಿಸಿದ್ದಾರೆ. ಜಾನಪದ ಸಾಹಿತ್ಯ ಕುರಿತು ಕರ್ನಾಟಕ ರಾಜ್ಯದ ಜಿಲ್ಲೆ ಮತ್ತು ತಾಲೂಕು ಮಟ್ಟದ ಅಧ್ಯಯನಗಳು ನಡೆದಿವೆ. ಮಹಾರಾಷ್ಟ್ರ ರಾಜ್ಯದ ಕನ್ನಡ ಜಾನಪದ ಕುರಿತು ಅಧ್ಯಯನ ನಡೆಯಬೇಕಾಗಿದೆ. ಗಡಿನಾಡಿನ ಜಾನಪದ ಕಲೆ ಶ್ರೇಷ್ಠವಾಗಿದೆ ಎಂದು ಶಿವಚಲಕುಮಾರ ಸಾಲಿಮಠ ಹೇಳಿದರು.
ಗಡಿಭಾಗದ ಅಕ್ಕಲಕೋಟೆ ತಾಲೂಕಿನ ಮೈಂದರ್ಗಿಯಲ್ಲಿ ಬಸವರಾಜ ಮಸೂತಿ ಪಬ್ಲಿಕ್ ಮ್ಯೂಸಿಯಂ ಚಾರೀಟೆಬಲ್ ಟ್ರಸ್ಟ್‍ನ 5 ನೇ ಸಂಸ್ಥಾಪನಾ ದಿನಾಚರಣೆ ಮತ್ತು ಗಡಿನಾಡಿನ ಜಾನಪದ ಸಂಭ್ರಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಂಕರ ಶಿಲವಂತ ಅಧ್ಯಕ್ಷತೆ ವಹಿಸಿದ್ದರು. ಶಿವಚಲೇಶ್ವರ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಸಿದ್ದೇಶ್ವರ ಪಾಟೀಲ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ನಾಡ ದೇವಿ ಭುವನೇಶ್ವರಿ ಪೂಜೆಯನ್ನು ಶಿವಶರಣರ ಪಡಸಲಗಿ ನೆರವೇರಿಸಿದರು. ಕನ್ನಡ ಹಾಗೂ ಮರಾಠಿ ಭಾಷೆಗಳಲ್ಲಿ ಜಾನಪದ ಸಾಹಿತ್ಯ ಹಾಗೂ ಕಲೆ ಕುರಿತು ಪ್ರಾಚಾರ್ಯ ಎ.ಎಚ್.ಹರವಾಳಕರ ಮಾತನಾಡುತ್ತ, 2020 ಹೊಸ ಶೈಕ್ಷಣಿಕ ಶಿಕ್ಷಣ ನೀತಿಯಲ್ಲಿ ಜಾನಪದ ಕಲೆಗೆ ಪ್ರಾಧಾನ್ಯತೆ ನೀಡಲಾಗಿದೆ. ವಿದ್ಯಾರ್ಥಿಗಳು ಈ ಕಲೆ ಕಲಿಯುವ ಅವಶ್ಯಕತೆ ಇದೆ ಎಂದು ಹೇಳಿದರು.
ಮಹಾರಾಷ್ಟ್ರ ರಾಜ್ಯದಲ್ಲಿ 1000 ಕನ್ನಡ ಶಾಸನಗವೆ ಎಂದು ಸಂಶೋಧಕರು ಹೇಳಿದ್ದಾರೆ. ಅದರಲ್ಲಿ 400 ಕನ್ನಡ ಶಾಸನಗಳು ಸಂಶೋಧಕರು ಅಧ್ಯಯನ ಮಾಡಿ ಪ್ರಕಟ ಮಾಡಿದ್ದಾರೆ. ಮಹಾರಾಷ್ಟ್ರದ ಕನ್ನಡ ಶಾಸನಗಳು, ವೀರಗಲ್ಲುಗಳು ಹಾಗೂ ದೇವಾಲಯದ ಅವಶೇಷಗಳನ್ನು ರಕ್ಷಣೆ ಮಾಡಲು ಬಸವರಾಜ ಮಸೂತಿ ಪಬ್ಲಿಕ್ ಮ್ಯೂಸಿಯಂ ಚಾರೀಟೆಬಲ್ ಟ್ರಸ್ಟ್ ಸ್ಥಾಪನೆ ಮಾಡಲಾಗಿದೆ. ಅದರ ಜೊತೆ ಮಹಾರಾಷ್ಟ್ರ ಕನ್ನಡ ಜಾನಪದ ಕಲಾವಿದರಿಗೂ ಗುರುತಿಸಿ ಗೌರವಿಸುವುದು ಟ್ರಸ್ಟ್‍ನ ಉದ್ದೇಶವಾಗಿದೆ ಎಂದು ಮಹಾರಾಷ್ಟ್ರ ಕಸಾಪ ನಿಕಟಪೂರ್ವ ಅಧ್ಯಕ್ಷ ಬಸವರಾಜ ಮಸೂತಿ ಹೇಳಿದರು.
ಶಿವಚಲೇಶ್ವರ ಹೈಸ್ಕೂಲ್ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಜಾನಪದ ಹಾಡುಗಳನ್ನು ಹಾಡುತ್ತ ಕೋಲಾಟ ನೃತ್ಯ ಪ್ರದರ್ಶನ ನೀಡಿದರು. ಗೊಂದಲಿಗರ ಪದ, ಏಕತಾರಿ ಪದಗಳು, ಡೊಳ್ಳಿನ ಪದಗಳು, ವಗ್ಗೆಗಳ ಪದಗಳು, ಪಾರಿಜಾತ ಪದಗಳು ಹಾಗೂ ಚಿಟ್ಟಲಿಗೆ ಮೇಳ ಪ್ರದರ್ಶನ ನೀಡಿದರು. ತುಕಪ್ಪಾ ನಾಗೂರ, ನೀಲಕಂಠ, ಮೆಂಥೆ, ರಾಜಶೇಖರ ಮಸೂತಿ, ಶಿವಶರಣರ ಭರಮಾ, ಕಾಶಿನಾಥ ಜಕಾಪುರೆ, ಪ್ರಭು ಬೆಣ್ಣೆಸೂರ ಉಪಸ್ಥಿತರಿದ್ದರು.ವಿದ್ಯಾರ್ಥಿಗಳಾದ ಸಿಂಚನಾ ಝಂಗಿ ಕಾರ್ಯಕ್ರಮ ನಿರೂಪಣೆ ಮಾಡಿದರೆ, ಚಂದ್ರಿಕಾ ಹಡಿ9ಕರ ವಂದಿಸಿದರು.