ಮಕ್ಕಳನ್ನು ಶಾಲೆಗೆ ಕಳುಹಿಸುವ ಜವಾಬ್ದಾರಿ ಪೋಷಕರ ಮೇಲಿದೆ
ವಾಡಿ,ಆ.8-ಮಕ್ಕಳನ್ನು ಶಾಲೆಗೆ ಕಳುಹಿಸುವ ಜವಾಬ್ದಾರಿ ಪೆÇೀಷಕರದಾದರೆ, ಮಕ್ಕಳ ಬಿಳಿ ಹಾಳೆಯಂತಹ ಹೃದಯದ ಮೇಲೆ ಅಕ್ಷರ ಮೂಡಿಸುವ ಜವಾಬ್ದಾರಿ ಶಿಕ್ಷಕನದಾಗಿರುತ್ತದೆ ಎಂದು ಕಮರವಾಡಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಮಂಜುಳಾ ಕೆ.ಹೇಳಿದರು.
ಬುಧವಾರ ಕಮರವಾಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್‍ಡಿಎಂಸಿ ಅಧ್ಯಕ್ಷೆ ಮಹೆಬೂಬೀ ಖದೀರ್ ಮುಲ್ಲಾ ಅವರ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ಪೆÇೀಷಕರ ಸಭೆ ಉದ್ದೇಶಿಸಿ ಅವರು ಮಾತನಾಡಿದರು.
ಪೆÇೀಷಕರು ಮತ್ತು ಶಿಕ್ಷಕರು ಇವರಿಬ್ಬರ ಜವಾಬ್ದಾರಿಯಿಂದ ಮಕ್ಕಳು ದೇಶದ ಉತ್ತಮ ಪ್ರಜೆಗಳಾಗಲು ಸಾಧ್ಯವಾಗುತ್ತದೆ. ನಮ್ಮೂರ ಶಾಲೆಯ ಬಗ್ಗೆ ನಾವು ಹೆಮ್ಮೆ ಪಡಬೇಕು. ಜೊತೆಗೆ ನಮ್ಮ ಮಕ್ಕಳು ಇಲ್ಲಿ ಓದುತ್ತಿರುವುದರಿಂದ ಶಾಲೆಯ ಸುತ್ತಮುತ್ತಲ ಪರಿಸರ ಸುಚಿಯಾಗಿರುವಂತೆ ಕಾಪಾಡುವುದು ನಮ್ಮ ಹೊಣೆಗಾರಿಕೆಯಾಗಬೇಕು. ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಗ್ರಾಮದ ಪ್ರತಿಯೊಬ್ಬರೂ ಸಹಕರಿಸಬೇಕು ಎಂದು ಮನವಿ ಮಾಡಿದರು.
ಸಭೆ ಉದ್ದೇಶಿಸಿ ಮಾತನಾಡಿದ ಎಸ್‍ಡಿಎಂಸಿ ನೂತನ ಅಧ್ಯಕ್ಷೆ ಮಹೆಬೂಬೀ ಖದೀರ್ ಮುಲ್ಲಾ, ಈ ಶಾಲೆಯನ್ನು 8ನೇ ತರಗತಿವರೆಗೆ ನಡೆಯುತ್ತಿದೆ. ಮೇಲ್ದರ್ಜೆಗೆ ಸೇರಿಸಲು ಹಾಗೂ ದುರಸ್ಥಿಗೊಂಡಿರುವ ಶಾಲೆಯ 6ಕೋಣೆಗಳು ದುರಸ್ಥಿಗಾಗಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಮನವಿ ಸಲ್ಲಿಸೋಣ ಎಂದರು.
ಗ್ರಾಪಂ ಪಿಡಿಒ ಹಣಮಂತರಾಯ ಹೊಸಮನಿ, ಎಸ್‍ಡಿಎಂಸಿ ಸಮಿತಿಯ ನೂತನ ಉಪಾಧ್ಯಕ್ಷ ಬಸವರಾಜ ಸುಲೆಪೇಠ, ಮುಖಂಡರಾದ ಶಿವರಶರಣಪ್ಪ ಯರಗಲ್, ಭೀಮಶಂಕರ ಇಂದೂರ, ಖದೀರ ಮುಲ್ಲಾ, ಲಕ್ಷ್ಮಣ ಅಮಕಾರ, ಎಸ್‍ಡಿಎಂಸಿ ಸದಸ್ಯರಾದ ಜೈನಾಬೀ ಪೀರ್‍ಸಾಬ್, ಶ್ರೀದೇವಿ ಚವ್ಹಾಣ, ಮಂಜುಳಾ ಮೋನಪ್ಪ, ಅನಂತಮ್ಮ ಶರಣಯ್ಯ, ಲಕ್ಮೀ ಮಲ್ಲಣ್ಣ, ಬಸವರಾಜ ಮಾಂಗ, ಲಕ್ಮಣ ಅಮಕರ, ಶಿವಲಿಂಗಪ್ಪ ಇಟಗಿ, ಭೀಮರಾಯ ಸಾಧು, ಪ್ರೇಮನಾಥ ದಿವಾಕರ, ಶಿವಶರಣಪ್ಪ ಯರಗಲ, ಮರೆಮ್ಮ ಕೊಟಗಾರ, ಶಿವಲಿಂಗಮ್ಮ ಗಂಗನೋರ, ಮಂಜುಳಾ ಎಂ.ಆರ್ ಸೇರಿದಂತೆ ಇತರರಿದ್ದರು. ಸಹ ಶಿಕ್ಷಕ ವೀರಣ್ಣ ವಿಶ್ವಕರ್ಮ ನಿರೂಪಿಸಿ, ವಂದಿಸಿದರು.