ಶರಣ ಡೋಹರ ಕಕ್ಕಯ್ಯ ಮಂದಿರದಲ್ಲಿ ಕಳಸಾರೋಹಣ
ಕಲಬುರಗಿ,ಆ.8-ನಗರದ ಜಗತ್ ಬಡಾವಣೆಯಲ್ಲಿರುವ ಹನ್ನೇರಡೆನೇ ಶತಮಾನದ ಶರಣ ಡೋಹರ ಕಕ್ಕಯ್ಯನವರ ದೇವ ಮಂದಿರದಲ್ಲಿ ಕಳಸಾರೋಹಣ ಹಾಗೂ ಪೂಜಾ ಕಾರ್ಯಕ್ರಮ ನಡೆಯಿತು.
ಶರಣ ಡೋಹರ ಕಕ್ಕಯ್ಯ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಸಾಯಬಣ್ಣ ಹೋಳ್ಕರ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಹಿರಿಯ ಕವಿ ಎ.ಕೆ.ರಾಮೇಶ್ವರ, ನಿವೃತ್ತ ಶಿಕ್ಷಣಾಧಿಕಾರಿ, ಸಾಹಿತಿ ಭೀಮಣ್ಣ ಬೋನಾಳ, ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಸಿ.ಎಸ್.ಮಾಲಿಪಾಟೀಲ, ಉಪಾಧ್ಯಕ್ಷ ಮೋತಿಲಾಲ ಎಂ.ಕಟಕೆ, ಲಿಂಗೋಜಿ ಗಾಜರೆ, ರಮೇಶ ಗಾಜಲ್ಕರ್, ಅನಿಲ ಸಾವರಕರ್, ಸೂರ್ಯಕಾಂತ ಎಸ್, ಸಾಯಬಣ್ಣ ಗಾಜರೆ, ಕೃಷ್ಣ ಹೋಳ್ಕರ್, ಅಶೋಕ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.