ಪುರ : ಮಾದಯ್ಯಸ್ವಾಮಿ ಗುರುವಿನ್ ರ ೬೨ ನೇ ಪುಣ್ಯ ಸ್ಮರಣೋತ್ಸವ
ಸಂಜೆವಾಣಿ ವಾರ್ತೆ.
ಸಿಂಧನೂರು ಆ.೮ ತಾಲೂಕಿನ ಪುರ ಗ್ರಾಮದ ಪ್ರಯುಕ್ತ ವಿನೂತನವಾಗಿ ನಿರ್ಮಾಣಗೊಂಡ ಲಿಂ ಮಾದಯ್ಯ ಗುರುವಿನ್ ಅವರ ಮಂದಿರದ ಗೋಪುರ ಅನಾವರಣ ಸಮಾರಂಭದಲ್ಲಿ ಮಾದಯ್ಯ ಗುರುವಿನದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶ್ರೀ.ಲಿಂ.ಪ.ಪೂ. ಮಾದಯ್ಯತಾತನವರ ೬೨ ನೇ ಪುಣ್ಯ ಸ್ಮರಣೋತ್ಸವ ನಿಮಿತ್ಯ ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ಸಕಲ ಮಂಗಳವಾದ್ಯದೊಂದಿಗೆ ಗಂಗಾ ಪೂಜೆ, ಮಾದಯ್ಯತಾತನವರ ಭಾವಚಿತ್ರ ಮೆರವಣಿಗೆ, ವಿವಿಧ ಮಠಾಧೀಶರು, ಗುರು ಹಿರಿಯರು ಸಮಸ್ತ ಸದ್ಭಕ್ತರ, ಸಮ್ಮುಖದಲ್ಲಿ ಪುರ ಗ್ರಾಮದಲ್ಲಿ ಧರ್ಮಸಭೆ ಮಾದಯ್ಯಸ್ವಾಮಿ ಗುರುವಿನ್ , ಚಿದಾನಂದಯ್ಯ ಗುರುವಿನ್ ಅವರ ನೇತೃತ್ವದಲ್ಲಿ ವಿಜೃಂಭಣೆಯಿಂದ ಜರುಗಿತು.
ಕಾರ್ಯಕ್ರಮದಲ್ಲಿ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಮಸ್ಕಿ ಕ್ಷೇತ್ರದ ಶಾಸಕ ಆರ್.ಬಸನಗೌಡ ತುರ್ವಿಹಾಳ ಜ್ಯೋತಿ ಬೆಳಗಿಸಿದರು. ಎಂ.ದೊಡ್ಡ ಬಸವರಾಜ ಅಧ್ಯಕ್ಷರು ಪಿ.ಎಲ್.ಡಿ.ಬ್ಯಾಂಕ್, ಕೆ.ಭೀಮಣ್ಣ ವಕೀಲರು ಅಧ್ಯಕ್ಷರು ತಾಲೂಕು ಕುರುಬರ ಸಂಘ ಡೊಳ್ಳು ಬಾರಿಸುವ ಮೂಲಕ ಧರ್ಮಸಭೆಯನ್ನು ಉದ್ಘಾಟಿಸಿದರು.
ವೀರಭದ್ರ ಮಹಾಸ್ವಾಮಿಗಳು ಅಂಕಲಿಮಠ, ಸೋಮನಾಥ ಶಿವಾಚಾರ್ಯ ಮಹಾಸ್ವಾಮಿಗಳು, ರಂಭಾಪುರಿ ಶಾಖಾಮಠ ೩ನೇ ಮೈಲ್ ಕ್ಯಾಂಪ್, ಪ.ಪೂ ಸೋಮೇಶ್ವರ ಮಹಾಸ್ವಾಮಿಗಳು ಮಖಣಾಪುರ, ಪ.ಪೂ ಚಿನ್ಮಯಾನಂದ ಮಹಾಸ್ವಾಮಿಗಳು ಶಿರೂರು, ಷ.ಬ್ರ.ಅಮರಗುಂಡ ಶಿವಾಚಾರ್ಯರು ಪುರವರ ಹಿರೇಮಠ ತುರುವಿಹಾಳ, ಗುರುಗುಂಡಯ್ಯ ಅಪ್ಪಾಜಿ ಸರ್ವೇಶ್ವರ ಮಠ ತುರುವಿಹಾಳ, ಅಪ್ಪು ಒಡೆಯರ್, ಮಾದಯ್ಯ ಗುರುವಿನ ಹುನಕುಂಟಿ, ಸಿದ್ದಯ್ಯ ಗುರುವಿನ್ ಗಬ್ಬೂರು, ಬಾಲಯ್ಯ ಗುರುವಿನ್ ಕಳ್ಳಿ ಲಿಂಗಸುಗೂರು, ಸುವರ್ಣಯ್ಯತಾತ ಎಲೆಕೂಡ್ಲಿಗಿ, ಶಿವಾನಂದಯ್ಯ ಗುರುವಿನ್ ಕೊರಡಕೇರಾ, ಮಳೆಪ್ಪಯ್ಯ ವಣಗೇರಿ, ಗ್ಯಾನಪ್ಪಯ್ಯ ಟೆಂಗುಂಟಿ ಡಾ.ರಾಕೇಶ್ ರಾಮಸ್ವಾಮಿಗಳು, ಬೀರಯ್ಯ ಪಟ್ಟದ ಪೂಜಾರಿ, ಮಲ್ಲಯ್ಯ ಪಟ್ಟದ ಪೂಜಾರಿ ಗೋನಾಳ, ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿದ್ದರು.
ನಂತರ ನೂತನ ಗೋಪುರ ನಿರ್ಮಾಣಕ್ಕೆ ತನು ಮನ ಧನದಿಂದ ಸಹಾಯ ಸಹಕಾರ ನೀಡಿದ ಚಳ್ಳೂರು, ಉಮಲೂಟಿ, ವಿರುಪಾಪುರ, ಮತ್ತು ಪುರ ಗ್ರಾಮಗಳ ಭಕ್ತರಿಗೆ ಗೌರವ ಸಮರ್ಪಿಸಿ ಸನ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾಗಿ ಮಲ್ಲನಗೌಡ ದೇವರ ಮನೆ, ಅಮರೇಶಪ್ಪ ಮೈಲಾರ, ನಿರುಪಾದೆಪ್ಪ ವಕೀಲರು, ಸೋಮನಗೌಡ ಬಾದರ್ಲಿ, ನಲ್ಲ ವೆಂಕಟೇಶ್ವರ ರಾವ್, ಮಲ್ಲಪ್ಪ ಮೈಲಾರ, ಬೀರಪ್ಪ ಶಂಭೋಜಿ, ಬಸಪ್ಪ ಯಾಟಿ, ಶರಣಬಸವ ಗಡೆದ್, ಶರಣಬಸವ ರಡ್ಡೆರ್, ಮತ್ತು ಮಠದ ಸದ್ಭಕ್ತರು ಭಾಗವಹಿಸಿದ್ದರು.