ಶಿಕ್ಷಣದೊಂದಿಗೆ ತಾಂತ್ರಿಕತೆ ಬಹುಮುಖ್ಯ
ಸಿಂಧನೂರು.ಆ.೮-
ಪರಿಪೂರ್ಣ ವ್ಯಕ್ತಿಯಾಗಿ ಬೆಳೆಯಲು ಶಿಕ್ಷಣದೊಂದಿಗೆ ತಾಂತ್ರಿಕತೆ ಮುಖ್ಯ ಎಂದು ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.
ನಗರದ ಸರ್ಕಾರಿ ಪದವಿ ಮಹಾವಿದ್ಯಾಲಯದ ಸುದೀರ್ಘ ೫೦ ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಸುವರ್ಣ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ನಮ್ಮ ಶಿಕ್ಷಣ ಸಂಸ್ಥೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಲು ಅದಕ್ಕೆ ಪೂರಕ ಸೌಲಭ್ಯ ಗಳನ್ನು ಒದಗಿಸ ಬೇಕಾಗುತ್ತದೆ.ಕಾಲೇಜ್ ಕಟ್ಟಡ ಹಳೆಯದಾಗಿದ್ದು ಇದಕ್ಕೆ ಹೊಸ ಕಟ್ಟಡ ಒದಗಿಸಲು ಸರ್ಕಾರದಿಂದ ಅನುದಾನ ಬಿಡುಗಡೆ ಯಾಗಿದ್ದು ನೂತನ ಕಟ್ಟಡ ಪ್ರಾರಂಭವನ್ನು ೩-೪ ತಿಂಗಳಲ್ಲಿ ಪ್ರಾರಂಭಿಸುತ್ತೆವೆಂದರು ಮತ್ತು ಸಿಂಧನೂರು’ ದಸರಾ ಮಹೋತ್ಸವ’ವನ್ನು ಅಕ್ಟೊಬರ್ ತಿಂಗಳಲ್ಲಿ ವಿಭಿನ್ನವಾಗಿ ಮೈಸೂರಿನ ದಸರಾ ಕಾರ್ಯಕ್ರಮದ ಮಾದರಿಯಲ್ಲಿ ನಡೆಸಲಾಗುವುದು ಅದಕ್ಕೆ ಪೂರಕವಾದ ಪ್ರಯತ್ನವನ್ನು ವಿದ್ಯಾರ್ಥಿಗಳು ನಡೆಸಿರಿ ಮತ್ತು ಈ ಶೈಕ್ಷಣಿಕ ವರ್ಷದಿಂದ ಕಾಲೇಜ್ ನಲ್ಲಿ ಲೈಬ್ರರಿ ಸೈನ್ಸ್ ,ಜರ್ನಾಲಿಸಂ ಪ್ರಾರಂಭಿಸಲಾಗಿದೆ ಸದುಪಯೋಗ ಪಡಿಸಿಕೊಳ್ಳಿ ಎಂದರು.
ಪ್ರಾಸ್ತಾವಿಕ ವಾಗಿ ಬಸವರಾಜ ತಡಕಲ್ ಮಾತನಾಡಿ ನಾವೀಗ ರಾಯಚೂರು ವಿಶ್ವ ವಿದ್ಯಾಲಯದಲ್ಲಿ ಸೇರ್ಪಡೆ ಯಾಗಿದ್ದೆವೆ ಈ ಮುಂಚೆ ಗುಲಬರ್ಗಾ ವಿ.ವಿ ದಲ್ಲಿದ್ದೆವು ಆಗ ಪ್ರತಿ ಫಲಿತಾಂಶ ದಲ್ಲಿ ರ್ಯಾಂಕ್ ಗಳ ಪಟ್ಟಿ , ’ಯುನಿವರ್ಸಿಟಿ ಬ್ಲ್ಯೂ ’ ನಮ್ಮ ಸಿಂಧನೂರಿನ ವಿದ್ಯಾರ್ಥಿಗಳ ಪಾಲಾಗಿವೆ ಎಂದರು .
ಕಾರ್ಯಕ್ರಮದ ವಿಶೇಷ ಆಹ್ವಾನಿತರಾದ ಬಿ.ಚಿ ಎಂದೆ ಖ್ಯಾತಿಯಾದ ಗಂಗಾವತಿ ಪ್ರಾಣೇಶ ಹಾಸ್ಯದ ಚಟಾಕಿಯನ್ನು ಹಾರಿಸಿ ಸಂತೋಷ ಉಣಬಡಿಸಿದರು.
ಸುವರ್ಣ ಸಿಂಧೂರ ’ವಿಶೇಷ ಸಂಚಿಕೆ ಬಿಡುಗಡೆ ಮಾಡಿದರು ವಿವಿಧ ಕ್ರೀಡೆ ,ಸ್ಪರ್ಧಾತ್ಮಕ ಬರವಣಿಗೆ ,ಕೌಶಲ್ಯ ಗಳಲ್ಲಿ ವಿಭಿನ್ನ ಪ್ರದರ್ಶನ ತೋರಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಿಸಿದರು ಹಾಗೂ ಉದಯಕಾಲ ವರದಿಗಾರ ಶೇಕರ ಯರದಿಹಾಳ ,ಸಂಜೆವಾಣಿ ವರದಿಗಾರ ಪಂಪಾಪತಿ ಬಿ ಹೂವಿನ ಬಾವಿ ,ಡೈಲಿ ನ್ಯೂಸ್ ವರದಿಗಾರ ವಿರೇಶ ಗಡ್ಡಿ ಮಾಳ ,ಪ್ರಜಾಪ್ರಸಿದ್ದ ವರದಿಗಾರ ಶಿವರಾಜ ಗೋರೆಬಾಳ ,ಹೈದ್ರಾಬಾದ್ ಕರ್ನಾಟಕ ವರದಿಗಾರ ಅಂಬಣ್ಣ ಸಾಸಲಮರಿ ,ಸಮಾಜ ವಿಕಾಸ ವರದಿಗಾರ ವಿರೇಶ ಹೊಸಳ್ಳಿ ಪತ್ರಕರ್ತರಿಗೂ ಸನ್ಮಾನಿಸಿ ,ಗೌರವಿಸಿದರು.
ಇದೇ ಸಂದರ್ಭದಲ್ಲಿ ಕಾಲೇಜ್ ಅಭಿವೃದ್ದಿ ಸಮಿತಿ ಸದಸ್ಯರುಗಳಾದ ಮಲ್ಲಿಕಾರ್ಜುನ,ರಾಜೇಂದ್ರ ಕುಮಾರ ನಹಾರ ,ತಿಮ್ಮಣ್ಣ ಸಾಹುಕಾರ ,ವಿರೇಶ ಸಾನಬಾಳ ,ಹನುಮೇಶ ನಾಯಕ ,ಸಂಗೀತ ಸಾರಂಗಮಠ , ಮಹಾವಿದ್ಯಾಲಯದ ಪ್ರಾಚಾರ್ಯರ ಶಿವಯ್ಯ ಮುಪ್ಪಯ್ಯ ನ ಮಠ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು ,ಡಾ.ದಯಾನಂದ ಸಾಳುಂಕೆ ಸಹ ಪ್ರಾಧ್ಯಾಪಕರು ಕೊಪ್ಪಳ ,ನಿವೃತ್ತ ಪ್ರಾಚಾರ್ಯರು ಪ್ರಹ್ಲಾದ ರಡ್ಡಿ ,ಡಾ.ಸಂಗನಗೌಡ ,ಬಸವರಾಜ ತಡಕಲ್ ,ಯಲ್ಲಪ್ಪ ಗೋನ್ವಾರ ಉಪಸ್ಥಿತರಿದ್ದರು.
ಕಾರ್ಯಕ್ರಮ ವನ್ನು ಉಪನ್ಯಾಸಕರಾದ ವೈಜನಾಥ ಸಗರಮಠ ನಡೆಸಿಕೊಟ್ಟರು.