ಹೀರಾ ವಲಯ ಪ್ರತಿಭಾ ಕಾರಂಜಿ; ವಿದ್ಯಾರ್ಥಿಗಳ ಪ್ರತಿಭೆಗೆ ಸೂಕ್ತ ವೇದಿಕೆಯಾಗಿದೆ
ಸಿರವಾರ: ಆ.೮- ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ, ಅವರಿಗೆ ಪ್ರೋತ್ಸಾಹ ನೀಡಿದಾಗ ಅವರು ಜಿಲ್ಲಾ, ರಾಜ್ಯ,ರಾಷ್ಟ್ರ ಮಟ್ಟದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿಸಲು ಅನುಕೂಲವಾಗುತ್ತದೆ ಎಂದು ಮಾನ್ವಿ ಶಾಸಕ ಹಂಪಯ್ಯ ನಾಯಕ ಹೇಳಿದರು.
ತಾಲೂಕಿನ ಹೀರಾ ವಲಯ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಪಠ್ಯ ಪುಸ್ತಕ ಓದು ಬರಹದ ಜೊತೆ ಅವರಲ್ಲಿ ಇರುವ ವಿಶೇಷ ಕಲೆ,ಸಾಹಿತ್ಯ,ಸಂಗೀತ, ನಟನೆ ಪ್ರತಿಭೆಯನ್ನು ಗುರುತಿಸಿ ತಾಲೂಕು, ಜಿಲ್ಲಾವಮಟ್ಟದಲ್ಲಿ, ರಾಜ್ಯ ಮಟ್ಟದ ವರೆಗೆ ಆಯ್ಕೆಯಾಗಲು ಉತ್ತಮ ಮಾರ್ಗದರ್ಶನ ನೀಡಿ, ಈ ಭಾಗದ ಶಾಲಾ, ಕಾಲೇಜು, ೩೭೧(ಜೆ) ಕಲಂ ಜಾರಿಗೆ, ಯುವಕರಿಗೆ ಉನ್ನತ ಹುದ್ದೆಗಳು ಸಿಗಲು ಮಲ್ಲಿಕಾರ್ಜುನ ಖರ್ಗೆ ಅವರ ಶ್ರಮದಿಂದ, ವಿದ್ಯಾರ್ಥಿ ಜೀವನದಲ್ಲಿ ಸಮಯ ವ್ಯರ್ಥ ಮಾಡದೆ, ಸದುಪಯೋಗ. ಪಡಿಸಿಕೊಳಬೇಕು ಎಂದು ತಿಳಿಸಿದರು. ಬಿಇಓ ಚಂದ್ರಶೇಖರ ದೊಡ್ಡಮನಿ ಪ್ರಾಸ್ತಾವಿಕ ನುಡಿದರು.
ಈ ಸಂದರ್ಭದಲ್ಲಿ ಪಂಚ ಗ್ಯಾರಂಟಿ ಯೋಜನೆ ತಾಲೂಕು ಅಧ್ಯಕ್ಷ ಬ್ರಿಜೇಶ್ ಪಾಟೀಲ, ಶಿವಶರಣರ ಸಾಹುಕಾರ್ ಅರಕೇರಿ,ರಮೇಶ ದರ್ಶನಕರ, ಪ.ಪಂ.ಸದಸ್ಯರ ಸೂರಿ ದುರಗಣ್ಣ, ಶೇಖರಪ್ಪಗೌಡ ಪೋ.ಪಾ, ಗ್ರಾ.ಪಂ. ಅಧ್ಯಕ್ಷ ಹನುಮಂತ, ಸಿಆರ್ ಸಿ ವೆಂಕಟೇಶ, ಫ್ರಾಥಮಿಕ ಶಿ. ಸಂ. ಅದ್ಯಕ್ಷ ಮಲ್ಲೇಶಪ್ಪ, ಪ್ರೌ. ಶಿ.ಸಂ ಅದ್ಯಕ್ಷ ಮೌನೇಶ, ಜಾವೀದ ಪಾಷ ಕುರ್ಡಿ, ಆರ್ ಎಪ್ಮಿಯಾ, ಸೇರಿದಂತೆ ಹಲವಾರು ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.