ಉತ್ತಮ ಆಹಾರ ಪದ್ದತಿ ಅಳವಡಿಸಿಕೊಳ್ಳಿ:ಸುಜಾತಾ
ತಾಳಿಕೋಟೆ:ಆ.8: ಉತ್ತಮ ಆಹಾರ ಪದ್ಧತಿ ಅಳವಡಿಸಿಕೊಳ್ಳುವುದರ ಜತೆಗೆ ದಿನನಿತ್ಯ ಒಂದಿಲ್ಲೊಂದು ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ತಾಲೂಕಾ ಪಂಚಾಯತ ಮನರೇಗಾ ಸರ್ ಸಹಾಯಕ ನಿರ್ದೇಶಕಿ ಶ್ರೀಮತಿ ಸುಜಾತಾ ಯಡ್ರಾಮಿ ಅವರು ಹೇಳಿದರು.
ತಾಲೂಕಿನ ಬಾವೂರ ಗ್ರಾಮದಲ್ಲಿ ಗ್ರಾಮೀಣಾಭಿವೃದ್ದಿ ಪಂಚಾಯತ್ ರಾಜ್ಯ ಇಲಾಖೆ, ಆರೋಗ್ಯ ಮತ್ತು ಕುಟುಂಭ ಕಲ್ಯಾಣ ಇಲಾಖೆ, ಜಿಲ್ಲಾ ಪಂಚಾಯತ್ ವಿಜಯಪುರ, ತಾಲೂಕಾ ಪಂಚಾಯತ್ ತಾಳಿಕೋಟೆ, ಗ್ರಾಂಪಂ ಬಾವೂರ ಸಹಯೋಗದಲ್ಲಿ ಆರೋಗ್ಯ ಅಮೃತ ಅಭಿಯಾನದಡಿ ಉಚಿತ ಆರೋಗ್ಯ ತಪಸಾಣೆ ಶಿಬರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು ಪ್ರತಿಯೊಬ್ಬರಿಗೂ ಆರೋಗ್ಯವೆಂಬುದು ಮುಖ್ಯವಾಗಿದೆ ಮನುಷ್ಯನು ಆರೋಗ್ಯದಿಂದ ಇದ್ದರೆ ಎಲ್ಲವನ್ನು ಸಾದಿಸಬಹುದು ಇತ್ತಿಚಗೆ ವಿವಿಧ ರೋಗಗಳು ಕಾಣಿಸಿಕೊಳ್ಳುತ್ತಿದ್ದು ಸ್ವಲ್ಪೇ ಆರೋಗ್ಯದಲ್ಲಿ ಏರುಪೇರು ಆದರೂ ಸಹ ವೈಧ್ಯರನ್ನು ಸಂಪರ್ಕಿಸಿ ಸೂಕ್ತ ಚಿಕೀತ್ಸೆ ಪಡೆದುಕೊಳ್ಳಬೇಕು ಗ್ರಾಮಸ್ಥರಲ್ಲಿ ರೋಗದ ಲಕ್ಷಣಗಳ ಬಗ್ಗೆ ತಿಳುವಳಿಕೆ ನೀಡುವದರೊಂದಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸುವದು ಸರ್ಕಾರದ ಆರೋಗ್ಯ ಅಮೃತ ಅಭಿಯಾನದ ಉದ್ದೇಶವಾಗಿದೆ ಎಂದರು.
ಇನ್ನೋರ್ವ ಬಾವೂರ ಗ್ರಾಂಪಂ ಅಭಿವೃದ್ದಿ ಅಧಿಕಾರಿ ಎಸ್.ವಾಯ್ ತಳವಾರ ಅವರು ಮಾತನಾಡಿ ಆರೋಗ್ಯವಾಗಿದ್ದರೆ, ಸುಖವಾಗಿ ಬಾಳಬಹುದು. ಇಲ್ಲವಾದರೆ ದುಡಿದ ಹಣವನ್ನು ಆಸ್ಪತ್ರೆಗೆ ಖರ್ಚುಮಾಡಬೇಕಾಗುತ್ತದೆ. ಆದ್ದರಿಂದ ರೋಗದ ಲಕ್ಷಣ ಕಾಣುವ ಮುನ್ನವೇ ಆಗ್ಗಾಗ್ಗೆ ಆರೋಗ್ಯ ತಪಾಸಣೆ ಮಾಡಿಸಿಕೊಂಡು ವೈದ್ಯರು ನೀಡುವ ಸಲಹೆ ಸೂಚನೆಗಳನ್ನು ಪಾಲಿಸಬೇಕೆಂದರು.
ಈ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಧುಮೇಹ, ರಕ್ತದೊತ್ತಡ ಕಾಯಿಲೆಗಳ ತಪಾಸಣೆ ನೆಡೆಸಲಾಯಿತು. ಅಗತ್ಯ ಇರುವ ರೋಗಿಗಳಿಗೆ ಉಚಿತ ಔಷಧಿ ವಿತರಣೆ ಮಾಡಲಾಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾ.ಪಂ ಅಧ್ಯಕ್ಷರಾದ ಶ್ರೀಮತಿ ಶಾರದಾ ಮಲ್ಲಿಕಾರ್ಜುನ ಹಡಪದ ವಹಿಸಿದ್ದರು.
ಈ ಸಂದರ್ಭದಲ್ಲಿ ತಾಲೂಕು ಐಇಸಿ ಸಂಯೋಜಕ ಮಲಕಪ್ಪ.ಬಿ.ಎಮ್, ತಾ.ಪಂ ಮನರೇಗಾ ಆಡಳಿತ ಸಹಾಯಕ ತೌಸಿಪ್, ಆರೋಗ್ಯ ಇಲಾಖೆಯ ಪ್ರವೀಣ ಬಿದರಿ ಎಚ್‍ಐಓ, ಜೆ.ಎಸ್ ಚಟ್ಟರ್ ಪಿ.ಎಚ್.ಸಿ.ಓ ಶಂಕ್ರಮ್ಮ ಬಿರಾದಾರ, ಸಿಎಚ್‍ಓ, ಶಿವಾರಾಜ ಬಿರಾದರ, ಗ್ರಾಮ ಪಂಚಾಯತ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತರು ಉಪಸ್ಥಿತರಿದ್ದರು.