ಶಂಕರ್ ಬಿದರಿ ಆಯ್ಕೆಗೆ ಹರ್ಷ
ಕಲಬುರಗಿ,ಆ.8: ಅಖಿಲ ಭಾರತ ವೀರಶೈವ ಮಹಾಸಭೆಯ ರಾಜ್ಯಾಧ್ಯಕ್ಷರಾಗಿ ಶಂಕರ್ ಬಿದರಿ ಅವರು ಅವಿರೋಧವಾಗಿ ಆಯ್ಕೆಯಾಗಿರುವುದು ಸಂತೋಷದ ಸಂಗತಿಯಾಗಿದೆ ಎಂದು ಯುವಮುಖಂಡ ಎಂ.ಎಸ್ ಪಾಟೀಲ ನರಿಬೋಳ ಹರ್ಷ ವ್ಯಕ್ತಪಡಿಸಿದ್ದಾರೆ.
ಅವರಿಂದ ಮಹಾಸಭೆಗೆ ಲಕ್ಷಗಳಲ್ಲಿ ಇರುವ ಸದಸ್ಯರ ಸಂಖ್ಯೆ ಕೋಟಿ ಕೋಟಿ ಮುಟ್ಟಿದರೂ ಆಶ್ಚರ್ಯವಿಲ್ಲ. ಆ ರೀತಿಯಲ್ಲಿ ಅವರು ಕೆಲಸ ಮಾಡುತ್ತಾರೆ ಎಂಬ ನಂಬಿಕೆ ಬಲವಾಗಿದೆ.ಈಗ ಮಹಾಸಭೆಗೆ ಆನೆ ಬಲ ಬಂದಂತಾಗಿದೆ ಅವರಿಗೆ ಅಭಿನಂದನೆಗಳು ಎಂದಿದ್ದಾರೆ.ರಾಜ್ಯ ಕಾರ್ಯಕಾರಿಣಿಗೆ ಸ್ಪರ್ಧಿಸಿರುವ ಸಂತೋಷ ಪಾಟೀಲ ಸರಡಗಿ ಮತ್ತು ರವಿ ಬಿರಾದಾರ ಅವರು ಆಯ್ಕೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಆಶಯ ವ್ಯಕ್ತಪಡಿಸಿದ್ದಾರೆ.