ಮೊಬೈಲ್ ಬಿಡಿ ಪುಸ್ತಕ ಹಿಡಿ- ಚನ್ನಬಸವ
ಸಿರವಾರ.ಅ೦೮-
ಪಟ್ಟಣದ ಶ್ರೀ ಅಮರೇಗೌಡ ಪಾಟೀಲ್ ಬಯ್ಯಾಪುರ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯ ವತಿಯಿಂದ ಹಮ್ಮಿಕೊಂಡ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರದ ೫ನೇ ದಿನದಂದು ಹೆಗ್ಗಡದಿನ್ನಿ ಗ್ರಾಮದ ಸ.ಹಿ.ಪ್ರಾ.ಶಾಲೆ ಶಿಕ್ಷಕ ಚನ್ನಬಸವ ಅತಿಥಿಯಾಗಿ ಭಾಗವಹಿಸಿ ತಮ್ಮ ಭಾಷಣದಲ್ಲಿ “ಯುವ ಜನತೆ ಮತ್ತು ಮಾನವೀಯ ಮೌಲ್ಯಗಳು “ಎಂಬ ವಿಷಯದ ಬಗ್ಗೆ ಮಾತನಾಡಿ “ಯುವಕರು ಬೇರೆ ಯಾವ ವ್ಯಸನಕ್ಕೆ ಒಳಗಾಗದೆ ಪುಸ್ತಕದ ವ್ಯಸನವನ್ನ ಹಚ್ಚಿಕೊಂಡರೆ ಜ್ಞಾನ ವೃಕ್ಷವಾಗಿ ಬೆಳೆದು ಸಮಾಜ ,ದೇಶ ಅಭಿವೃದ್ಧಿಯ ಪಥದಲ್ಲಿ ಸಾಗುತ್ತದೆ ಮತ್ತು ಯುವ ಜನತೆ ತಮ್ಮಲ್ಲಿರುವ ಜ್ಞಾನವನ್ನು ದೇಶದ ಒಳಿತಿಗಾಗಿ ಬಳಸಬೇಕು, ತಾವು ಪಡೆದ ಜ್ಞಾನದಿಂದ ದೇಶದ ಒಳಿತಿಗಾಗಿ ಬದುಕದಿದ್ದರೆ ನೀವು ಮೊದಲ ದೇಶದ್ರೋಹಿಗಳಾಗುತ್ತಿರಿ ಎಂದು ವಿವೇಕಾನಂದರು ಹೇಳಿದ ಮಾತನ್ನ ಯುವ ವಿದ್ಯಾರ್ಥಿಗಳಿಗೆ ನೆನಪಿಸುತ್ತ ವೈಚಾರಿಕ ನೆಲೆಗಟ್ಟಿನಲ್ಲಿ, ಸಮಾನತೆ, ಸಹೋದರತೆ ಭ್ರಾತೃತ್ವ ಭಾವದಿಂದ ಬದುಕುವ ಪ್ರಬುದ್ಧ ಭಾರತ ಕಟ್ಟಲು ಕರೆ ನೀಡಿದರು. ಯವಜನತೆಯ ಕೈಯಲಿ ಹೆಚ್ಚಾಗಿ ಮೊಬೈಲ್ ಇರುತ್ತವೆ, ಆದರೆ ಪುಸ್ತಕ ಇರುವುದಿಲ್ಲ, ಮೊಬೈಲ್ ತಲೆ ತಗ್ಗಿಸುವುದನ್ನು ಕಲಿಸಿದರೆ, ಪುಸ್ತಕ ತಲೆ ಎತ್ತುವುದನ್ನ ಕಲಿಸುತ್ತದೆ. ಆಯ್ಕೆ ನಿಮಗೆ ಬಿಟ್ಟಿದೂ ಎಂದರು ಈ ಕಾರ್ಯಕ್ರಮದಲ್ಲಿ ಎನ್.ಎಸ್.ಎಸ್ ನೋಡಲ್ ಅಧಿಕಾರಿ ಪ್ರವೀಣ್, ಮತ್ತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಪನ್ಯಾಸಕ ಬಸವರಾಜ ಹೂಗಾರ್ , ನರಸಪ್ಪ ಗಣೆಕಲ್, ಹಾಗೂ ನಾಗಡದಿನ್ನಿಯ ಶಿಕ್ಷಕರಾದ ರವಿ ಭಾಗವಹಿಸಿದ್ದರು