ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬಿಳ್ಕೊಡುಗೆ
ಸಿರವಾರ.ಅ.೮-
ವಿದ್ಯಾರ್ಥಿಗಳು ಬುದ್ದಿವಂತಿಕೆ ಹಾಗೂ ಕೌಶಲ್ಯವನ್ನು ಹೆಚ್ಚಿಸಿ ಜೀವನದ ಹಾದಿಯಲ್ಲಿ ಸಾಗಬೇಕು. ಇದರೊಂದಿಗೆ ಪೋಷಕರು ಹಾಗೂ ಗುರು ಹಿರಿಯರಿಗೆ ಗೌರವವನ್ನು ನೀಡಬೇಕು, ವಿದ್ಯಾರ್ಥಿಗಳು ಸದಾ ಗುರಿಯತ್ತ ತಮ್ಮ ಚಿತ್ತವನ್ನು ನೀಡಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಮೊದಲಿಗಿಂತಲೂ ಇಂದು ವಿದ್ಯಾರ್ಥಿಗಳು ಹೆಚ್ಚು ಶ್ರಮವಹಿಸಿ ಅಭ್ಯಾಸದಲ್ಲಿ ತೊಡಗುತ್ತಿದ್ದಾರೆ ಇದರಿಂದ ಸಹಜವಾಗಿ ಅಂಕಗಳ ಗಳಿಕೆಯಲ್ಲಿ ಪೈಪೋಟಿ ಏರ್ಪಟ್ಟಿರುವುದನ್ನು ಸ್ವಾಗತಿಸುತ್ತೇನೆ. ಶಾಲೆ- ಕಾಲೇಜು ಹಂತದಲ್ಲಿ ಮಕ್ಕಳಿಗೆ ಸಂಸ್ಕತಿ, ಸಂಸ್ಕಾರ, ಪ್ರಾಪಂಚಿಕ ಜ್ಞಾನ ಹಾಗೂ ಕೌಶಲ್ಯಗಳನ್ನು ರೂಢಿಸಿಕೊಳ್ಳುವ ಮೂಲಕ ದೇಶವನ್ನು ಕಟ್ಟುವ ಕೆಲಸದಲ್ಲಿ ಸಹಕಾರಿಯಾದಲ್ಲಿ ಮಾತ್ರ ವಿದ್ಯಾರ್ಥಿಗಳು ಪಡೆದಂತಹ ಪದವಿಗಳಿಗೆ ಇನ್ನೂ ಹೆಚ್ಚಿನ ಮೆರಗು ಸಿಗಲಿದೆ, ಈ ನಿಟ್ಟಿನಲ್ಲಿ ಶಿಕ್ಷಣದ ನಂತರ ಒಳ್ಳೆಯ ಅವಕಾಶ ಗಳಿದ್ದು ಅವುಗಳನ್ನು ಪಡೆದುಕೊಂಡು ಸುಂದರ ಬದುಕು ಕಟ್ಟಿಕೊಳ್ಳುವಂತೆ ಕರೆ ನೀಡಿದರು.
ಸರ್ಕಾರಿ ಶಾಲೆ ಕಾಲೇಜುಗಳೆಂದರೆ ಮೂಗು ಮುರಿಯುವಂತಹ ಮನಸ್ಥಿತಿಯಿಂದ ಪಾಲಕರು ಮೊದಲು ಹೊರಬರಬೇಕು, ಖಾಸಗಿ ಕಾಲೇಜುಗಳಿಗಿಂತಲೂ ಹೆಚ್ಚು ಮೂಲ ಸೌಕರ್ಯಗಳು ಸರ್ಕಾರಿ ಕಾಲೇಜು ಗಳಲ್ಲಿ ಲಭ್ಯವಿದೆ, ಆರ್ಥಿಕವಾಗಿ ಹಿಂದುಳಿದ ಕುಟುಂಬದ ಹಿನ್ನೆಲೆಯಿಂದ ಬಂದಂತಹ ವಿದ್ಯಾರ್ಥಿಗಳಿಗೆ ಇಂತಹ ಸರ್ಕಾರಿ ಕಾಲೇಜುಗಳು ವರದಾನವಾಗಿದ್ದು, ಇಲ್ಲಿ ಸಿಗುವಂತಹ ಉಚಿತ ಶಿಕ್ಷಣವನ್ನು ಸದ್ಭಳಕೆ ಮಾಡಿಕೊಳ್ಳುವ ಮೂಲಕ ಪ್ರಜ್ಞಾವಂತ ನಾಗರಿಕನಾಗಿ ಹೊರ ಹೊಮ್ಮುವಂತೆ ಕರೆ ನೀಡಿದರು.
ಸಿರವಾರ ತಾಲೂಕ ಕೇಂದ್ರ, ಪ್ರಥಮ ದರ್ಜೇ ಕಾಲೇಜು ನನ್ನ ಅವದಿಯಲ್ಲಿ ಪ್ರಾರಂಭವಾಗಿತ್ತು . ಇಂದು ಕಾಲೇಜಿನ ವಿದ್ಯಾರ್ಥಿಗಳನ್ನು ನೋಡಿದಾಗ ಮಂಜೂರು ಮಾಡಿಸಿರುವುದಕ್ಕೆ ಸಾರ್ಥಕತೆ ಕಾಣುತ್ತಿದೆ. ನೂತನ ಕಟ್ಟಡ ನಿರ್ಮಾಣಕ್ಕೂ ಸಹ ಹಿಂದೆ – ಈಗ ಅನುದಾನ ನೀಡಿರುವ ಮುಂದಿನ ದಿನಗಳಲ್ಲಿ ನೂತನ ಕಟ್ಟಡದಲ್ಲಿ ಪಾಠ ಕೇಳಿ, ಉನ್ನತ ಮಟ್ಟಕ್ಕೆ ಬೆಳೆಯಿರಿ ಎಂದರು. ಉಪನ್ಯಾಸಕ ಲಕ್ಷ್ಮಣ ಯಾದವ ವಾರ್ಷಿಕ ವರದಿ ವಾಚನೆ ಮಾಡಿದರು. ಈ ಸಂದರ್ಭದಲ್ಲಿ ಪಂಚ ಗ್ಯಾರೆಂಟಿ ಯೋಜನೆ ಅನುಷ್ಠಾನ ಸಮಿತಿ ಅದ್ಯಕ್ಷ ಬ್ರೀಜೇಶ ಪಾಟೀಲ್, ರಮೇಶ ದರ್ಶನಕರ್, ಅರಕೇರಿ ಶಿವಶರಣ ಸಾಹುಕಾರ, ಪ.ಪಂ ಸದಸ್ಯ ವೈ.ಭೂಪನಗೌಡ, ಸೂರಿ ದುರುಗಣ್ಣನಾಯಕ, ಮಾರ್ಕಪ್ಪ, ಮಾಜಿ ಸದಸ್ಯ ನಾಗರಾಜ ಚಿನ್ನಾನ, ಪ್ರಾಚಾರ್ಯ ಡಾ.ಪಾಂಡು, ವೆಂಕಟೇಶ ನವಲಕಲ್ , ನಿರುಪಣೆಯನ್ನು ಉಪನ್ಯಾಸಕಿ ಸಲ್ಮಾ ಮಾಡಿದರು, ಸಹಿನಿಯಬೇಗಂ, ಸುಭಾನಸಾಬ್, ರಾಜಶೇಖರ, ಬಸವರಾಜ, ಕೃಷ್ಣ ಹನುಮಂತ ಚನ್ನೂರು, ಇನ್ನಿತರರು ಇದರು