ಬಾವಿಗೆ ಬಿದ್ದ ನವಿಲು ರಕ್ಷಣೆ
ವಿಜಯಪುರ, ಆ.8:ಆಯತಪ್ಪಿ ಬಾವಿಯಲ್ಲಿ ಬಿದ್ದಿದ್ದ ನವಿಲುವೊಂದನ್ನು ಬಸವನ ಬಾಗೇವಾಡಿ ತಾಲೂಕು ಅಗ್ನಿಶಾಮಕ ದಳ ಸಿಬ್ಬಂದಿ ರಕ್ಷಣೆ ಮಾಡಿದ ಘಟನೆ ಮುಕಾರ್ತಿಹಾಳ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಈರಣ್ಣ ತೋಟದ ಎಂಬುವವರ ಜಮೀನಿನ ಬಾವಿಯಲ್ಲಿ ರಾಷ್ಟ್ರೀಯ ಪಕ್ಷಿ ನವಿಲು ಬಿದ್ದ ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಅಗ್ನಿ ಶಾಮಕ ಸಿಬ್ಬಂದಿ ಬಾವಿ ನೀರಿಗಿಳಿದು ಪ್ರಯಾಸ ಪಡುತ್ತಿದ್ದ ನವಿಲು ರಕ್ಷಿಸುವಲ್ಲಿ ಯಶಸ್ಬಿಯಾಗಿದ್ದಾರೆ.
ಅಗ್ನಿಶಾಮಕ ಸಿಬ್ಬಂದಿ ಬಾವಿಯಲ್ಲಿ ಇಳಿದು ನವಿಲನ್ನು ಹಗ್ಗದಿಂದ ಕಟ್ಟಿ ಮೇಲೆತ್ತಿ ರಕ್ಷಣೆ ಮಾಡಿದ್ದಾರೆ.
ಅಗ್ನಿಶಾಮಕ ದಳದ ಠಾಣಾಧಿಕಾರಿ ಸಂಗಮೇಶ ಶಿವಪೂಜಿ, ಮಹಾಂತೇಶ ಮಮದಾಪೂರ,
ಶ್ರೀಶೈಲ ಮೂಕರ್ತಿಹಾಳ, ಚಂದ್ರಗುಪ್ತ ಅಂಬಳನೂರ, ಶಿವಪ್ಪ ಅವರಿಂದ ರಕ್ಷಣೆ ಕಾರ್ಯಾಚರಣೆ ನಡೆಯಿತು.
ಅಗ್ನಿಶಾಮಕ ದಳ ಸಿಬ್ಬಂದಿ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.