ಶಾಸಕರಿಂದ ಪಿಯು ವಿಜ್ಞಾನ ಪ್ರಯೋಗಾಲಯ ಉದ್ಘಾಟನೆ
ಸಿರವಾರ.ಅ.೦೮-
ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ನಗರ ಪ್ರದೇಶಗಳಿಗೆ ಹೋಗಿ ಅಭ್ಯಾಸ ಮಾಡಲು ಸಾದ್ಯವಾಗದಿರುವುದನ್ನು ಅರಿತು, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಿಜ್ಞಾನ ಪ್ರಯೋಗಾಲಯ ಉದ್ಘಾಟಿಸಲಾಗಿದ್ದೂ ವಿದ್ಯಾರ್ಥಿಗಳು ಸಮಯ ವ್ಯರ್ಥ ಮಾಡದೆ ಅಭ್ಯಾಸ ಮಾಡಿ ಕಾಲೇಜಿಗೆ ಹೆಸರು ತನ್ನಿ ಎಂದು ಮಾನ್ವಿ ವಿಧಾನಸಭೆ ಶಾಸಕರಾದ ಜಿ.ಹಂಪಯ್ಯನಾಯಕ ಹೇಳಿದರು. ಪಟ್ಟಣದ ಪಿಯುಸಿ ಕಾಲೇಜಿನಲ್ಲಿ ೯ ಲಕ್ಷ ವೆಚ್ಚದ ಉನ್ನತಿಕರಿಸಿದ ಆದರ್ಶವಿಜ್ಞಾನ ಪ್ರಯೋಗಾಲಯ ಉದ್ಘಾಟಿಸಿ ಮಾತನಾಡಿದ ಅವರು ನಮ್ಮ ಭಾಗದವರಿಗೆ ಕಲಾ ವಿಭಾಗ ಸರಳ ಎಂದು ಹೆಚ್ಚಾಗಿ ಮಾಡುತ್ತಾರೆ. ವಿಜ್ಞಾನವು ಸರಳ ವಿಷಯವಾಗಿದೆ. ಖಾಸಗಿ ಕಾಲೇಜಿಗೂ ಸರ್ಕಾರಿ ಕಾಲೇಜಿ ಕಮ್ಮಿ ಇಲಾ ಎನ್ನುವಂತೆ ಆದುನಿಕರಣ ತಂತ್ರಜ್ಞಾನ ಮೂಲಕ ಪಾಠ ಮಾಡಲು ಈ ಪ್ರಯೋಗಾಲಯ ಸಹಕಾರಿ. ಇಲಿ ೧೮ ಕಂಪ್ಯೂಟರ್, ೨ ಪ್ರಾಜೇಕ್ಟರ್ ಇನೂ ಅನೇಕ ಸಲಕರಣೆ ಇವೆ ವಿದ್ಯಾರ್ಥಿಗಳು ಸಮಯ ವ್ಯರ್ಥಮಾಡದೆ ಅಭ್ಯಾಸ ಮಾಡಿ ಉನ್ನತ ಮಟ್ಟದ ಅದಿಕಾರಿಯಾಗಿ ಎಂದರು. ಈ ಸಂದರ್ಭದಲ್ಲಿ ಪಂಚ ಗ್ಯಾರೆಂಟಿ ಯೋಜನೆ ಅನುಷ್ಠಾನ ಸಮಿತಿ ಅದ್ಯಕ್ಷ ಬ್ರೀಜೇಶ ಪಾಟೀಲ್, ರಮೇಶ ದರ್ಶನಕರ್, ಅರಕೇರಿ ಶಿವಶರಣ ಸಾಹುಕಾರ, ಪ.ಪಂ ಸದಸ್ಯ ವೈ.ಭೂಪನಗೌಡ, ಸೂರಿ ದುರುಗಣ್ಣನಾಯಕ, ಮಾರ್ಕಪ್ಪ, ಮಾಜಿ ಸದಸ್ಯ ನಾಗರಾಜ ಚಿನ್ನಾನ, ಪ್ರಾಚಾರ್ಯರಾದ ವೆಂಕಟೇಶ, ಡಾ.ಪಾಂಡು, ಉಪನ್ಯಾಸಕರಾದ ಹನುಮಂತ ಚನ್ನೂರು,ಫರೀದ್, ಶ್ವೇತ ಸಿಬ್ಬಂದಿ ವರ್ಗದವರು ಇದರು