ಆ೧೦ ಸಂಗೀತ ಸಂಜೆ , ಸನ್ಮಾನ ಕಾರ್ಯಕ್ರಮ
ರಾಯಚೂರು, ಆ .೮-
ಗೆಳೆಯರ ಸಾಂಸ್ಕೃತಿಕ ವೇದಿಕೆ ವತಿಯಿಂದ ಆಗಸ್ಟ್ ೧೦ರಂದು ಕನ್ನಡ, ತೆಲುಗು, ಹಿಂದಿ ಚಿತ್ರ ಗೀತೆಗಳ ಸಂಗೀತ ಸಂಜೆ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆ ಅಧ್ಯಕ್ಷ ರೆಡ್ಡಿ ತಿಮ್ಮಯ್ಯ ವಕೀಲರು ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದುಗೋಷ್ಠಿ ಉದ್ದೇಶಿಸಿ ಮಾತನಾಡಿ, ಕಾರ್ಯಕ್ರಮವು ನಗರದ ರಂಗಮಂದಿರದಲ್ಲಿ ಸಂಜೆ ೫:೩೦ ಕ್ಕೆ ಜರುಗಲಿದೆ ಎಂದ ಅವರು, ಕಾರ್ಯಕ್ರಮ ಉದ್ಘಾಟನೆಯನ್ನು ಡಾ. ಎ.ಎಸ್.ಆನಂದ ಅವರು ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ಸರ್ವೋಚ್ಚ ನ್ಯಾಯಾಲಯ ನ್ಯಾಯಾಧೀಶರಾದ ಕೆ ದೇವಣ್ಣ ನಾಯಕ್ ಅವರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ರಾಯಚೂರು ನ್ಯಾಯವಾದಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ವಕೀಲರು, ಕೆಪಿಸಿಸಿ ಮಾಜಿ ಸದಸ್ಯ ಹಾಗೂ ಹಿರಿಯ ನ್ಯಾಯವಾದಿ ಶ್ರೀಕಾಂತ್ ರಾವ್, ಬಿಜೆಪಿ ಮುಖಂಡ ಹಾಗೂ ಹಿರಿಯನಾಯವಾದಿ ಹೆಚ್. ಜಗದೀಶ್, ಆರ್ ಡಿ ಎ ಮಾಜಿ ಅಧ್ಯಕ್ಷ ಬಿ ಗೋವಿಂದ, ಹಿರಿಯ ನ್ಯಾಯವಾದಿ ಹಾಗೂ ಕಾಂಗ್ರೆಸ್ ಮುಖಂಡ ಬಿ ನಾಗಪ್ಪ,ನಿವೃತ್ತ ಹಿರಿಯ ಮೊಟರ್ ವಾಹನ ನಿರೀಕ್ಷಕ ವೆಂಕಟೇಶ್ವರ ರಾವ್ ಆಗಮಿಸಲಿದ್ದಾರೆ ಎಂದರು. ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಮೋಹನ್ ವಕೀಲರು ಸೇರಿದಂತೆ ಇತರರು ಉಪಸ್ಥಿತರಿದ್ದರು.