ಬಿಜೆಪಿ, ಜೆಡಿಎಸ್ ನಿಂದ ಸಿಎಂ ವಿರುದ್ಧ ದ್ವೇಷದ ರಾಜಕಾರಣ
(ಸಂಜೆವಾಣಿ ವಾರ್ತೆ)
ರಾಯಚೂರು,ಆ.೮- ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಪಾದಯಾತ್ರೆ ಅರ್ಥಹೀನವಾಗಿರುವಂತಹದ್ದು ಎಂದು ಕೆಪಿಸಿಸಿ ಮಹಿಳಾ ವಿಭಾಗದ ರಾಜ್ಯ ಉಪಾಧ್ಯಕ್ಷ ಶ್ರೀದೇವಿ ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಮುಡಾ ಹಗರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಧರ್ಮ ಪತ್ನಿ ಪಾರ್ವತಿ ಅವರದ್ದು ಯಾವುದೇ ಪಾತ್ರವಿಲ್ಲ. ಆರೋಪಿಸುತ್ತಿರುವವರ ಆಡಳಿತಾವಧಿಯಲ್ಲಿ ಪಾರ್ವತಿ ಅವರಿಗೆ ಶೇ.೩೮% ಭೂಮಿ ನೀಡಲಾಗಿದೆ. ನಿಯಮದ ಪ್ರಕಾರ ೫೦ % ಪ್ರತಿಶತ ಭೂಮಿ ನೀಡಬೇಕಾಗಿತ್ತು. ಅದು ಅಲ್ಲದೆ ಪಾರ್ವತಿ ಸಹೋದರರ ಜಮೀನನ್ನು ಮುಡಾ ದವರು ಖರೀದಿಸಿದ್ದರಿಂದ ಅದರ ಬದಲಾಗಿ ಪ್ಲಾಟುಗಳನ್ನು ಪಡೆಯಲಾಗಿದೆ. ಆದರೆ ದೇವೇಗೌಡರ ಕುಟುಂಬದವರಿಗೂ ಪ್ಲಾಟ್ ಗಳನ್ನು ನೀಡಲಾಗಿದೆ ಅದರ ಬಗ್ಗೆಯೂ ತನಿಖೆಯಾಗಲಿ ಎಂದು ಆಗ್ರಹಿಸಿದರು.
ಮುಡಾ ಪ್ರಕರಣದಲ್ಲಿ ರಾಜ್ಯಪಾಲರು ಆತುರದ ನಿರ್ಣಯ ಕೈಗೊಂಡು ಬಿಜೆಪಿಯ ಕೈಗೊಂಬೆಯಂತೆ ವರ್ತಿಸಿದ್ದಾರೆ. ಇಡೀ ಕಾಂಗ್ರೆಸ್ ಪಕ್ಷ ಮುಖ್ಯಮಂತ್ರಿಗಳ ಬೆಂಬಲಕ್ಕಿದೆ. ಜನಾಂದೋಲನ ಸಭೆಯನ್ನು ಯಶಸ್ವಿಯಾಗಿ ನಾವೆಲ್ಲರೂ ಶ್ರಮಿಸುತ್ತೇವೆ. ಮುಖ್ಯಮಂತ್ರಿಗಳ ಕೈ ಬಲಪಡಿಸಿ ಜನಪರವಾಗಿ ಆಡಳಿತವನ್ನು ನಮ್ಮ ಮುಂದುವರೆಸಲಿದೆ. ವಿರೋಧಪಕ್ಷಗಳ ತಂತ್ರಗಳಿಗೆ ಮಣಿಯುವ ಮಾತೇ ಇಲ್ಲ ಎಂದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಮಹಿಳಾ ವಿಭಾಗದ ರಾಜ್ಯಪ್ರಧಾನ ಕಾರ್ಯದರ್ಶಿ ಶಶಿಕಲಾ ಭೀಮರಾಯ, ರಾಜ್ಯ ಕಾರ್ಯದರ್ಶಿ ಮಂಜುಳಾ ಅಮರೇಶ, ಮಾಲಾ ಭಜಂತ್ರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.