ಡೋನೆಷನ್ ವಿರುದ್ಧ ಕ್ರಮಕ್ಕೆ ಒತ್ತಾಯ
ರಾಯಚೂರು.ಆ೮:ಡೋನೆಷನ್ ಪಡೆಯುತ್ತಿರುವ ನಗರದ ಸೆಂಟ್ ಮೇರಿಸ್ ಕಾನ್ವೆಂಟ್ ಆಡಳಿತ ವಿರುದ್ಧ ಕ್ರಮ ಜರುಗಿಸಿಬೇಕೆಂದು ದಿ ಲೆಜೆಂಡ್ ಟಿಪ್ಪು ಸುಲ್ತಾನ್ ಸಂಘ ಒತ್ತಾಯಿಸಿದೆ.
ಈ ಸಂಬಂಧ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿ ನಮ್ಮ ಸಂಘದ ವತಿಯಿಂದ ಲಭ್ಯವಿರುವ ಸಾಕ್ಷಾಧಾರಗಳನ್ನು ತಮ್ಮ ಕಾರ್ಯಾಲಯದಲ್ಲಿ ಸಲ್ಲಿರುತ್ತೇವೆ. ಆ ಆಧಾರದ ಮೇಲೆ ರೈಟ್ ಟು ಎಜುಕೇನ್ ಆಕ್ಟ್ ೨೦೦೯ ಅಡಿಯಲ್ಲಿ ಸೆಕ್ಷನ್ ೧೩ (೨) ಮತ್ತು ಕರ್ನಾಟಕ ಎಜ್ಯುಕೇಷನ್ ಆಕ್ಟ್ ಅಡಿಯಲ್ಲಿ ಸೆಕ್ಷನ್ ೪೮ ೫೧ ಪ್ರಕಾರ ತಾವುಗಳು ಸೂಕ್ತ ಕ್ರಮ ಜರುಗಿಸಬೇಕು ಆದರೂ ಕ್ರಮ ಜರುಗಿಸಿಲ್ಲ ಎಂದು ಆರೋಪಿಸಿದ್ದಾರೆ
ಕೂಡಲೇ ಈ ವಿಷಯವನ್ನು ಗಂಭಿರವಾಗಿ ಪರಿಗಣಿಸಿ ಈ ಕಾನೂನು ಪ್ರಕಾರ ಬರುವ ಮೂರು ದಿನಗಳ ಅವಧಿಯಲ್ಲಿ ಕ್ರಮ ಜರುಗಿಸಬೇಕು.
ನಿರ್ಲಕ್ಷ್ಯಸಿದರೆ ಜಿಲ್ಲಾಧಿಕಾರಿಗಳಿಂದ ಪ್ರತಿಭಟನೆಗೆ ಅನುಮತಿ ಪಡೆದು ನಮ್ಮ ಸಂಘಟನೆಯ ಸದಸ್ಯರು ಮತ್ತು ವಿದ್ಯಾರ್ಥಿಗಳ ಪಾಲಕರು ಸೇರಿ ತಮ್ಮ ಕಾರ್ಯಾಲಯದಲ್ಲಿ ಪ್ರತಿಭಟನೆ ಮಾಡಲಾಗವುದುದೆಂದು ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಘಟನೆ ಪದಾಧಿಕಾರಿಗಳಾದ ಸೈಯದ್ ರಶೀದ್.ಮಹ್ಮದ್ ಅನ್ವರ್ ರಾಜ್ಯ ಉಪಧ್ಯಾಕ್ಷರು,ಆದಿಲ್ ಚೌದ್ರಿ,ಇಮ್ರಾನ್ ಬಡೇಸಾಬ್ ಖುತುಬುದ್ದೀನ್ ,ಅಲ್ತಾಫ್ ಅಹಮ್ಮದ್ ಇದ್ದರು.