ಅಧ್ಯಕ್ಷ ಪಟ್ಟಕ್ಕಾಗಿ ಭೂದಾನಿಯಿಂದ ಶಾಲೆಗೆ ಬೀಗ
ತಾಳಿಕೋಟೆ:ಆ.8: ಸರ್ಕಾರಿ ಶಾಲೆಯ ಕಟ್ಟಡಕ್ಕೆ ನಾನು ಭೂದಾನ ನೀಡಿದ್ದೇನೆ ಶಾಲೆಯ ಎಸ್.ಡಿ.ಎಂ.ಸಿ.ಅಧ್ಯಕ್ಷ ಸ್ಥಾನದಲ್ಲಿಯೇ ನನ್ನನ್ನೇ ಮುಂದುವರೆಸಬೇಕೆಂದು ಹಠಕ್ಕೆ ಬಿದ್ದ ಭೂಧಾನಿ ರಾಮನಗೌಡ ಎಂಬವರು ಶಾಲೆಯಿಂದ ಮಕ್ಕಳನ್ನು ಶಿಕ್ಷಕರನ್ನು ಹೊರಗೆ ಹಾಕಿ ಶಾಲೆಗೆ ಬೀಗ ಹಾಕಿದ ಘಟನೆ ತಾಲೂಕಿನ ಬಳಗಾನೂರ ಗ್ರಾಮದ ಕ್ರಾಸ್ ಹತ್ತಿರ ನಡೆದಿದೆ.
ಬಳಗಾನೂರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಬಳಗಾನೂರ ಗ್ರಾಮದ ರಾಮನಗೌಡ ದೊರನಳ್ಳಿ ಎಂಬವರ ತಂದೆ ಶಾಲಾ ಕಟ್ಟಡಕ್ಕಾಗಿ 3 ಗುಂಟು ಜಮೀನನ್ನು 2009ರಲ್ಲಿ ದಾನ ಪತ್ರವನ್ನು ಮಾಡಿ ಜಾಗೆಯನ್ನು ನೀಡಿದ್ದರು ಅಲ್ಲಿಂದ ಇಲ್ಲಿಯವರೆಗೂ ರಾಮನಗೌಡ ದೊರನಳ್ಳಿ ಎಂಬವರನ್ನೇ ಎಸ್‍ಡಿಎಂಸಿ ಅಧ್ಯಕ್ಷರನ್ನಾಗಿ ಮುಂದುವರೆಸಿಕೊಂಡು ಬರಲಾಗಿತ್ತು ಆದರೆ ಸರ್ಕಾರದ ಸುತ್ತೋಲೆಯಂತೆ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳ ಪೋಷಕರೇ ಎಸ್‍ಡಿಎಂಸಿ ಅಧ್ಯಕ್ಷರಾಗಿ ನೇಮಕವಾಗಬೇಕೆಂಬ ನಿಯಮದ ಹಿನ್ನೇಲೆ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್.ಸಾವಳಗಿ ಅವರು ಆ ಹುದ್ದೆಗೆ ಪೊಷಕರ ಸಭೆಯಲ್ಲಿ ಆಯ್ಕೆಗೊಂಡ ಬೇರೆಯವರನ್ನು ಅಧ್ಯಕ್ಷರನ್ನಾಗಿ ನೇಮಿಸಿ ಆದೇಶ ಹೊರಡಿಸಿದ್ದರು.
ಈ ಆದೇಶ ಹೊರಬಿಳ್ಳುತ್ತಿದ್ದಂತೆ ಕುಪಿತಗೊಂಡ ಭೂಧಾನಿ ರಾಮನಗೌಡ ದೊರನಳ್ಳಿ ಅವರು ಬುಧವಾರರಂದು ಬೆಳಿಗ್ಗೆ ಶಾಲೆ ಪ್ರಾರಂಭವಾಗುತ್ತಿದ್ದಂತೆ ಶಾಲೆಗೆ ಆಗಮಿಸಿ ಶಾಲೆ ಕಟ್ಟಡಕ್ಕೆ ಭೂಮಿ ನೀಡಿದವರು ನಾವು ನಮ್ಮನ್ನು ಬಿಟ್ಟು ಬೇರೆಯವರನ್ನು ಅಧ್ಯಕ್ಷರನ್ನಾಗಿ ಹೇಗೆ ಮಾಡಿದ್ದಾರೆ ಮರಳಿ ನನ್ನನ್ನೇ ಅಧ್ಯಕ್ಷನ್ನನ್ನಾಗಿ ಮಾಡುವವರೆಗೂ ಶಾಲೆಗೆ ಹೊರಗೆ ನಡೆಯಿರಿ ಎಂದು ಶಾಲೆಯಲ್ಲಿದ್ದ ಮಕ್ಕಳನ್ನು ಮತ್ತು ಶಾಲಾ ಶಿಕ್ಷಕರನ್ನು ಹೊರಗೆ ಅಟ್ಟಿ ಶಾಲೆಯ ಎಲ್ಲ ಕೋಣೆಗಳಿಗೆ ಮತ್ತು ಶಾಲೆಗೆ ಗೇಟಿಗೆ ಬೀಗ ಜಡೆದಿದ್ದಾನೆ.
ಈ ವಿಷಯವನ್ನು ಅರೀತ ಶಿಕ್ಷಕ ವೃಂದದವರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ನಡೆದ ಘಟನೆಯ ಕುರಿತು ಮಾಹಿತಿ ನೀಡಿ ಶಾಲೆಯ ಹೊರಗಡೆಯೇ ಮಕ್ಕಳಿಗೆ ಪಾಠಭೋದನೆ ಮಾಡುತ್ತಾ ಕುಳಿತುಕೊಂಡಿದ್ದರು.
ವಿಷಯವನ್ನು ಅರೀತ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್.ಸಾವಳಗಿ ಅವರು ಪೊಲೀಸ್‍ಠಾಣೆಗೆ ಮಾಹಿತಿ ನೀಡುವದರೊಂದಿಗೆ ಸ್ಥಳಕ್ಕೆ ಆಗಮಿಸಿ ಭೂಧಾನಿಯ ಜೊತೆಗೆ ಮಾತನಾಡಿ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳ ಪೊಷಕರೇ ಎಸ್‍ಡಿಎಂಸಿ ಅಧ್ಯಕ್ಷರಾಗಿರಬೇಕೆಂಬ ಸರ್ಕಾರದ ನಿಯಮವಿದೆ ನಿಮ್ಮ ಮಕ್ಕಳು ಒಬ್ಬರೂ ಕೂಡಾ ಈ ಶಾಲೆಯಲ್ಲಿ ಕಲಿಯುತ್ತಿಲ್ಲಾ ನಾವು ಸರ್ಕಾರದ ನಿಯಮವನ್ನು ಪಾಲಿಸಿದ್ದೇವೆ ಮತ್ತು ಎಲ್ಲ ಎಸ್‍ಡಿಎಂಸಿ ಸದಸ್ಯರ ಒಪ್ಪಿಗೆಯ ಮೇಲೆಯೇ ಮಾಡಲಾಗಿದೆ ಈ ವಿಷಯ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ ಸರ್ಕಾರದ ನಿಯಮ ಪಾಲನೆ ಮಾಡಿ ಎಂದು ಸೂಚಿಸಿದ್ದಾರೆ ಶಾಲೆಗೆ ಹಾಕಿದ ಬೀಗ ತೆಗೆಯಿರಿ ಎಂದು ಸಾಕಷ್ಟು ಮನವಿ ಮಾಡಿ ಮನವಲಿಸಲು ಪ್ರಯತ್ನಿಸಿದರೂ ಪ್ರಯೋಜನೆಗೆ ಬರಲಿಲ್ಲಾ.