ಆಗಸ್ಟ್ ೧೦ ಕ್ಕೆ ಅಲ್ ಹಿರಾ ಶಾಲೆಯಲ್ಲಿ ವೈಜ್ಞಾನಿಕ ಸಂಶೋಧನೆ ಕಾರ್ಯಕ್ರಮ
(ಸಂಜೆವಾಣಿ ಪ್ರತಿನಿಧಿಯಿಂದ)
ಮಾನವಿ,ಆ,೦೮-
ಪಟ್ಟಣದ ಪತ್ರಿಕಾ ಭವನದಲ್ಲಿ ಪತ್ರಿಕಾ ಗೋಷ್ಠಿಯನ್ನು ನಡೆಸಿ ಮಾತನಾಡಿದ ಅಲ್ ಹಿರಾ ಪಬ್ಲಿಕ್ ಶಾಲೆಯ ಕಾರ್ಯದರ್ಶಿ ಶೇಕ್ ಫರೀದ್ ಉಮ್ರಿ ಅವರು ಎಜೆ ಅಕಾಡೆಮಿ ಫಾರ್ ರಿಸರ್ಚ್ ಆಂಡ್ ಡೆವಲಪ್ ಮೆಂಟ್ ರಾಯಚೂರು ಹಾಗೂ ಅಲ್-ಹಿರಾ ಶಾಲೆ ಮತ್ತು ಜ್ಞಾನ ನಿಧಿ ಇಂಟರ್ ನ್ಯಾಷನಲ್ ಶಾಲೆ ಸಹಯೋಗದೊಂದಿಗೆ ಸಂಶೋಧನೆ ಆಧಾರಿತ ಕಾರ್ಯಕ್ರಮ ನಡೆಯಲಿದೆ.
ಈ ಕಾರ್ಯಕ್ರಮದಿಂದ ವಿದ್ಯಾರ್ಥಿಗಳ ಸೃಜನಶೀಲತೆ ಮತ್ತು ಹೊಸದನ್ನು ಪ್ರಯತ್ನಿಸುವ ಸಾಮರ್ಥ್ಯವನ್ನು ಹೆಚ್ಚಿಸಲು, ವಿವಿಧ ವೈಜ್ಞಾನಿಕ ಕ್ಷೇತ್ರಗಳಲ್ಲಿ, ತೊಡಗಿಸಿಕೊಳ್ಳಲು ಉತ್ತೇಜಿಸುತ್ತದೆ.
ಈ ಸೈನ್ಸ್ ಫೇರ್ ನಲ್ಲಿ ೪ನೇ ತರಗತಿಯಿಂದ ೧೦ನೇ ತರಗತಿಯವರೆಗಿನ ವಿದ್ಯಾರ್ಥಿಗಳು ಪಾಲ್ಗೊಳ್ಳಬಹುದು ಮತ್ತು ಇದು ಭೌತಿಕ ವಿಜ್ಞಾನ, ಜೀವಶಾಸ್ತ್ರ ಮತ್ತು ಪರಿಸರ ವಿಜ್ಞಾನಗಳಂತಹ ವಿಭಾಗಗಳಲ್ಲಿನ ಮೇಲೆ ಕಾರ್ಯಕ್ರಮವು ನಡೆಯಲಿದೆ.
ಸರ್ಕಾರಿ ಮತ್ತು ಖಾಸಗಿ ಶಾಲೆಗಳ ವಿದ್ಯಾರ್ಥಿಗಳಿಗೆ ಪಾಲ್ಗೊಳ್ಳಬಹುದು, ಮಕ್ಕಳಿಗೆ ವೈಜ್ಞಾನಿಕ ಯೋಜನೆಗಳನ್ನು ಪ್ರದರ್ಶಿಸಲು ಒಂದು ದೊಡ್ಡ ವೇದಿಕೆ ಒದಗಿಸುತ್ತದೆ.
ಭಾಗವಹಿಸಿದ ವಿದ್ಯಾರ್ಥಿಗಳಿಗೆ ತಜ್ಞರ ಪಾನೆಲ್ ಮೂಲಕ ತೀರ್ಮಾನಿಸಲ್ಪಟ್ಟ ಅತ್ಯುತ್ತಮ ಯೋಜನೆಗಳಿಗೆ ಬಡ್ಡಿಂಗ್ ಸೈಂಟಿಸ್ಟ್, ಇಮರ್ಜಿಂಗ್ ಸೈಂಟಿಸ್ಟ್ ಮತ್ತು ಯಂಗ್ ಸೈಂಟಿಸ್ಟ್ ಎಂಬ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ವೈಯಕ್ತಿಕವಾಗಿ ಮತ್ತು ಗುಂಪು ಯೋಜನೆಗಳಿಗೆ ಪ್ರಶಸ್ತಿಗಳನ್ನು ನೀಡಲಾಗುತ್ತದೆ.
ಕಾರ್ಯಕ್ರಮವು ಆಗಸ್ಟ್ ೧೦ ರಂದು ಬೆಳಿಗ್ಗೆ ೧೦:೩೦ ರಿಂದ ಮಧ್ಯಾಹ್ನ ೧:೩೦ ಅಲ್-ಹಿರಾ ಶಾಲೆಯ ಆಡಿಟೋರಿಯಂನಲ್ಲಿ ಶಿಕ್ಷಕರ ಮಾರ್ಗದರ್ಶನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಪ್ರತಿಯೊಂದು ಶಾಲೆಯು, ವಿಜ್ಞಾನ, ಪರಿಸರ ಅಧ್ಯಯನ (ಇಗಿS), ಅಥವಾ ಗಣಿತವನ್ನು ಅಧ್ಯಾಪನ ಮಾಡುಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಅಲೀಮ್ ಖಾನ್, ಮೊಮ್ಮದ್ ಹರನ್, ಮಹೆಬೂಬ್ ಪಟೇಲ್, ಅಬ್ದುಲ್ ರಹೀಂ, ರಾಜು ತಾಳಿಕೋಟೆ ಉಪಸ್ಥಿತರಿದ್ದರು.