ರಾಷ್ಟ್ರಮಟ್ಟದ ಚಿಣ್ಣರ ಚಿತ್ರ ಚಿತ್ತಾರ ಪ್ರತಿಭಾ ಪ್ರದರ್ಶನ ಸ್ಪರ್ಧೆಯಲ್ಲಿ ಜಯಗಳಿಸಿದ ಕುಮಾರಿ ಚಿನ್ಮಯಿ
ರಾಯಚೂರು.ಆ.೦೮-
ರಾಷ್ಟ್ರಾದ್ಯಂತ ನಡೆದ ೨೦೨೩-೨೪ರ ’ಚಿಣ್ಣರ ಚಿತ್ರ ಚಿತ್ತಾರ’ ರಾಷ್ಟ್ರ ಮಟ್ಟದ ಚಿತ್ರಕಲೋತ್ಸವದಲ್ಲಿ ಲಕ್ಷಕ್ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿ ಅದ್ಭುತವಾಗಿ ತಮ್ಮ ಪ್ರತಿಭಾ ಪ್ರದರ್ಶನ ನೀಡಿದ್ದಾರೆ. ತೀರ್ಪುಗಾರರನ್ನು ಸಹ ನಿಬ್ಬೆರಗಾಗುವಂತೆ ಮಾಡಿ ಕಲಾ ಇತಿಹಾಸದಲ್ಲಿಯೇ ಇದೊಂದು ಮೈಲಿಗಲ್ಲಾದ ದಾಖಲೆ ಸ್ಥಾಪಿಸಿದ್ದು ನಮಗೆಲ್ಲಾ ಹೆಮ್ಮೆಯ ವಿಷಯ.
ಇತ್ತೀಚಿಗೆ ನಡೆದ ರಾಷ್ಟ್ರಮಟ್ಟದ ಚಿಣ್ಣರ ಸ್ಪರ್ಧೆಯಲ್ಲಿ (ಮದರ್ ಎಜುಕೇಶನ್ ಟ್ರಸ್ಟ್ ) ಶ್ರೀಮಲ್ ರಿಖಬಚಂದ ಸುಖಾಣಿ ಪ್ರೌಢಶಾಲೆ ಯ ೯ನೇ ತರಗತಿ ವಿದ್ಯಾರ್ಥಿನಿ ಕುಮಾರಿ ಚಿನ್ಮಯಿ ತಂದೆ ಜಿ. ಮಂಜುನಾಥ ಅತ್ಯ ಅಮೋಘ ಪ್ರದರ್ಶನ ನೀಡಿ ಆಯ್ಕೆಯಾಗಿದ್ದಾಳೆ. ೧೭ ಆಗಸ್ಟ್ ೨೦೨೪ ರಂದು ಧಾರವಾಡದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮಾನ್ಯ ಮುಖ್ಯಮಂತ್ರಿಗಳಿಂದ ಪ್ರತಿಭಾ ಪುರಸ್ಕಾರ ಹಾಗೂ ಬಹುಮಾನ ಪಡೆಯಲಿದ್ದಾಳೆ.
ಸಾಧನೆಗೆ ಮೆಚ್ಚಿ ಶಾಲೆಯ ಅಧ್ಯಕ್ಷರಾದ ವಿಮಲಾಬಾಯಿ ಸುಖಾಣಿ ಅವರು ವಿದ್ಯಾರ್ಥಿನಿಗೆ ಅಭಿನಂದನೆಗಳನ್ನು ವ್ಯಕ್ತಪಡಿಸಿದ್ದಾರೆ. ಹಾಗೂ ಶಾಲೆಯ ಆಡಳಿತ ಅಧಿಕಾರಿ ಆಶಾ ದೇವಿ ಮತ್ತು ಮುಖ್ಯೋಪಾಧ್ಯಾಯರಾದ ಶಿವರಾಜ್ ನಾಡಗೌಡ ಅವರು ವಿದ್ಯಾರ್ಥಿನಿಗೆ ಅಭಿನಂದನೆ ತಿಳಿಸಿದ್ದಾರೆ ವಿದ್ಯಾರ್ಥಿಯ ಈ ವಿಶೇಷ ಸಾಧನೆಗೆ ಕಾರಣರಾದ ಚಿತ್ರಕಲಾ ಶಿಕ್ಷಕರಾದ ಕೆ.ನರಸಿಂಹಲು ಗುರುಗಳಿಗೆ ಚುನಾಯಿತ ಪ್ರತಿನಿಧಿಗಳು ಮತ್ತು ಶಾಲಾ ಶಿಕ್ಷಕರು ಸಂತಸ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ