ಕಾರ್ಡುದಾರರಿಗೆ ಪ್ರತಿ ತಿಂಗಳ ರಶೀದಿ ವಿತರಿಸಿ ಬಸವರಾಜ ನಾಯಕ
ದೇವದುರ್ಗ:ಆ.೦೮-
ಪಟ್ಟಣ ಸೇರಿ ತಾಲೂಕಿನ ಅಂದ್ಯತ ಸರ್ಕಾರಿ ನ್ಯಾಯಬೆಲೆ ಅಂಗಡಿಗಯಿಂದ ಪಡಿತರದಾರರಿಗೆ ಕಡ್ಡಾಯವಾಗಿ ರಶೀದಿ ನೀಡಬೇಕು ಎಂದು ಪ್ರಗತಿಪರ ಒಕ್ಕೂಟ ಪ್ರಧಾನ ಸಂಚಾಲಕ ಜಿ.ಬಸವರಾಜ ನಾಯಕ ಪತ್ರಿಕೆ ಪ್ರಕಟಣೆ ನೀಡಿ ಬುಧವಾರ ಒತ್ತಾಯಿಸಿದರು.
ಸರಕಾರದ ತೀರ್ಮಾನದಂತೆ ಪ್ರತಿ ಕಾರ್ಡ್ ದಾರಿಗೆ ಆಹಾರ ಧ್ಯಾನ ವಿತರಣೆ ಮಾಡದ ನಂತರ ಅವರಿಗೆ ರಶೀದಿ ಪಾವತಿಸಲು ಆಹಾರ ಇಲಾಖೆಗೆ ನಿರ್ದೇಶನ ನೀಡಬೇಕು ಇಲ್ಲದೆ ನಿರ್ಲಕ್ಷ ವಹಿಸಿದರೆ ಸಂಬಂಧಿಸಿದ ಇಲಾಖೆ ಮುಂದೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಹಮ್ಮಿಕೊಳ್ಳಲಾಗುವುದು ಎಚ್ಚರಿಸಿದರು.