ಡಾಂಬರೀಕರಣ,ಚರಂಡಿ,ದೀಪ ವ್ಯವಸ್ಥೆಗೆ ಒತ್ತಾಯ
(ಸಂಜೆವಾಣಿ ವಾರ್ತೆ)
ರಾಯಚೂರು,ಆ೮: ವಾರ್ಡ ನಂ.೨೯ ಅಲ್ಲಮಪ್ರಭು ಕಾಲೋನಿಯಿಂದ ಟೀಚರ್ಸ ಕಾಲೋನಿಗೆ ಹೋಗುವ ಮುಖ್ಯ ರಸ್ತೆಯನ್ನು ಡಾಂಬರೀಕರಣ ಹಾಗೂ ಚರಂಡಿ ಕಾಮಗಾರಿ ಮತ್ತು ದಾರಿ ದೀಪಗಳ ವ್ಯವಸ್ಥೆ ಮಾಡಿಕೊಡುಬೇಕೆಂದು ನಿವಾಸಿಗಳು ಒತ್ತಾಯಿಸಿದ್ದಾರೆ.
ಅಲ್ಲಮ ಪ್ರಭು ಕಾಲೋನಿಯಿಂದ ಟೀಚರ್ಸ ಕಾಲೋನಿಗೆ ಹೋಗುವ ೬೦ ಅಡಿ ಅಗಲದ ಮುಖ್ಯ ರಸ್ತೆಯ ಪಕ್ಕದಲ್ಲಿ ರಾಜ ಕಾಲುವೆ ಇದ್ದು ಕಾಲುವೆಯಲ್ಲಿ ಜಾಲಿ ಗಿಡಗಳು, ಬೆಳೆದಿರುವದರಿಂದ ಮಳೆ ಮಳೆಗಾಲದಲ್ಲಿ ನೀರು ಮುಂದಕ್ಕೆ ಹೋಗದಂತೆ ಖಾಲಿ ನಿವೇಶನಗಳಲ್ಲಿ ನಿಂತಿರುವುದರಿಂದ ಏರಿಯಾದಲ್ಲಿ ಸೊಳ್ಳೆಗಳು ಹೆಚ್ಚಾಗಿ ಡೆಂಗ್ಯೂ, ಮೇಲೇರಿಯಾ ರೋಗಗಳು ಬರುವ ಸಂಭವವಿರುತ್ತದೆ ಎಂದು ತಿಳಿಸಿದ್ದಾರೆ.
ಕಾರಣ ರಾಜಕಾಲುವೆ ಸ್ವಚ್ಚಗೊಳಿಸಿ ಚರಂಡಿ ನಿರ್ಮಾಣ ಮಾಡಬೇಕು ಹಾಗೂ ರಸ್ತೆ ಡಾಂಬರೀಕರಣ ಹಾಗೂ ದಾರಿ ದೀಪಗಳು ಅಳವಡಿಸಿಕೊಡಬೇಕೆಂದು ನಗರಸಭೆ ಪೌರಯುಕ್ತರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.