ಮೈಸೂರಿನ ಪಾದಯಾತ್ರೆ, ಜಿಲ್ಲಾ ಜೆಡಿಎಸ್ ನಾಯಕರ ಹೆಜ್ಜೆ
ರಾಯಚೂರು,(ಬೆಂಗಳೂರು).ಆ.೮:
ಮುಡಾ ಮತ್ತು ವಾಲ್ಮೀಕಿದಲ್ಲಿ ಹಗರಣದ ಮುಖ್ಯಮಂತ್ರಿ ಸಿದ್ದರಾಮಯ್ಯರವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ-ಜೆಡಿಎಸ್ ನಡೆಸಿರುವ ಮೈಸೂರು ಚಲೋ ಪಾದಯಾತ್ರೆ ೫ನೇ ದಿನದಂದು ರಾಯಚೂರು ಜಿಲ್ಲೆಯ ಜೆಡಿಎಸ್ ಘಟಕದ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.
ಮಂಡ್ಯದಿಂದ ಶ್ರೀರಂಗಪಟ್ಟಣದ ತೂಬಿನಕೆರೆಯತ್ತ ಪಾದಯಾತ್ರೆಯಲ್ಲಿ ರಾಯಚೂರು ಜಿಲ್ಲೆಯ ನಾಯಕರ ಹೆಜ್ಜೆ ಹಾಕಿದ್ದು,ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಣ್ಣ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಜೆಡಿಎಸ್‌ನ ಯುವಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿಯವರ ಜೊತೆ ಮಾಜಿ ಸಚಿವರಾದ ವೆಂಕಟರಾವ್ ನಾಡಗೌಡ, ಜಿಲ್ಲಾಧ್ಯಕ್ಷ ಎಂ ವಿರುಪಾಕ್ಷಿ, ರಾಜ್ಯ ಪರಿಶಿಷ್ಟ ಪಂಗಡ ಅಧ್ಯಕ್ಷ ರಾಜಾ ವೆಂಕಟಪ್ಪ ನಾಯಕ ರಾಜ್ಯ ಉಪಾಧ್ಯಕ್ಷ ನರಸಿಂಹ ನಾಯಕ , ರಾಜ್ಯ ಉಪಾಧ್ಯಕ್ಷ ಮಹಾಂತೇಶಪಾಟೀಲ ಜಿಲ್ಲಾಕಾರ್ಯಾಧ್ಯಕ್ಷ ಎನ್ ಶಿವಶಂಕರ ವಕೀಲರು ರಾಜ್ಯ ಕಾರ್ಯದರ್ಶಿ ಲಕ್ಷೀಪತಿ ಗಾಣಧಾಳ ದೇವದುರ್ಗ ಅಧ್ಯಕ್ಷ ಬುಡ್ಡನಗೌಡ ಮಾನವಿ ತಾಲ್ಲೂಕ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ ರಾಜ್ಯ ಯುವ ಉಪಾಧ್ಯಕ್ಷ ರಾಮಚಂದ್ರ ನಾಯಕ ಜಿಲ್ಲಾ ಹಿಂದುಳಿದ ಅಧ್ಯಕ್ಷ ಜಂಬುನಾಥ ಯಾದವ ಗ್ರಾಮಾಂತರ ಅಧ್ಯಕ್ಷರಾದ ನಾಗರಾಜ್ ಗೌಡ, ಜಿಲ್ಲಾ ಪರಿಶಿಷ್ಟ ಅಧ್ಯಕ್ಷ ಹಂಪಯ್ಯ ನಾಯಕ್, ಕಾರ್ಮಿಕ ಅಧ್ಯಕ್ಷ ನರಸಿಂಹಲು, ಎಸ್ ರಾಜು , ಆದರ್ಶ ನಾಯಕ, ನರಸಿಂಹಲು ಇಂದಿರಾನಗರ, ನಾಗರಾಜನಾಯಕ,ಮೌನೇಶ ನಾಯಕ ಮತ್ತು ನೂರಾರು ಕಾರ್ಯಕರ್ತರು ಪಾದಯಾತ್ರೆಯಲ್ಲಿ ಉತ್ಸಾಹದಿಂದ ಮೈಸೂರಿನತ್ತ ಹೆಜ್ಜೆ ಹಾಕಿದ್ದಾರೆ.