ವಿವಿಧ ಜಯಂತಿ ಅರ್ಥಪೂರ್ಣ ಆಚರಣೆಗೆ ಎಡಿಸಿ ಭಜಂತಿ ಸೂಚನೆ
ರಾಯಚೂರು.ಆ೮-
ಕಾಯಕ ಯೋಗಿ,ಬಸವಣ್ಣವರ ಸಮಕಾಲೀನರಾದ ನುಲಿಯ ಚಂದಯ್ಯ, ಬ್ರಹ್ಮಶ್ರೀನಾರಾಯಣ ಗುರು ಹಾಗೂ ಶ್ರೀಕೃಷ್ಣನ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ಅಗತ್ಯ ಕ್ರಮಕೈಗೊಳ್ಳುವಂತೆಅಪರ ಜಿಲ್ಲಾಧಿಕಾರಿಗಳಾದ ಶಿವಪ್ಪ ಯಲ್ಲಪ್ಪ ಭಜಂತ್ರಿ ಅವರುಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಅವರು ಆ.೦೭ರ ಬುಧವಾರ ದಂದು ನಗರದ ಜಿಲ್ಲಾಧಿಕಾರಿಗಳಕಚೇರಿಯ ಸಭಾಂಗಣದಲ್ಲಿ ನುಲಿಯ ಚಂದಯ್ಯ, ಬ್ರಹ್ಮಶ್ರೀನಾರಾಯಣ ಗುರು ಹಾಗೂ ಶ್ರೀಕೃಷ್ಣನ ಜಯಂತಿಯ
ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿದರು.
ಕಾಯಕ ಯೋಗಿ, ಬಸವಣ್ಣವರ ಸಮಕಾಲೀನರಾದ ನುಲಿಯಚಂದಯ್ಯನವರು ಪ್ರಮುಖ ಶರಣರಲ್ಲಿ ಒಬ್ಬರಾಗಿದ್ದು ತಮ್ಮವಚನಗಳ ಮೂಲಕ ಸಮಾಜ ತಿದ್ದುವ ಕಾರ್ಯ ಮಾಡಿದ್ದಾರೆ.ನುಲಿಯ ಚಂದಯ್ಯ ಜಯಂತಿಯನ್ನು ಆಗಸ್ಟ್ ೧೯ರ ಬೆಳಿಗ್ಗೆ೯ಗಂಟೆಗೆ ನಗರದ ಅಂಬೇಡ್ಕರ ವೃತ್ತದಿಂದರಂಗಮಂದಿರವರಿಗೆ ಮೆರವಣಿಗೆ ಕಾರ್ಯಕ್ರಮ, ಬೆಳಿಗ್ಗೆ೧೧ಗಂಟೆಗೆ ನಗರದ ರಂಗಮಂದಿರದಲ್ಲಿ ವೇದಿಕೆಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಉಪನ್ಯಾಸಕರಾಗಿ ಮರೆಪ್ಪ ಅವರನ್ನು ಸಮಾಜ ಮುಖಂಡರು
ಆಯ್ಕೆ ಮಾಡಿದರು.
ಆಗಸ್ಟ್ ೨೦ರ ಬೆಳಿಗ್ಗೆ ೯.೩೦ಗಂಟೆಗೆ ಬಸವೇಶ್ವರ ವೃತ್ತದಿಂದನಗರದ ರಂಗಮಂದಿರದವರಿಗೂ ಬ್ರಹ್ಮಶ್ರೀ ನಾರಾಯಣಗುರು ಅವರ ಮೆರವಣಿಗೆ ಹಮ್ಮಿಕೊಳ್ಳಲಾಗಿದ್ದು, ವೇದಿಕೆ ಕಾರ್ಯಕ್ರಮವನ್ನು ಬೆಳಿಗ್ಗೆ ೧೧ಗಂಟೆಗೆ ಆಯೋಜನೆಮಾಡಲಾಗಿದೆ.
ಆಗಸ್ಟ್ ೨೬ರಂದು ಕೃಷ್ಣ ಜಯಂತಿ ಅಂಗವಾಗಿ ನಗರದನಗರೇಶ್ವರ ದೇವಸ್ಥಾನ ದಿಂದ ಯಾದವ್ ಕಲ್ಯಾಣಮಂಟಪದವರಿಗೂ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ.
ಬೆಳಿಗ್ಗೆ ೧೨ಗಂಟೆಗೆ ವೇದಿಕೆ ಕಾರ್ಯಕ್ರಮವನ್ನುಹಮ್ಮಿಕೊಳ್ಳಲಾಗಿದ್ದು, ಶಿಷ್ಟಾಚಾರದಂತೆ ಆಹ್ವಾನಪತ್ರಿಕೆಯನ್ನು ಮುದ್ರಿಸಿ, ಜನಪ್ರತಿನಿಧಿಗಳಿಗೆ, ಗಣ್ಯರಿಗೆ, ವಿವಿಧ ಸಂಘಟನೆಗಳ ಮುಖಂಡರುಗಳಿಗೆ ನೀಡಿ ಆಹ್ವಾನಿಸಬೇಕುಎಂದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಸಹಾಯಕ ನಿರ್ದೇಶಕ ದತ್ತಪ್ಪ ಸೇರಿದಂತೆ ವಿವಿಧ ಇಲಾಖೆಯಅಧಿಕಾರಿಗಳು ಹಾಗೂ ವಿವಿಧ ಸಮಾಜ ಮುಖಂಡರು ಸಭೆಯಲ್ಲಿ ಇದ್ದರು.