ಕಾರ್ಮಿಕ ಸಂಹಿತೆಗಳು ಮಾಲೀಕರ ಪರ
ರಾಯಚೂರು.ಆ೮:ದುಡಿಯುವ ಜನರು ಉದ್ಯೋಗ ಹಾಗೂ ಬದುಕಿನ ಅಭದ್ರತೆಯನ್ನುಎದುರಿಸುತ್ತಿದ್ದಾರೆ. ವಿಶೇಷವಾಗಿ ಆಳುವ ವರ್ಗವು ದುಡಿಯುವ ಜನರ ಎಐಯುಟಿಯುಸಿ ರಾಜ್ಯಾಧ್ಯಕ್ಷ ಕಾ ಕೆ.ಸೋಮಶೇಖರ್‌ರ ಹೇಳಿದರು.
ಹಕ್ಕುಗಳ ಮೇಲೆ ದಾಳಿಯನ್ನೆಸಗುತ್ತಿದೆ. ಎಐಯುಟಿಯುಸಿ ನೇತೃತ್ವದಲ್ಲಿ ಸಂಘಟಿಸಲಾದ ರಾಯಚೂರು ಜಿಲ್ಲಾಎರಡನೆ ಕಾರ್ಮಿಕರ ಸಮ್ಮೇಳನ ಉದ್ಘಾಟಿಸಿ ಮಾತನಾಡಿ ವಿಶ್ವಾದ್ಯಂತ ಕಾರ್ಮಿಕರು
ಹೋರಾಟ, ತ್ಯಾಗ, ಬಲಿದಾನಗಳ ಮೂಲಕ ಪಡೆದ ಹಕ್ಕುಗಳ ಮೇಲೆ ದಾಳಿನಡೆದಿದೆ. ಹಾಗಾಗಿಯೇ ಕಾರ್ಮಿಕರ ೪೪ಕಾಯ್ದೆಗಳನ್ನು ರದ್ದು ಮಾಡಿ೪ಕಾರ್ಮಿಕ ಸಂಹಿತೆಗಳನ್ನು ಕೇಂದ್ರದ ಬಿಜೆಪಿ ಸರ್ಕಾರ ಜಾರಿಗೆ ತಂದಿದೆ.ಕಾರ್ಮಿಕರ ಹಕ್ಕುಗಳ ದಮನದ ವಿರುದ್ಧ ಬಲಿಷ್ಠಐಕ್ಯ ಹೋರಾಟ ಕಟ್ಟಲು ಕಾರ್ಮಿಕರು ಮುಂದಾಗಬೇಕು ಎಂದರು.
ಬೆಲೆ ಏರಿಕೆ, ನಿರುದ್ಯೋಗ, ಉದ್ಯೋಗ ಕಡಿತ, ಬಡತನಸಮಸ್ಯೆಗಳು ಏಕೆ ಬರುತ್ತಿದೆ. ಅದರ ಮೂಲ ತಿಳಿದುಕೊಂಡು,ಮಾಲೀಕರ ಲಾಭ ಗರಿಷ್ಠ ಲಾಭಕ್ಕೆ ಕಾರಣವಾದ ಹಾಗು ಕಾರ್ಮಿಕರಶೋಷಣೆಗೆ ಕಾರಣವಾದ ಬಂಡವಾಳ ಶಾಹಿ ವ್ಯವಸ್ಥೆ ಕೊನೆಗಣಿಸಬೇಕುಎಂದರು.
ಅತಿಥಿಗಳಾಗಿ ಭಾಗವಹಿಸಿದ ಎಸ್. ಯು. ಸಿ. ಐ (ಕಮ್ಯುನಿಸ್ಟ್ ) ಪಕ್ಷದ ಜಿಲ್ಲಾಕಾರ್ಯದರ್ಶಿಗಳು ಮಾತನಾಡಿ, ಕಾರ್ಮಿಕರ ಹೋರಾಟದಲ್ಲಿ ಪ್ರಾಮಾಣಿಕತೆ, ಬದ್ಧತೆಯಕೊರತೆ ಇದೆ. ಮಾಲೀಕರು ನಮ್ಮ ಒಗ್ಗಟ್ಟು ಮುರಿಯಲು ಪ್ರಯತ್ನಮಾಡುತ್ತಾರೆ. ಆದರೆ ಕಾರ್ಮಿಕರು ತಮ್ಮ ಒಗ್ಗಟ್ಟು ಮುರಿಯಲುಬಿಡಬಾರದು ಎಂದರು. ಕಾರ್ಮಿಕರ ಚಳುವಳಿಯನ್ನು ರಾಜಿ ಸಂಧಾನ ಇಲ್ಲದೆ
ಬೆಳೆಸಬೇಕು ಎಂದರು.ಎಐಯುಟಿಯುಸಿ ಜಿಲ್ಲಾ ಅಧ್ಯಕ್ಷ ವಿರೇಶ್‌ಎನ್‌ಎಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾರ್ಮಿಕರನ್ನು ವೈಚಾರಿಕವಾಗಿ,ಸಾಂಸ್ಕೃತಿಕವಾಗಿ ಜಾಗೃತಗೊಳಿಸಲು ಈ ಸಮೇಳನ ಹಮ್ಮಿಕೊಂಡಿದೆ ಎಂದರು.ಇದಕ್ಕೂ ಮೊದಲು ಅಂಬೇಡ್ಕರ್ ವೃತ್ತದಿಂದ ರಂಗಮಂದಿರದವರೆಗೆಮೆರವಣಿಗೆ ನಡೆಸಲಾಯಿತು.
ಎಐಯುಟಿಯುಸಿ ಸಂಯೋಜನೆಗೊಂಡ ಶಿಲ್ಪಾ, ರಾಯಕೆಮ್ ಮೆಡಿಕೇರ್,ವಿದ್ಯುತ್ ವಲಯ, ವಸತಿನಿಲಯ, ವಸತಿಶಾಲೆ, ಆಶಾ ಸಂಘದಜಿಲ್ಲೆಯ ವಿವಿಧ ವಲಯಗಳ ನೂರಾರು ಕಾರ್ಮಿಕರು ಪ್ರತಿನಿಧಿಗಳು ಈ
ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ತಿರುಮಲರಾವ್‌ಪ್ರಾಸ್ತವಿಕವಾಗಿ ಮಾತನಾಡಿದರು. ಮಹೇಶ್ ಚೀಕಲ್ ಪರ್ವಿ, ಅಣ್ಣಪ್ಪ, ಈರಮ್ಮ,ಸಲೀಮ್, ಯಲ್ಲಪ್ಪ, ಗಾಯಿತ್ರಿ ಮುಂತಾದ ವಲಯಗಳ ಕಾರ್ಮಿಕಮುಖಂಡರು ವೇದಿಕೆಯಲ್ಲಿ ಇದ್ದರು.