ಜಿಲ್ಲಾ ಕಾರ್ಮಿಕ ಅಧಿಕಾರಿ ಉಮಾಶ್ರೀ ಕೋಳಿ ಅವರಿಗೆ ಸನ್ಮಾನ
ವಿಜಯಪುರ,ಆ.8:ಜಿಲ್ಲಾ ಕಾರ್ಮಿಕ ನೂತನ ಅಧಿಕಾರಿಯಾಗಿ ಆಗಮಿಸಿದ ಉಮಾಶ್ರೀ ಕೋಳಿ ಅವರಿಗೆ ಮಂಗಳವಾರ ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಅಸಂಘಟಿತ ಕಾರ್ಮಿಕರ ರಾಜ್ಯ ಒಕ್ಕೂಟ ಹಾಗೂ ವಿವಿಧ ಜಿಲ್ಲಾ ಘಟಕಗಳ ವತಿಯಿಂದ ಉಸ್ತುವಾರಿ ಅಧ್ಯಕ್ಷÀ ಪ್ರಕಾಶ ರಜಪೂತ ಅವರ ನೇತೃತ್ವದಲ್ಲಿ ಕಾರ್ಯದರ್ಶಿ ಸುಲೇಮಾನ ಓತಗೇರಿ (ಯೋಗಾಪುರ) ಕಾನೂನು ಸಲಹೆಗಾರ ದಾನೇಶ ಅವಟಿ, ಮಹಿಳಾ ಘಟಕದ ಉಸ್ತುವಾರಿ ನಿರ್ಮಲಾ ಡಿ.ಎ. ಅವರ ಉಪಸ್ಥಿತಿಯಲ್ಲಿ ಶಾಲು ಹೊದಿಸಿ ಫಲಪುಷ್ಪ ವಿತರಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಕಾರ್ಮಿಕ ಅಧಿಕಾರಿಗಳು ಜಿಲ್ಲೆಯ ಸಮಸ್ತ ಕಾರ್ಮಿಕರ ಅದರಲ್ಲೂ ಅಸಂಘಟಿತ ಕಾರ್ಮಿಕರ ಸಬಲೀಕರಣಕ್ಕೆ ಸರಕಾರದ ಸೌಲಭ್ಯ ಒದಗಿಸಲು ಸಿಬ್ಬಂದಿ ವರ್ಗದ ವಿವಿಧ ಸಂಘ ಸಂಸ್ಥೆಗಳ ಸಾರ್ವಜನಿಕರ ಸಹಭಾಗಿತ್ವದೊಂದಿಗೆ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ತಿಳಿಸಿದರು.
ಕಾರ್ಯದರ್ಶಿ ಸುಲೇಮಾನ ಓತಗೇರಿ ಸ್ವಾಗತಿಸಿದರು. ನಿರ್ಮಲಾ ಡಿ.ಎ ನಿರೂಪಿಸಿ ವಂದಿಸಿದರು