ರೋಟರಿ ಸಂಸ್ಥೆಯಿಂದ ಸಮಾಜದಲ್ಲಿ ಬದಲಾವಣೆ ಸಾಧ್ಯ
ವಿಜಯಪುರ,ಆ.8:ಜಗತ್ತಿನಲ್ಲಿ ರೋಟರಿ ಸಂಸ್ಥೆ ವಿವಿಧ ವೃತ್ತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಕೋಟ್ಯಂತರ ಸದಸ್ಯರು, ತಮ್ಮ ತನುಮನ ಧನದೊಂದಿಗೆ ಹಾಗೂ ಪ್ರಬಲ ಇಚ್ಛಾಶಕ್ತಿಯೊಂದಿಗೆ ಸಮಾಜದಲ್ಲಿ ಬದಲಾವಣೆ ತರುತ್ತಿರುವುದು ಉತ್ತಮವಾದ ಬೆಳವಣಿಗೆಯಾಗಿದೆ. ಕಾರಣ ಪ್ರತಿಯೊಬ್ಬರು ಪ್ರತಿ ವ್ಯಕ್ತಿಗೆ ಸಹಾಯ ಮಾಡುವ ಮೂಲಕ ತಮ್ಮ ಅಳಲು ಸೇವೆ ಸಲ್ಲಿಸಬೇಕೆಂದು ರೋಟರಿ ಸಂಸ್ಥೆ ಪದಗ್ರಹಣಾಧಿಕಾರಿ ಡಾ. ವಾಸುದೇವ ಬೆಂಡಿಗೇರಿ ಹೇಳದರು.
ಅವರು ನÀಗರದ ಖಾಸಗಿ ಹೊಟೇಲ್‍ನಲ್ಲಿ ಜರುಗಿದ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ನೂತನವಾಗಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಸಂದೀಪ ಪಾಟೀಲ ಝಳಕಿ ಮಾತನಾಡಿ, ಜನಸೇವೆ ಮಾಡಲು ಇದೊಂದು ಉತ್ತಮ ವೇದಿಕೆಯಾಗಿದ್ದು, ಜಗತ್ತಿನಲ್ಲಿ ಪೆÇೀಲಿಯೋ ನಿರ್ಮೂಲನೆ, ಕೃತಕ ಕಾಲು ಜೋಡಣೆ, ರಕ್ತದಾನ, ಬಡವರಿಗೆ ಉಚಿತ ಶಸ್ತ್ರ ಚಿಕಿತ್ಸೆಯಂತಹ ಕಾರ್ಯಕ್ರಮಗಳ ಮೂಲಕ ರೋಟರಿ ಸಂಸ್ಥೆ ತನ್ನದೇ ಆದ ಹೆಸರು ಮಾಡಿದೆ. ಮುಂಬರುವ ದಿನಗಳಲ್ಲಿ ರೋಟರಿ ಸಂಸ್ಥೆಯಿಂದ ನಗರದಲ್ಲಿ ಪರಿಸರ ಜಾಗೃತಿ, ಶಾಲೆಗಳಗೆ ಶುದ್ಧ ಕುಡಿಯುವ ನೀರಿನ ಘಟಕ, ಸ್ವಚ್ಛತಾ ಅಂದೋಲನ, ಆರೋಗ್ಯ ಶಿಜರಗಳಂತಹ ಹತ್ತು ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಅದಕ್ಕಾಗಿ ತಾವೆಲ್ಲರೂ ಕೈ ಜೋಡಿಸಬೇಕೆಂದರು.
ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥೆಯ ಕಾರ್ಯದರ್ಶಿಗಳಾಗಿ ಜಿ.ಎಸ್. ಕುಲಕರ್ಣಿ, ಖಜಾಂಚಿಯಾಗಿ ರಾಜೇಂದ್ರ ಜೋಶಿ ಹಾಗೂ ಆಡಳತ ಮಂಡಳಿ ಸದಸ್ಯರಾಗಿ ಇಮಾಮ ಹುಲ್ಲೂರ, ಕೃμÁ್ಣ ಗುನ್ಹಾಳಕರ, ಡಾ. ರವೀಂದ್ರ ಬೆಟ್ಟ, ವಿಶ್ವನಾಥ ಸಿದ್ಧಾಂತಿ, ರುದ್ರಗೌಡ ಪಾಟೀಲ, ಆನಂದ ಗುಜರಿ, ಚಂದ್ರಶೇಖರ ಸಿಂದೂರ ಅಧಿಕಾರ ವಹಿಸಿಕೊಂಡರು. ನೂತನವಾಗಿ ಪಾಟೀಲ ಸದಸ್ಯರಾಗಿ ಸೇರ್ಪಡೆಯಾದರು. ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯ ರೋಟರಿ ಸದಸ್ಯರು, ಪೆÇ್ರಬಸ್ ಕ್ಲಬ್ ಪದಾಧಿಕಾರಿಗಳು, ಇನ್ನರ್‍ವೀಲ್ ಸಂಸ್ಥೆ ಪದಾಧಿಕಾರಿಗಳು ಉಪಸ್ಥಿತರಿದ್ದರು.