ಕಾರ್ಮಿಕರ ಮಕ್ಕಳ ಲಾಲನೆ-ಪಾಲನೆ ಮಾಡುವ ಜವಾಬ್ದಾರಿ ನಿಮ್ಮ ಮೇಲಿದೆ: ಇಓ ಕಿರಣ ಪಾಟೀಲ
ಬೀದರ್:ಆ.8: ಮಹಿಳಾ ಕಾರ್ಮಿಕ ಮಕ್ಕಳನ್ನು ಲಾಲನೆ-ಪಾಲನೆ ಮಾಡುವ ಜವಾಬ್ದಾರಿ ನಿಮಗೆ ಒಲಿದು ಬಂದಿದೆ, ಇದನ್ನು ಕೆಲಸ ಎಂದು ಭಾವಿಸದೆ ನಿಮ್ಮ ಸೌಭಾಗ್ಯ ಎಂದು ಭಾವಿಸಿ ಎಂದು ಬೀದರ ತಾಲ್ಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಕಿರಣ ಪಾಟೀಲ್ ಹೇಳಿದರು.
ಮಂಗಳವಾರ ಜಿಲ್ಲಾ ಪಂಚಾಯತ್ ಬೀದರ ಹಾಗೂ ಮೊಬೈಲ್ ಕ್ರಷ್ ಸಂಸ್ಥೆಯ ಸಂಯುಕ್ತಶ್ರಯದಲ್ಲಿ ನಗರದ ಸಮರ್ಥ ಸದನದಲ್ಲಿ ಆಯೋಜಿಸಿದ ಕೂಸಿನ ಮನೆ ಆರೈಕೆದಾರರ ತರಬೇತಿ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಭಾಗದ ಕೂಲಿ ಕಾರ್ಮಿಕ ಮಹಿಳೆಯರು ಕೆಲಸಕ್ಕೆ ಹೋಗುವ ಸಂದರ್ಭದಲ್ಲಿ ಮಕ್ಕಳನ್ನು ಮನೆಯಲ್ಲಿಯೇ ಬಿಟ್ಟು ಹೋಗುವುದು ಸವಾಲಿನ ಕೆಲಸವಾಗಿತ್ತು ಇದನ್ನರಿತ ಸರ್ಕಾರ ಇವರ ಮಕ್ಕಳ ಲಾಲನೆ-ಪಾಲನೆಗಾಗಿ ಕೂಸಿನ ಮನೆ ಎನ್ನುವ ಯೋಜನೆ ಜಾರಿಗೆ ತಂದಿದೆ ಎಂದು ನರೇಗಾ ಸಹಾಯಕ ನಿರ್ದೇಶಕರಾದ ಸುದೇಶ್ ಅವರು ತಿಳಿಸಿದರು
ಕಾರ್ಯಗಾರದಲ್ಲಿ ಭಾಲ್ಕಿ, ಔರಾದ ಮತ್ತು ಕಮಲನಗರ ತಾಲ್ಲೂಕಿನ ಸುಮಾರು ನೂರಕ್ಕೂ ಅಧಿಕ ಜನ ಆರೈಕೆದಾರರು ತರಬೇತಿ ಕಾರ್ಯಗಾರದಲ್ಲಿ ಭಾಗವಹಿಸಿದರು.
ಈ ಸಂದರ್ಭದಲ್ಲಿ ಪಂಚಾಯತ್ ರಾಜ್ ಸಹಾಯಕ ನಿರ್ದೇಶಕ ಸಂಜೀವ ಕುಮಾರ್,ಸತ್ಯ ಜೀತ, ಸವಿತಾ, ಒಸೀನ್, ಸೇರಿದಂತೆ ಇತರರು ಉಪಸ್ಥಿತರಿದ್ದರು.