ಸಾರ್ವಜನಿಕರಿಗೆ ಉತ್ತಮ ಸೇವೆಗಳನ್ನು ಒದಗಿಸಲು ಲಂಚ ಮುಕ್ತ ಅಭಿಯಾನ
ಬೀದರ:ಆ.8: ಕರ್ನಾಟಕ ರಾಷ್ಟ್ರ ಸಮಿತಿ (ಕೆ,ಆರ್,ಎಸ್) ಪಕ್ಷವು ಸ್ವಚ್ಛ ಪ್ರಾಮಾಣಿಕ ಮತ್ತು ಜನಪರ ರಾಜಕಾರಣಕ್ಕಾಗಿ ಶ್ರಮಿಸುತ್ತಿದೆ ಮತ್ತು ಆ ಮೂಲಕ ಜನರ ಏಳಿಗೆಗೆ ಮತ್ತು ಸಂಕಷ್ಟಕ್ಕೆ ನೆರವಾಗಲು ಬಯಸುತ್ತದೆ. ಈ ನಿಟ್ಟಿನಲ್ಲಿ ಪೆÇಲೀಸ ಇಲಾಖೆ ಸೇರಿದಂತ್ತೆ ಸರ್ಕಾರಿ ಕಛೇರಿ/ಆಸ್ಪತ್ರೆಗಳಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸಿ, ಅವುಗಳನ್ನು ಸರಿಪಡಿಸಲು ಕ್ರಮ ಕೈಗೊಳ್ಳಲು ಮನವಿ ಮಾಡುತ್ತಿದ್ದೆವೆ.
ರಾಜ್ಯದ ನಾನಾ ಭಾಗಗಳಲ್ಲಿ ಸುಮಾರು 500ಕ್ಕೂ ಹೆಚ್ಚು ಸರ್ಕಾರಿ ಕಛೇರಿಗಳಿಗೆ ಮತ್ತು ಆಸ್ಪತ್ರೆಗಳಿಗೆ ಭೇಟಿ ನೀಡಿ, ಅಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸಿ, ಅವ್ಯವಸ್ಥೆ ಮತ್ತು ಲೋಪದೊಷಗಳನ್ನು ಸರಿಪಡಿಸಲು ಕ್ರಮ ಕೈಗೊಳ್ಳುವಂತೆ ತಿಳಿಸಿದ್ದೆವು ಈ ಬಗ್ಗೆ ಸಮಗ್ರವಾಗಿ ಕ್ರಮ ವಹಿಸುವಂತೆ ರಾಜ್ಯದ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದು ಮತ್ತು ಖುದ್ದಾಗಿ ಭೇಟಿಯಾಗಿ ವಿವರಿಸಿದ್ದೆವು. ನಮ್ಮ ಪತ್ರದ ಆಧಾರದ ಮೇಲೆ ಈ ನಿಟ್ಟಿನಲ್ಲಿ ಕ್ರಮ ವಹಿಸುವಂತ್ತೆ ಮುಖ್ಯ ಕಾರ್ಯದರ್ಶಿಯವರು ಎಲ್ಲಾ ಇಲಾಖೆಗಳಗೂ ಪತ್ರ ಬರೆದು ತಿಳಿಸಿದ್ದರು. ಇದರ ಹೊರತಾಗಿಯು ಸರ್ಕಾರದ ಬಹುತೇಕ ಕಛೇರಿಗಳಲ್ಲಿನ ವ್ಯವಸ್ಥೆ ಇನ್ನೂ ಸರಿಹೋಗಿಲ್ಲ ಮತ್ತು ಸಾರ್ವಜನಿಕರಿಗೆ ತಮ್ಮ ಕೆಲಸ/ಸೇವೆಗಳು ಸುಲಭವಾಗಿ ಮತ್ತು ಸಕಾಲದಲ್ಲಿ ಲಭ್ಯವಾಗುತ್ತಿಲ್ಲ.
ಆದ್ದರಿಂದ ಕರ್ನಾಟಕ ರಾಷ್ಟ್ರ ಸಮಿತಿ ರಾಜ್ಯದ ಸರ್ಕಾರಿ ಕಚೇರಿ/ಆಸ್ಪತ್ರೆಗಳಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿ ಸಾರ್ವಜನಿಕರಿಗೆ ವ್ಯವಸ್ಥಿತವಾಗಿ ಉತ್ತಮ ಸೇವೆ ಸಿಗುವಂತಹ ಪರಿಸ್ಥಿತಿ ನಿರ್ಮಾಣ ಮಾಡಲು ಅಭಿಯಾನವನ್ನು ನಿರಂತರವಾಗಿ ಮಾಡುತಿದ್ದೆವೆ. ಈ ನಿಟ್ಟಿನಲ್ಲಿ ಇಂದು ತಮ್ಮ ಕಚೇರಿ/ಆಸ್ಪತ್ರೆಯಲ್ಲಿ ನಮ್ಮ ಪಕ್ಷದ ವತಿಯಿಂದ ಬೇಟಿ ನೀಡಿದ ಸಂದರ್ಭದಲ್ಲಿ, ಈ ಕೆಳಗಿನ ನ್ಯೂನ್ಯತೆಗಳು ಮತ್ತು ಅವ್ಯವಸ್ಥೆಗಳನ್ನು ಕಂಡುಬಂದಿದ್ದು, ಎಲ್ಲಾ ಅವ್ಯವಸ್ಥೆ ಮತ್ತು ಲೋಪದೋಷಗಳನ್ನು ಅತಿ ಶೀಘ್ರದಲ್ಲಿ (15 ದಿನಗಳಲ್ಲಿ) ಸರಿಪಡಿಸಿ ಸಾರ್ವಜನಿಕರಿಗೆ ಉತ್ತಮ ಮತ್ತು ದಕ್ಷ ಸೇವೆ ನೀಡಬೇಕೆಂದು ಕರ್ನಾಟಕ ರಾಷ್ಟ್ರ ಸಮಿತಿ (ಕೆ,ಆರ್,ಎಸ್) ಪಕ್ಷದ ವತಿಯಿಂದ ಇಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು
ಈ ಸಂದರ್ಭದಲ್ಲಿ ಕರ್ನಾಟಕ ರಾಷ್ಟ್ರ ಸಮಿತಿಯ ಜಿಲ್ಲಾಧ್ಯಕ್ಷರಾದ ಹಣಮಂತ ಮಟ್ಟೆ, , ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾಗಿ ಬಜರಂಗ ಪವಾರ, ರಾಜ್ಯ ಸಂಘಟನಾ ಕಾರ್ಯದರ್ಶಿ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ತುಕಾರಾಮ ಗೌರೆ, ಶಿವರಾಜ ಶ್ರೀಮಂಗಲೆ, ದಯಾನಂದ ಸ್ವಾಮಿ, ಪ್ರಭು ಬಾಮಂದಿ,ಸಂಗಪ್ಪಾ ಬಂಡೆ, , ಸಾಯಿನಾಥ ಗನ್ನೆ, ಭೀಮರಾವ ಫತ್ತೆಪೂರೆ, ವಿಠಲರಾವ ಚಟ್ನಾಳಕರ, ಬಾಲಭದ್ರ ದಾಮ , ತಾನಾಜಿ ಜಾಧವ, ರಾಘವೇಂದ್ರ, ಶರಣಬಸಪ್ಪಾ, ಶಿವರಾಜ, ಈರಣ್ಣಾ, ಹಣಮಂತ, ಸಿದ್ದಲಿಂಗ, ಜೈ ಭೀಮ, ರಾಜು, ಅವಿನಾಶ, ಗೌರಿಶ, ಶಿವಾಜಿ, ಮಲ್ಲಿಕಾರ್ಜುನ, ವಿಜಯಕುಮಾರ ಉಪಸ್ಥಿತರಿದ್ದರು.