ರಾಷ್ಟ್ರೀಯ ಕೈಮಗ್ಗ ದಿನಾಚರಣೆ
ಬೀದರ:ಆ.8: ನಗರದ ಹಳೆ ನಗರದ ಭವಾನಿ ಮಂದಿರ ಭೀಮನಗರ ಬೀದರನಲ್ಲಿ ಪ್ರಪ್ರಥಮವಾಗಿ ಕರ್ನಾಟಕ ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟ ಜಿಲ್ಲಾ ಘಟಕದ ವತಿಯಿಂದ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯನ್ನು ಆಯೋಜಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷರು ರಾಮಕೃಷ್ಣನ್ ಸಾಳೆ ಇವರು ಮಾತನಾಡುತ್ತಾ, 10ನೇ ರಾಷ್ಟ್ರೀಯ ಕೈಗ್ಗ ದಿನಾಚರಣೆಯನ್ನು ಆಯೋಜಿಸುತ್ತಾ ಬರುತ್ತಿದ್ದು, 2015ನೇ ಸಾಲಿನಲ್ಲಿ ಪ್ರಧಾನಿ ಮೋದಿಯವರು ರಾಷ್ಟ್ರೀಯ ಕೈಮಗ್ಗ ದಿನಾಚರಣೆಯನ್ನು ಉದ್ಘಾಟನೆ ಮಾಡಿರುತ್ತಾರೆ ಎಂದು ತಿಳಿಸಿದರು
. ಅಧ್ಯಕ್ಷರು ಸೋಮಶೇಖರ ನಾಗಪ್ಪಾ ಅಮಲಾಪೂರೆ ಜಂಬಗಿ ಇವರು ಮಾತನಾಡುತ್ತಾ, ರಾಷ್ಟ್ರಿಯ ಕೈಮಗ್ಗ ದಿನಾಚರಣೆಯ ಕುರಿತು ಬಡ ಜನರಿಗೆ ರಾಷ್ಟ್ರ ಮಟ್ಟದ ಕುಲಕಸುಬು ಮುಂದುವರೆಸಿಕೊಂಡು ಹೋಗಬೇಕು, ಕುಲಕಸುಬು ಜೀವಂತವಾಗಿ ಉಳಿಯಬೇಕಾದರೆ ಮುಂದಿನ ದಿನಗಳಲ್ಲಿ ಪ್ರತಿ ಮನೆ ಮನೆಗಳಲ್ಲಿ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯನ್ನು ಆಚರಣೆ ಮಾಡುವುದು ಅತೀ ಅವಶ್ಯವಾಗಿದೆ ಎಂದು ಹೇಳಿದರು.
ಉಪಾಧ್ಯಕ್ಷರಾದ ಮಾಧವ ಚೌಡೇಕರ್, ನರಸಿಮಲು ಕೋಟಾ, ಅನುಪಕುಮಾರ ಢಗೆ, ಚಂದ್ರಕಾಂತ ಬೂಚೆ, ಪದ್ಮಶಾಲಿ ಅಧ್ಯಕ್ಷರಾದ ರಾಜೇಂದ್ರ ಅಂಬಾಟೆ, ಧನರಾಜ ಮೀನಕೇರೆ, ಬಸವರಾಜ ನೇಕಾರ್, ನೀಲಕಂಠ ಎಕಂಬಾ, ಅಶೋಕ ಎಲಿ, ಶರಣಪ್ಪ ಹಾವಗೊಂಡೆ, ರಾಚಪ್ಪ ನಡುಮನಿ, ಮಲ್ಲಪ್ಪ ಬೆಳಕೇರೆ, ಅಶೋಕ ನಂದಗೆ, ಸಚೀನ ಕಾಡೊದೆ, ಕೃಷ್ಣಾ ದೋಮಲ್, ಬಸವರಾಜ ಮಾಮದಿ, ಅಂಬಾದಾಸ ಕಾಡಗೆ ಇನ್ನೀತರರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಸ್ವಾಗತ ಯೋಗೇಂದ್ರ ಶೇಂದ್ರೆ ಮಾಡಿದರು, ಕಾರ್ಯಕ್ರಮದ ನಿರೂಪಣೆಯನ್ನು ಮಲ್ಲಿಕಾರ್ಜುನ ಬೆಳಕೇರೆ ಮಾಡಿದರು.