ಬೀಮ್ಸ್ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳ ವಿರುದ್ಧ ದೂರು
ಬೀದರ: ಆ.8:ಶ್ರೀನಿವಾಸ ಜಮಾದಾರ ಕಛೇರಿ ಅಧೀಕ್ಷಕರು ಮತ್ತು ಡಾ|| ಜೈಸಿಂಗ್ ಡಿ ಇವರುಗಳು 2021-22 ರಿಂದ ಹಿಂದಿನ ನಿರ್ದೇಶಕರ ಸಮಯದಿಂದ ಇಲ್ಲಿಯವರೆಗೆ ಅಭಿವೃದ್ಧಿ ಮತ್ತು ಸಿಬ್ಬಂದಿ ಸಂಕಲನದಲ್ಲಿ ನಿಯಮ ಬಾಹಿರವಾಗಿ ಕೆಲಸ ನಿರ್ವಹಿಸಿ ಬ್ರೀಮ್ಸ್ ಸಂಸ್ಥೆಗೆ ಕೊಟ್ಯಾಂತರ ರೂಪಾಯಿಗಳ ನಷ್ಟಉಂಟು ಮಾಡಿರುತ್ತಾರೆ. ಅದಕಾರಣ ಈ ವಿಷಯದ ಬಗ್ಗೆ ಗಂಭೀರವಾಗಿ ತನಿಖೆ ನಡೆಸಿ ಇವರುಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಹಾಗೂ ಒಂದು ವೇಳೆ ವಿಳಂಬ ಮಾಡಿದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ)ದ ವತಿಯಿಂದ ಇಂದು ಬ್ರೀಮಸ್ ಮುಖ್ಯ ಆಡಳಿತಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಕರವೇ ಜಿಲ್ಲಾಧ್ಯಕ್ಷರಾದ ಪೀಟರ್ ಚಿಟಗುಪ್ಪಾ, ಸೈಯದ ನವಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಕಾಶ ಬಗದಲಕರ್, ವಿದ್ಯಾರ್ಥಿ ಘಟಕ ಜಿಲ್ಲಾಧ್ಯಕ್ಷ ನಾಗೇಶ ರಾಯಕ್ಕೋರ , ನಿಲೇಶ ರಾಠೋಡ್, ಮೊಸೀನ ಪಟೇಲ, ಯೇಹಾನ ಮಿಸೇ, ಗಿರೀಶ್ ಓಂಕಾರ್, ಪ್ರಸಾದ್ ಗೋಡಂಪಳ್ಳಿಕರ್, ಸಾಗರ್ ಮೇತ್ರೆ ಹಾಗೂ ಕರಣ ರಾಠೋಡ್ ಉಪಸ್ಥಿತರಿದ್ದರು.