ಯುವತಿ ಕುಟುಂಬಕ್ಕೆ ನ್ಯಾಯ ಸಿಕ್ಕಿದ್ದು ಸ್ವಾಗತಾರ್ಹ: ಈಶ್ವರಸಿಂಗ್ ಠಾಕೂರ್
ಬೀದರ್:ಸೆ.30: ಭಾಲ್ಕಿ ತಾಲೂಕಿನ ಕೋಸಂ ಗ್ರಾಮದ ಯುವತಿ ಪೂಜಾ ಹಡಪದ ಕೊಲೆ ಮಾಡಿದ ಆರೋಪಿಗೆ ಬೀದರ ಜಿಲ್ಲಾ ಹೆಚ್ಚುವರಿ ಸೇಷನ್ಸ್ ನ್ಯಾಯಾಲಯ ಕಠಿಣ ಜೀವಾವಧಿ ಶಿಕ್ಷೆ ವಿಧಿಸಿದ್ದು ಸ್ವಾಗತಾರ್ಹ. ಇದು ನಮ್ಮ ಹೋರಾಟಕ್ಕೆ ಸಂದ ಜಯವಾಗಿದೆ ಎಂದು ಭಾರತೀಯ ಜನತಾ ಪಕ್ಷದ ವಿಭಾಗೀಯ ಸಹಪ್ರಭಾರಿ ಈಶ್ವರಸಿಂಗ್ ಠಾಕೂರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು 2018ರ ಜನವರಿ 27 ರಂದು ಶಾಬೋದ್ದಿನ್ ಎಂಬ ಯುವಕ ಕೊಲೆ ಮಾಡಿದ್ದ. ಆರೋಪಿಗೆ ಶಿಕ್ಷೆ ವಿಧಿಸಬೇಕೆಂದು ನೂರಾರು ಹಿಂದೂಪರ ಕಾರ್ಯಕರ್ತರು ಹೋರಾಟ ಮಾಡಿದ್ದರು. ಹೋರಾಟಗಾರರ ಮೇಲೆ ಕೇಸ್ ಕೂಡಾ ಹಾಕಲಾಗಿತ್ತು. ಹೀಗಾಗಿ ನ್ಯಾಯಾಧೀಶ ಸಚಿನ ಕೌಶಿಕ್ ಶಿಕ್ಷೆ ವಿಧಿಸಿದ್ದು, ಯುವತಿ ಪರ ಪಬ್ಲಿಕ್ ಪ್ರಾಸಿಕ್ಯೂಟರ್ ಶರಣಗೌಡ ವಾದ ಮಂಡಿಸಿ ನ್ಯಾಯ ಒದಗಿಸಿದ್ದು ಸಂತಸ ತಂದಿದೆ. ಆರೋಪಿಗೆ ಗಲ್ಲುಶಿಕ್ಷೆ ವಿಧಿಸಲು ಪ್ರಾಸಿಕ್ಯೂಟರ್ ಅವರು ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಬೇಕೆಂದು ಪ್ರಕಟಣೆಯಲ್ಲಿ ಈಶ್ವರಸಿಂಗ್ ಠಾಕೂರ್ ತಿಳಿಸಿದ್ದಾರೆ.