ಕಾಡವಾದ ಗ್ರಾಮದಲ್ಲಿ ರಾಷ್ಟ್ರೀಯ ಪೋಷಣ ಅಭಿಯಾನ ಯೋಜನೆಯಡಿ ಪೋಷಣ ಮಾಸಾಚರಣೆ
ಬೀದರ: ಸೆ.30:ಬೀದರ ತಾಲೂಕಿನ ಬಗದಲ 2ನೇ ವಲಯದ ಕಾಡವಾದ ಗ್ರಾಮದಲ್ಲಿ ರಾಷ್ಟ್ರೀಯ ಪೆÇೀಷಣ ಅಭಿಯಾನ ಯೋಜನೆಯಡಿ ಪೆÇಷಣ ಮಾಸಾಚರಣೆ ಆಚರಿಸಲಾಯಿತು.
ಗ್ರಾಮ ಪಂಚಾಯತ ಅಧ್ಯಕ್ಷರಾದ ಶಶಿಕಲಾ ದತ್ತಾತ್ರಿ ಅವರು ಕಾರ್ಯಕ್ರಮದ ಉದ್ಘಾಟನೆ ಮಾಡಿದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಮತಿ ಶಾರದಾ ಎನ್ ಕಲ್ಮಕರ ಪ್ರಾಸ್ತಾವಿಕವಾಗಿ ಮಾತನಾಡಿ ರಾಷ್ಟ್ರೀಯ ಪೆÇೀಷಣ ಅಭಿಯಾನ ಯೋಜನೆಯಡಿ ಪೆÇಷಣ ಮಾಸಾಚರಣೆ ಕಾರ್ಯಕ್ರಮ ಉದ್ದೇಶ ಸರಕಾರದ ಮಹತ್ಕಾಂಕ್ಷಿ ಯೋಜನೆಯಾಗಿದೆ ಗರ್ಭಿಣಿಯರು ಬಾಣತಿಯರು ಪೌಷ್ಟಿಕಾಂಶವುಳ್ಳ ಆಹಾರಗಳು ಸೇವನೆ ಮಾಡುವ ತುಂಬಾ ಮುಖ್ಯವಾಗಿದೆ. ಗರ್ಭಿಣಿಯರು ಬಾಣತಿಯರು ಊಟ ಮಾಡುವಾಗ ತಟ್ಟೆಯಲ್ಲಿ ಹಸಿರು ತರಕಾರಿ ಹಸಿರು ಸೋಪ್ಪು ಮೊಳಕೆ ಕಾಳುಗಳು ಹಣ್ಣುಗಳು ಹಳದಿ ಬಣ್ಣದ ಹಣ್ಣುಗಳು ಹಾಲು ಮೊಟ್ಟೆ ಸೇವನೆ ಮಾಡುವುದರಿಂದ ಗರ್ಭಿಣಿಯರಲ್ಲಿ ರಕ್ತ ಹೀನತೆ ತಡೆಗಟ್ಟುವುದಕ್ಕೆ ಸಾಧ್ಯವಾಗುತ್ತದೆ ಹುಟ್ಟುವ ಮಗು ಅಪೌಷ್ಟಿಕವಾಗುವುದಿಲ್ಲ ತಾಯಿ ಮತ್ತು ಮಗು ಆರೋಗ್ಯವಂತರಾಗಿರುತ್ತಾರೆ ಎಂದು ಹೇಳಿದ್ದರು.
ಶ್ರೀಮತಿ ಸುರೇಖಾಬಾಯಿ ಮೇಲ್ವಿಚಾರಕರು ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಮಹಿಳೆಯರಿಗೂ ಹಾಗೂ ಮಕ್ಕಳಿಗೆ ಇರುವ ಸೌಲಭ್ಯಗಳ ಕುರಿತು ತಿಳಿಸಿ ಅಂಗನವಾಡಿ ಕೇಂದ್ರ ದಲ್ಲಿ ಕಲಿತಿರುವ ಮಕ್ಕಳು ಸದೃಢವಾಗಿ ಆರೋಗ್ಯವಾಗಿವಂತರಾಗಿ ಧೈರ್ಯ ಶ್ಯಾಲಿಗಳಾಗಿರುತ್ತಾರೆ .ಪ್ರತಿಯೊಂದು ವಿಷಯದಲ್ಲಿ ಹಿಂದುಳಿಯುವದಿಲ್ಲವೆಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ, ಮುಖ್ಯ ಅತಿಥಿಯಾಗಿ ಗ್ರಾಮ ಪಂಚಾಯತ ಉಪಾಧ್ಯಕ್ಷ ರವಿ, ಗ್ರಾಮ ಪಂಚಾಯತ ಸದಸ್ಯರು ಶ್ರೀಮತಿ ಕಲಾವತಿ, ರಾಜ್ಯಮ್ಮಶ್ರೀ ಸಂಜು ಲೋಕೇಶ್, ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳ ಶಿವಕುಮಾರ, ಸ ಹಿ ಪ್ರಾಥಮಿಕ ಮುಖ್ಯೊಪಧ್ಯಾಯರು ಶ್ರೀಮತಿ ಸಂಗೀತಾ ಅವರು ವೇದಿಕೆಯನ್ನು ಉಪದೇಶಿಸಿ ಮಾತನಾಡಿದ್ದರು,
ಸ್ವಾಗತ ಗೀತೆಯನ್ನು ಶ್ರೀಮತಿ ಭಾರತಿ ಸುಮಿತ್ರಾ ಹಾಡಿದರು. ಶ್ರೀನಿವಾಸ ನಿರೂಪಣೆ ಮಾಡಿದ್ದರೆ ವಂದನಾರ್ಪಣೆಯನ್ನು ಶ್ರೀಮತಿ ಭಾರತಿ ಮಾಡಿದ್ದರು.
ಕಾರ್ಯಕ್ರಮದಲ್ಲಿ ಗರ್ಭಿಣಿಯರಿಗೆ ಸಿಂಮತ ಮಾಡಲಾಯಿತು ಹಾಗೂ ಮಕ್ಕಳಿಗೆ ಅನ್ನ ಪ್ರಾಶನ ಮಾಡಲಾಯಿತು ಹಾಗೂ ಅಂಗನವಾಡಿ ಕೇಂದ್ರದಲ್ಲಿ ಇರುವ ಮಕ್ಕಳಿಗೆ ಪೆÇೀಷಣ ಭೀ ಪಡಾಯಿ ಭೀ ಅಕ್ಷರ ಅಭ್ಯಾಸ ಮಡಲಾಯಿತು, ಕಾಡವಾದ ಗ್ರಾಮದ ಮಹಿಳೆಯರು ಮಕ್ಕಳು ಗ್ರಾಮದ ಗಣ್ಯರು ಉಪಸ್ಥಿತರಿದ್ದರು.