ಕರಣಿಗಿ ಭಾಗ್ಯವಂತಿ ದೇವಿ ಜಾತ್ರಾ ಮಹೋತ್ಸವದ ಕರಪತ್ರ ಬಿಡುಗಡೆಗೊಳಿಸಿದ ಉಮೇಶ್ ಕೆ ಮುದ್ನಾಳ್
ಯಾದಗಿರಿ :ಸೆ.30: ಅಕ್ಟೋಬರ್ 2,3,4,ರಂದು ನಡೆಯುವ ಭಾಗ್ಯವಂತಿ ದೇವಿಯ ಜಾತ್ರಾಮಹೋತ್ಸವದ ಕರಪತ್ರವನ್ನು ಭಾಗ್ಯವಂತಿ ದೇವಿಯ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಕರಪತ್ರ ಬಿಡುಗಡೆ ಗೊಳಿಸಿ ಮಾತನಾಡಿದ ಪ್ರಾದೇಶಿಕ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಸಾಮಾಜಿಕ ಹೋರಾಟಗಾರರು ಉಮೇಶ್ ಕೆ ಮುದ್ನಾಳ್. ಶಹಪುರ ತಾಲೂಕಿನ ಯಾದಗಿರಿ ಮತಕ್ಷೇತ್ರದ ದೋರನಹಳ್ಳಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಸುಕ್ಷೇತ್ರ ಕರಣಿಗಿ ಗ್ರಾಮದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಕೂಡ ಅಕ್ಟೋಬರ್ 2,3,4ರಂದು ಮೂರು ದಿನ ಸತತ ಭಾಗ್ಯವಂತಿ ದೇವಿ ಜಾತ್ರಾಮಹೋತ್ಸವದ ಅಂಗವಾಗಿ ಅಕ್ಟೋಬರ್ 2ರಂದು ಗಂಗಾಸ್ಥಾನ 3ರಂದು ದೇವಿಯ ಪಲ್ಲಕ್ಕಿ ಮೆರವಣಿಗೆ 4ರಂದು ಜಾತ್ರಾಮಹೋತ್ಸವದ ಗ್ರಾಮೀಣ ಕ್ರೀಡೆಗಳಾದಬೆಳಗ್ಗೆ ಕೈ ಕುಸ್ತಿ, ಸಾಯಂಕಾಲ ಉಸಕಿನ ಚೀಲ ಭಾರ ಎತ್ತುವುದು ಸೇರಿದಂತೆ. ಮಹಾಲಿಂಗರಾಯ ಮಹಿಳಾ ಡೊಳ್ಳು ಕುಣಿತ ಗೋವನ ಕೊಪ್ಪ ಇವರಿಂದ ವಿಶೇಷ ಕಾರ್ಯಕ್ರಮ ಆಯೋಜನೆ ಮಾಡಿರುವಂತಹ ದೇವಸ್ಥಾನದ ಕಮಿಟಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಊರಿನ ಗ್ರಾಮದ ಹಿರಿಯರು ಮತ್ತು ಯುವಕರು ಸೇರಿ ಆಯೋಜನೆಮಾಡಿದ್ದಕ್ಕೆ ಆ ದೇವತೆಯ ಆಶೀರ್ವಾದ ಸದಾ ನಿಮ್ಮ ಮೇಲೆ ಇರುತ್ತದೆ ಎಂದು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಭಾಗದ ಕ್ರೀಡೆಗಳು ನಸಿಸಿ ಹೋಗುತ್ತಿದ್ದು ಯುವಕರು ದುಶ್ಚಟಗಳಿಗೆ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಪ್ರತಿ ಜಾತ್ರೆ ಸಂದರ್ಭಗಳಲ್ಲಿ ಇಂತಹ ಗ್ರಾಮೀಣ ಕ್ರೀಡೆಗಳನ್ನು ಆಯೋಜಿಸಿದರೆ ಕ್ರೀಡಾಪಟುಗಳಿಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ ಮತ್ತು ದುಶ್ಚಟಗಳಿಂದ ಯುವಕರಿಗೆ ದೂರವಿರಲು ದೇವರ ಭಕ್ತಿಯಿಂದ ಸಹಾಯವಾಗುತ್ತದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ಇದೇ ಸಂದರ್ಭದಲ್ಲಿ ದೇವಸ್ಥಾನದ ಕಮಿಟಿಯ ಅಧ್ಯಕ್ಷರಾದ :ಭಾಗಣ್ಣ ಪೂಜಾರಿ ಆಂಜನೇಯ ಬೆಳಗೇರಾ
ಶರಣಪ್ಪ ಶರಪ್ಪಗೌಡ ವಕೀಲರೆಡಿ ಪಾಟೀಲ್ ಶರಣಪ್ಪ ಗೌಡರೂ ಮಲ್ಲಿಕಾರ್ಜುನ ಮಲ್ಲಣ್ಣ ಭೀಮಣ್ಣ ಹುಸೇನ್ ಸಾಬ್ ರಾಮಲಿಂಗ ಜಗನಾಥ್ ಶರಣುಗೌಡ ಸಿದ್ದಲಿಂಗ ಭಾಗಣ್ಣ ರಾಜಶೇಖರ್ ಶರಣಪ್ಪ ಗೌಡ ಹನಮಂತ ದೊರೆ ಚನ್ನಾರೆಡ್ಡಿ ಶಿವರಾಜ ಜಂಭಣ್ಣ ಸಿದ್ದಪ್ಪ ಗೌರಮ್ಮ ದೇವಮ್ಮ ನಿರ್ಮಲ ಚಂದ್ರಕಲಾ ಭಾಗಮ್ಮ ಸಾಬಮ್ಮ ಶಾಂತಮ್ಮ ಇಂದ್ರಮ್ಮ ರೇಣುಕಾ ಈರಮ್ಮ ಚಂದಮ್ಮ ದೇವೀಂದ್ರಮ್ಮ ನಿಂಗಮ್ಮ ಸೇರಿದಂತೆ ದೇವಸ್ಥಾನದ ಭಕ್ತಾದಿಗಳು ಅನೇಕರು ಉಪಸ್ಥಿತರಿದ್ದರು