ಬಿಎಸ್ಸಿ ಪದವಿ ಪರೀಕ್ಷೆ : ಗುರುಕುಲದ ವಿದ್ಯಾರ್ಥಿನಿ ನಿಕಿತಾಗೆ 10ನೇ ರ್ಯಾಂಕ್
ಭಾಲ್ಕಿ:ಆ.8:ಗುಲಬರ್ಗಾ ವಿಶ್ವವಿದ್ಯಾಲಯ ಈಚೆಗೆ ನಡೆಸಿದ 2023-2024ನೇ ಸಾಲಿನ ವಾರ್ಷಿಕ ಪದವಿ ಪರೀಕ್ಷೆಯಲ್ಲಿ ತಾಲೂಕಿನ ಕರಡ್ಯಾಳ ಚನ್ನಬಸವೇಶ್ವರ ಗುರುಕುಲ ಪದವಿ ಕಾಲೇಜಿನ ವಿದ್ಯಾರ್ಥಿನಿ ನಿಕಿತಾ ಉಮಾಕಾಂತ ಬಿಎಸ್ಸಿ ಅಂತಿಮ ವರ್ಷದಲ್ಲಿ 3800ಪೈಕಿ 3392 (89.26 ಶೇ) ಅಂಕ ಗಳಿಸಿ ಗುಲಬರ್ಗಾ ವಿಶ್ವವಿದ್ಯಾಲಯ ಮಟ್ಟದಲ್ಲಿ 10ನೇ ರ್ಯಾಂಕ್ ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ.
ಹರ್ಷ : ಚಿಂಚೋಳಿ ತಾಲೂಕಿನ ಐನಾಪೂರ ಗ್ರಾಮದ ಮಹಾನಂದಾ ಉಮಾಕಾಂತ ದಂಪತಿಯ ಪುತ್ರಿ ನಿಕಿತಾ ಸಾಧನೆಗೆ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು, ಪೀಠಾಧಿಪತಿ ಗುರುಬಸವ ಪಟ್ಟದ್ದೇವರು, ಮಹಾಲಿಂಗ ಸ್ವಾಮೀಜಿ, ಆಡಳಿತಾಧಿಕಾರಿ ಮೋಹನ ರೆಡ್ಡಿ ಪ್ರಾಚಾರ್ಯರಾದ ಬಸವರಾಜ ಮೊಳಕೀರೆ, ಸುಧಾಕರ ಬಿರಾದಾರ್ ಹರ್ಷ ವ್ಯಕ್ತ ಪಡಿಸಿದ್ದಾರೆ.