“ವಿಶ್ವ ಸ್ಥನ್ಯಪಾನ ಸಪ್ತಾಹ”ಕಾರ್ಯಕ್ರಮ
ಹೂವಿನ ಹಿಪ್ಪರಗಿ:ಆ.8: ಸಮೀಪ ದಿಂಡವಾರ ಗ್ರಾಮದ ಶಿಶುವಿನ ದೈಹಿಕ, ಮಾನಸಿಕ ಸರ್ವತೋಮುಖ ಬೆಳವಣಿಗೆಗೆ ಮಗುವಿಗೆ 6 ತಿಂಗಳವರೆಗೆ ಕೇವಲ ತಾಯಿಯ ಎದೆ ಹಾಲು ಮಾತ್ರ ಕುಡಿಸಬೇಕೆಂದು ಸಮುದಾಯ ಆರೋಗ್ಯ ಅಧಿಕಾರಿ ಶರಣಬಸು ಗುದ್ದಿ ಹೇಳಿದರು. ಅರೋಗ್ಯಮತ್ತು ಕ್ಷೇಮ ಕೇಂದ್ರ ದಿಂಡವಾರದಲ್ಲಿ ಆಗಸ್ಟ್ 7 ರಂದು ಹಮ್ಮಿಕೊಳ್ಳಲಾದ “ವಿಶ್ವ ಸ್ಥನ್ಯಪಾನ ಸಪ್ತಾಹ ” ಕಾರ್ಯಕ್ರಮದಲ್ಲಿ ಮಾತನಾಡಿದರು
ಶಿಶು ಸಂಪೂರ್ಣವಾಗಿ ವಿಕಾಸ
ಹೊಂದಿ ನ್ಯೂಮೊನಿಯಾ, ಅತಿಸಾರಭೇದಿ, ಅಪೌಷ್ಟಿಕತೆ ಇತ್ಯಾದಿ ತೊಂದರೆಗಳಿಂದ ಮಗುವನ್ನು ರಕ್ಷಿಸಲು ಹುಟ್ಟಿದ ಅರ್ಧ ಗಂಟೆಯೊಳಗೆ ತಾಯಿ ಎದೆ ಹಾಲನ್ನು ಕುಡಿಸಬೇಕು, ಹೆರಿಗೆಯಾದ ಮೊದಲ 3 ದಿನದಲ್ಲಿ ಬರುವ ಹಾಲಿನಲ್ಲಿ “ಕೊಲೆಸ್ಟ್ರಮ್” ಎಂಬ ರೋಗನಿರೋಧಕ ಶಕ್ತಿ ಹೆಚ್ಚಿಸುವ ಅಂಶವಿರುತ್ತದೆ, ಮಗುವಿಗೆ ಎದೆ ಹಾಲು ಕುಡಿಸುವುದರಿಂದ ತಾಯಿಗೆ ಸ್ಥನ ಕ್ಯಾನ್ಸರ್ ಬರುವುದಿಲ್ಲ, ಇದು ಮಗುವಿಗೆ ಸರಳವಾಗಿ ಜೀರ್ಣವಾಗುವುದಲ್ಲದೆ ಇದರಿಂದ ತಾಯಿ ಮಗುವಿನ ಬಾಂಧವ್ಯ ಹೆಚ್ಚಾಗುತ್ತದೆ, ಮಗುವಿನ ಬುದ್ಧಿಮಟ್ಟ ಹೆಚ್ಚಾಗುತ್ತದೆ. ಪ್ರತಿದಿನ 08 ರಿಂದ 10 ಬಾರಿ ತಾಯಿಯ ಎದೆಹಾಲು ನೀಡಬೇಕು. ತಾಯಂದಿರಲ್ಲಿ ಎದೆಹಾಲು ಹೆಚ್ಚಾಗಬೇಕಾದರೆ ಪೌಷ್ಟಿಕ ಆಹಾರವನ್ನು ಸೇವಿಸಬೇಕು ಹಾಗೂ ಇದರ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಂಡು ಇತರರಿಗೂ ಮಾಹಿತಿ ನೀಡಬೇಕು ಎಂದರು
ಜಿಲ್ಲೆಯಲ್ಲಿ ಆಗಸ್ಟ್ 01 ರಿಂದ ಆಗಸ್ಟ್ 07 ರವರೆಗೆ “ಕೊರತೆಯನ್ನು ಕೊನೆಗೂಳಿಸಿ, ಸರ್ವರಿಗೂ ಸ್ಥನ್ಯಪಾನದ ಬೆಂಬಲ ನೀಡಿ ” ಎಂಬ ಘೋಷವಾಕ್ಯದೊಂದಿಗೆ ಈ ವರ್ಷ “ವಿಶ್ವ ಸ್ಥನ್ಯಪಾನ ಸಪ್ತಾಹ ” ಕಾರ್ಯಕ್ರಮ ಆಚರಿಸಲಾಗುತ್ತದೆ. ಇದರ ಉದ್ದೇಶ ಪ್ರತಿ ಗರ್ಭಿಣಿ, ಬಾಂಣಂತಿಯರಿಗೆ ಶಿಶುವಿಗೆ ಎದೆಹಾಲು ಕುಡಿಸುವ ಕುರಿತು ಅರಿವು ಮೂಡಿಸುವುದಾಗಿದೆ.
ಇದೆ ಸಂದರ್ಭದಲ್ಲಿ ತಾಲೂಕ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ರಾಜಶೇಖರ್ ಚಿಂಚೋಳಿ ಡೆಂಗು,ಚಿಕುನ್ಗುನ್ಯಾ, ಮಲೇರಿಯಾ ರೋಗಗಳ ಹರಡುವಿಕೆ ಮತ್ತು ನಿಯಂತ್ರಣದ ಕುರಿತು ಮಾತನಾಡಿದರು
ಜಿಲ್ಲಾ ಲಸಿಕಾ ಮೇಲ್ವಿಚಾರಕರಾದ ಧರೆಪ್ಪ ಕಡಬಿ ಅವರು ಲಸಿಕೆಗಳಿಂದ ತಡೆಗಟ್ಟಬಹುದಾದ ರೋಗಗಳ ಬಗ್ಗೆ ಮಾಹಿತಿ ನೀಡಿದರು,
ಈ ಸಂದರ್ಭದಲ್ಲಿ ಸಮುದಾಯ ಆರೋಗ್ಯ ಅಧಿಕಾರಿಗಳಾದ ನಂದಾರೆಡ್ಡಿ, ಆಯಿಷಾ ಅಫ್ಘ್ಹಾನ್, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಹಾಜರಿದ್ದರು.