ಜಮೀನಿಗೆ ಹೋಗುವ ರಸ್ತೆ ದುರಸ್ತಿಗೆ ಕರವೇ ಅಗ್ರಹ
ಸೇಡಂ, ಅ, 08: ತಾಲ್ಲೂಕಿನ ಬೀರನಹಳ್ಳಿ ಗ್ರಾಮದಲ್ಲಿರುವ ರೈತರು ಜಮೀನಿಗೆ ಹೋಗುವ ರಸ್ತೆ ಮಳೆ ಬಂದಿರುವುದರಿಂದ (ಹಣಜಿ) ಹೆಸರು ಮತ್ತು ತೊಗರಿ ಬೇಳೆಗೆ ಔಷಧಿ ಸಿಂಪಡಣೆ ಮಾಡಲು ಎತ್ತಿನ ಬಂಡಿ ರೈತರಿಗೆ ತೊಂದರೆ ಆಗುತ್ತಿದ್ದು ಸಂಬಂಧಪಟ್ಟ ಗ್ರಾಮ ಪಂಚಾಯತ್ ಜಿಪಂ ಹಾಗೂ ತಾಲೂಕ ಅಧಿಕಾರಿಗಳು ಇತ್ತ ಗಮನಹರಿಸಿ ತಕ್ಷಣ ಹಣಜಿ ರಸ್ತೆ ಸರಿಪಡಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ತಾಲೂಕ ಘಟಕ ಪತ್ರಿಕಾ ಮಾಧ್ಯಮ ಸಂಚಾಲಕರಾದ ಗುಂಡಪ್ಪ ಪೂಜಾರಿ ಅವರು ಪತ್ರಿಕಾ ಪ್ರಕಟಣೆಯ ಮೂಲಕ ಒತ್ತಾಯಿಸಿದ್ದಾರೆ.