ಡಾನ್ಸ್ ರಿಯಾಲಿಟಿ ಶೋಗೆ ಮುಸ್ಕಾನ್ ಪಟೇಲ್ ಆಯ್ಕೆ
ಅಫಜಲಪುರ:ಆ.8: ಬೆಂಗಳೂರಿನಲ್ಲಿ ಪ್ರಪ್ರಥಮವಾಗಿ ಖಾಸಗಿ ಸುದ್ದಿವಾಹಿನಿಯೊಂದರ ವಾವ್ ಕರ್ನಾಟಕ ಡಾನ್ಸ್ ರಿಯಾಲಿಟಿ ಶೋಗೆ ಕಲಬುರಗಿ ಜಿಲ್ಲೆಯ ಅಫಜಲಪುರ ಪಟ್ಟಣದ ಅತನೂರಿನ ಆದರ್ಶ ವಿದ್ಯಾಲಯದ(ಆರ್.ಎಂ.ಎಸ್.ಎ) 6 ನೇ ತರಗತಿ ವಿದ್ಯಾರ್ಥಿನಿ ಕು. ಮುಸ್ಕಾನ್ ಪಟೇಲ್ ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿನಿಯ ಸಾಧನೆಗೆ ಸ್ಟಾರ್ ಅಕಾಡೆಮಿ ಡ್ಯಾನ್ಸ್ ತರಬೇತಿ ಕೇಂದ್ರದ ನೃತ್ಯ ಶಿಕ್ಷಕ ಸುನೀಲ ನಿಂಬರಗಿ, ಪೆÇೀಷಕರಾದ ವಾಹಬ್ ಅಲಿ ಪಟೇಲ್, ದಿಲ್ ಶಾದಬಿ ಪಟೇಲ್, ಹಿತೈಷಿಗಳು ಹಾಗೂ ಶಾಲೆಯ ಮುಖ್ಯಗುರುಗಳು ಮತ್ತು ಶಿಕ್ಷಕರು ಹರ್ಷ ವ್ಯಕ್ತಪಡಿಸಿದ್ದಾರೆ.