ವಿದ್ಯುತ ಕಣ್ಣಾ ಮುಚ್ಚಾಲೆ ವಿವಿಧ ಸಂಘಟನೆಯಿಂದ ಪ್ರತಿಭಟನೆ
ಯಡ್ರಾಮಿ:ಆ.8:ತಾಲ್ಲೂಕಿನ ಪ್ರತಿಯೊಂದು ಗ್ರಾಮದಲ್ಲಿ ವಿದ್ಯುತ ಕಣ್ಣಾ ಮುಚ್ಚಾಲೇ ಸಾರ್ವಜನಿಕರು ಪರದಾಡುವ ಪರಸ್ಥಿತಿ ನಿರ್ಮಾಣವಾಗಿದೆ ಎಂದು ತಾಲೂಕು ವಿವಿಧ ಸಂಘಟನೆಗಳಿಂದ ವಿದ್ಯುತ ಇಲಾಖೆ ಮುಂದೆ ಪ್ರತಿಭಟನೆ ಮಾಡಿದರು.
ತಾಲ್ಲೂಕಿನ ವಿದ್ಯುತ ಸಮಯಕ್ಕೆ ಸರಿಯಾಗಿ ಇರದೇ ತಾಲ್ಲೂಕಿನ ಪ್ರತಿಯೊಂದು ಗ್ರಾಮದ ಜನರು ಪರದಾಡುವ ಪರಸ್ಥಿತಿ ಇದ್ದು.ಈಗಾಗಲೇ ಮಾರಕ ರೋಗ ಡೇಂಗೂ,ಮಲೇರಿಯಾ,ಕಾಮಣಿ ರೋಗಗಳು ಮಕ್ಕಳಿಗೆ ಹರಡುತ್ತಿದ್ದು.
ಹಿಂತಹ ಮಳೆಗಾಲದಲ್ಲಿ ಸೊಳ್ಳೆ ಕಾಟದ ಸಂದರ್ಭದಲ್ಲಿ ವಿದ್ಯುತ ಇಲ್ಲದೆ ತಾಲ್ಲೂಕಿನ ಮಕ್ಕಳು ಆಸ್ಪತ್ರೆಗೆ ಸೇರುತ್ತಿದ್ದು ತಕ್ಷಣ 24 ಘಂಟೆಗಳ ಕಾಲ ವಿದ್ಯುತ ಒದಗಿಸಬೇಕು ಎಂದು ಒತ್ತಾಯಿಸಿದ್ದರು.
ಪ್ರತಿಯೊಂದು ಹಳ್ಳಿಗಳ ಟಿ.ಸಿ ಗಳಲ್ಲಿ ಯಾವುದೇ ಬೇಲಿ ನಿರ್ಮಾಣ ಮಾಡದೇ ಅಪಾಯದ ಇದ್ದು ತಕ್ಷಣ ಸುತ್ತಲೂ ಬೇಲಿ ನಿರ್ಮಾಣ ಮಾಡಬೇಕು ಹಾಗೂ ಇಲಾಖೆಯ ಲೈನ್ ಮ್ಯಾನ್ ಇದ್ದು ಖಾಸಗಿ ವ್ಯಕ್ತಿಗಳಿಂದ ಕೆಲಸಾ ಮಾಡಿಸುತ್ತಿದ್ದು.
ಖಾಸಗಿ ಲೈನ್ ಮ್ಯಾನ್ ಗಳಿಗೆ ಯಾವುದೇ ತರಬೇತಿ ಇರುವದಿಲ್ಲ ಅನಾಹುತವಾದರೆ ಯಾರು ಹೊಣೆ ತಕ್ಷಣ ನಿಲ್ಲಿಸಬೇಕು ಎಂದು ಹೇಳಿದರು. ಅನಧಿಕೃತ ವಿದ್ಯುತ ಪಡೆದ ಗ್ರಾಹಕರಿಂದ ಹಣ ಮಾಡುವ ಇಲಾಖೆ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ವಿದ್ಯುತ ಕಾರ್ಯನಿರ್ವಾಹಕ ಅಧಿಕಾರಿ ಯಡ್ರಾಮಿ, ವಿಶ್ವನಾಥ ಮುದ್ದರೆಡ್ಡಿ ಪಿ.ಎಸ್.ಐ ಯಡ್ರಾಮಿ, ಶಪೀ ಉಲ್ಲಾ ದಖನಿ,ಅಮರನಾಥ ಕುಳಗೇರಿ,ಈರಣ್ಣ ಬಜಂತ್ರಿ,ಲಾಳೇ ಸಾಬ್ ಮನಿಯಾರ, ಹಣಮಂತ ಗುತ್ತೇದಾರ,ಜಗದೀಶ ದ್ಯಾಮ್, ಹಣಮಂತ್ರಾಯಗೌಡ ಕಡಕೋಳ, ಸಲೀಮ್ ಕಡಕೋಳ,ಮುತ್ತು ಯಡ್ರಾಮಿ, ಅಕ್ಷಯಕುಮಾರ, ನಾಗು ದೊಡಮನಿ ಇತರರು ಇದ್ದರು.