ಸುಕಿ ಸಂಸ್ಥೆಯಿಂದ ಸರ್ವಜ್ಞ ಕಾಲೇಜಿನಲ್ಲಿ ಶ್ರಾವಣ ಸಂಜೆಯ ರಸಮಂಜರಿ
ಕಲಬುರಗಿ:ಆ.8:ಶ್ರಾವಣ ಮಾಸ ಸುತ್ತಲು ಹಸಿರಿನ ವಾತಾವರಣ ತರುವುದರಿಂದ ಕಣ್ಣಿಗೆ ತಂಪು ಮನಸ್ಸಿಗೆ ಉಲ್ಲಾಸ ನೀಡಲು ನಗರದ ಸುಕಿ ಸಾಂಸ್ಕøತಿಕ ಸಂಸ್ಥೆ ಪ್ರತಿಷ್ಟಿತ ಸರ್ವಜ್ಞ ಕಾಲೇಜಿನಲ್ಲಿ ಶ್ರಾವಣ ಸಂಜೆ ನಿಮಿತ್ಯ ವಿದ್ಯಾರ್ಥಿಗಳಿಗೆ ರಸಮಂಜರಿ ಕಾರ್ಯಕ್ರಮ ಬಹಳ ಅಚ್ಚುಕಟ್ಟಾಗಿ ನಡೆಸಿಕೊಟ್ಟರು.
ಸರ್ವಜ್ಞ ಕಾಲೇಜಿನ ಸಂಸ್ಥಾಪಕರಾದ ಪೆÇ್ರ ಚನ್ನಾರೆಡ್ಡಿ ಪಾಟೀಲ ಅವರು ಸುಕಿ ತಂಡವನ್ನು ಬಲು ಆತ್ಮೀಯತೆಯಿಂದ ಬರಮಾಡಿಕೊಂಡು ಕಾಲೇಜಿನ ಮಕ್ಕಳಿಗೆ ಮನ ಸಂತೋಷಿಸಲು ಅನುವು ಮಾಡಿ ಕೊಟ್ಟು ಸರ್ವರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಸುಕಿ ಸಂಗೀತ ತಂಡ ಉತ್ತಮ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡುತ್ತಿರುವುದಕ್ಕೆ ಖುಷಿ ತಂದಿದೆ ಎಂದು ಹೇಳಿದರು.
ಡಿಗ್ರಿ ಕಾಲೇಜಿನ ಪ್ರಾಚಾರ್ಯರಾದ ಪ್ರಭುಗೌಡ ಪಿಯು ಕಾಲೇಜಿನ ಪ್ರಾಚಾರ್ಯರಾದ ಪ್ರಶಾಂತ ಕೆ ಅವರು ಮನ ತುಂಬಿ ಹರಸಿದರು.
ಆರಂಭದಲ್ಲಿ ಸುಕಿ ಸಂಸ್ಥೆಯ ಅಧ್ಯಕ್ಷ ಕಿರಣ್ ಪಾಟೀಲ ಅವರು ಸಂಸ್ಥೆ ನಡೆದು ಬಂದ ಹಾದಿ ಹಾಕಿಕೊಳ್ಳುತ್ತಿರುವ ಕಾರ್ಯಕ್ರಮಗಳು ಜನರ ಸ್ಪಂದನೆ ಕುರಿತು ವಿವರಿಸಿ ವಿಜಯಪುರ ಸಿದ್ದೇಶ್ವರ ಶ್ರೀಗಳ ಕುರಿತು ರಚನೆಯಾದ ಸಂತನೆಂದರೆ ಯಾರು ಹಾಡು ಹೇಳಿ ಮನಪೂರ್ವಕವಾಗಿ ಭಕ್ತಿ ಸಲ್ಲಿಸಿ ಇದು 85 ನೇಯ ವೇದಿಕೆಯಲ್ಲಿ ಶ್ರೀಗಳ ಹಾಡನ್ನು ಹೇಳಿದ ನಾನೆ ಧನ್ಯಾ ಎಂದು ಹೇಳಿದಾಗ ಕಾಲೇಜಿನ ಸಭಾಂಗಣಲ್ಲಿ ಚಪ್ಪಾಳೆಗಳ ಹರ್ಷೋದ್ಗಾರ ಮುಗಿಲು ಮುಟ್ಟಿತು.
ಜೊತೆಗೆ ತಂಡದ ಗಾಯಕರಾದ ಕವಿರಾಜ ಶರಣು ಅಂಬರೀಶ ಆನಂದ ಪ್ರಕಾಶ್ ಮಹೇಶ ಕಾವೇರಿ ಅನ್ನಪೂರ್ಣ ಸಂಜೀವ್ ಮತ್ತು ಎಂ ನಾರಾಯಣ ಅವರುಗಳೊಂದಿಗೆ ಪೆÇ್ರ ಚನ್ನರೇಡ್ಡಿ ಪಾಟೀಲ ಅವರು ಮಕ್ಕಳೊಂದಿಗೆ ಬಹಳೇ ಸುಶ್ರಾವ್ಯವಾಗಿ ಭಾವಗೀತೆ ಹಾಡಿದರುಕಾಲೇಜಿನ ಜೀವಶಾಸ್ತ್ರ ಉಪನ್ಯಾಸಕ ಶಶಿಕಾಂತ ನಾರೋಣ ಕಾಲೇಜಿನ ರಾಜ್ಯ ಶಾಸ್ತ್ರ ಪ್ರಾಧ್ಯಾಪಕರಾಗಿ ಭೀಮರಾಯ ಅರಕೇರಿ ಚನ್ನಾರೇಡ್ಡಿ ಪಾಟೀಲರ ಮೊಮ್ಮಗಳಾದ ಅವಿರಾ ಹಾಡಿ ಸಭಾಂಗಣದಲ್ಲಿ ಹಾಜರಿದ್ದ ಪ್ರೇಕ್ಷಕರನ್ನು ಖುಷಿ ಗೊಳಿಸಿದರು.
ವಿದ್ಯಾರ್ಥಿನಿ ಜಸ್ಟಿಸ್ ಶಿವರಾಜ ಪಾಟೀಲರ ಕುರಿತು ಮಾತನಾಡಿ ಇತರ ಮಕ್ಕಳಿಗೂ ಪ್ರೇರೇರಕ ದಾಯವಾಗಿ ಮಾತನಾಡಿದಳು. ಆರಂಭದಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಂದ ವಚನ ಗಾಯನದ ಮೂಲಕ ಪ್ರಾರ್ಥನೆ ನೆರವೇರಿತು.
ಬಹಳೇ ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ಕನ್ನಡ ಉಪನ್ಯಾಸಕಿ ಡಾಕ್ಟರ್ ವಿದ್ಯಾವತಿ ಅವರು ನಡೆಸಿಕೊಟ್ಟರು.
ಕೊನೆಯಲ್ಲಿ ಕಾಲೇಜಿನ ಗಣಿತ ಉಪಾನ್ಯಸಕಿ ತ್ರಿವೇಣಿ ಬಾವಿ ಅವರು ವಂದನಾರ್ಪಣೆ ಸಲ್ಲಿಸಿದರು